ಶಿಸ್ತುಕ್ರಮಕ್ಕೆ ಸಿಇಒ ಹಿಂದೇಟು ಭ್ರಷ್ಟರಿಗೆ ಆನೆಬಲ ತಂದಿದೆಯೇ?

ಬಡವರ ಹೊಟ್ಟೆಗೆ ಕನ್ನ.. ಭ್ರಷ್ಟರ ಜೇಬಿಗೆ ‘ಪೂಜಾರ್’ ಸಾಕ್ಷಾತ್ಕಾರ!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮಾ:10 ಸಂಚಿಕೆ -02

ನೋಡಿ, ಇದು ನಮ್ಮ ಹೆಮ್ಮೆಯ ಕೊಪ್ಪಳ ಜಿಲ್ಲಾ ಪಂಚಾಯತಿಯ ಅಸಲಿ ಮುಖವಾಡ. ಕುಕನೂರು ತಾಲೂಕಿನ ಹನ್ನೆರಡು ಗ್ರಾಮ ಪಂಚಾಯತಿಗಳಲ್ಲಿ ಬಡವರ ಹೊಟ್ಟೆಗೆ ಬೀಳಬೇಕಿದ್ದ ‘ನರೇಗಾ’ ಕಾಸು ಹೇಗೆ ಲೂಟಿಯಾಗಿದೆ ಅನ್ನೋದನ್ನ ‘ರಣಬೇಟೆ’ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಹಿರೇಬಿಡನಾಳದಿಂದ ಬೆನಕಲ್‌ವರೆಗೆ, ಯರೇಹಂಚಿನಾಳದಿಂದ ತಳಕಲ್‌ವರೆಗೆ ಹರಡಿರುವ ಈ ಭ್ರಷ್ಟಾಚಾರದ ಜಾಲ ಅಂತಿಂತದ್ದಲ್ಲ. ಇದು ಬರೋಬ್ಬರಿ ನಾಲ್ಕು ವರ್ಷಗಳ (2020-24) ಆಡಿಟ್ ವರದಿಯಲ್ಲಿ ದಾಖಲಾಗಿರುವ ‘ಸರಕಾರಿ ಲೂಟಿ’ಯ ಕಥೆ!
​ಹಾಗಾದರೆ ಈಗ ಅಲ್ಲಿ ಆಗುತ್ತಿರುವುದಾದರೂ ಏನು? ಕಥೆ ಇಲ್ಲಿಗೆ ನಿಂತಿಲ್ಲ…


‘ಮಾರ್ಚ್’ ಮೋಜು ಮತ್ತು ತಣ್ಣಗಾದ ತನಿಖೆ!
​ಒಂಬಡ್ಸ್‌ಪರ್ಸನ್ ಕೋರ್ಟ್‌ನಿಂದ ಮೂರು-ಮೂರು ಬಾರಿ ನೋಟಿಸ್ ಹೋದರೂ, ಈ ಹನ್ನೆರಡು ಪಂಚಾಯತಿಗಳ ಪಿಡಿಒಗಳು ಕ್ಯಾರೇ ಅಂದಿಲ್ಲ. ಅವರು ಎಷ್ಟು ಪವರ್‌ಫುಲ್ ಅಂದರೆ, ಒಂಬಡ್ಸ್‌ಪರ್ಸನ್ ಆದೇಶವನ್ನೇ ಕಸದ ಬುಟ್ಟಿಗೆ ಎಸೆದಿದ್ದಾರೆ. ಆ ಕಡೆ ಸಿಇಒ ವರ್ಣಿತ ನೇಗಿ ಅವರ ಟೇಬಲ್ ಮೇಲೆ ಶಿಸ್ತುಕ್ರಮದ ಫೈಲುಗಳು ಬಂದು ಬಿದ್ದಿವೆ. ಮತ್ತು ತಮ್ಮ ಕಚೇರಿಯೊಂದಲೇ ತಮ್ಮ ಅನುಮೊದನೆಯೊಂದಿಗೆ ಐದು ಪತ್ರಗಳ ಇಒ ಸಂತೋ಼ಷರವರ ಕಚೇರಿ ತಲುಪಿವೇ ಆದರೂ ಯಾಕೆ ಇಸ್ಷು ಅಸಡ್ಡೆ ಕ್ರಮ ಕೈಗೊಳ್ಳುಲು ಸಿಇಒ ಅವರು ಈಗಲೂ ಪರ್ವತದಂತೆ ಅಚಲವಾಗಿ ಕುಳಿತಿದ್ದಾರೆ!
​ಇಲ್ಲಿದೆ ನೋಡಿ ಅಸಲಿ ಕಿಲಾಡಿತನ
ಈಗ ಮಾರ್ಚ್ ತಿಂಗಳು ಬಂದಿದೆ. ಜಿಲ್ಲಾ ಪಂಚಾಯತಿಯಲ್ಲಿ ಈಗ ಹಬ್ಬದ ವಾತಾವರಣ! ಹಳೆ ಬಿಲ್‌ಗಳನ್ನು ಕ್ಲಿಯರ್ ಮಾಡಬೇಕು, ಹೊಸ ಅನುದಾನಕ್ಕೆ ಗುದ್ದಲಿ ಪೂಜೆ ಮಾಡಬೇಕು. ಈ ‘ಬಿಲ್ ಪಾಸಿಂಗ್’ ದಂಧೆಯಲ್ಲಿ ಜಿಲ್ಲಾಪಂಚಾಯತಿ ಕಚೇರಿ ಎಷ್ಟು ಬ್ಯುಸಿ ಆಗಿದೆಯೆಂದರೆ, ಭ್ರಷ್ಟಾಚಾರ ಸಾಬೀತಾಗಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಅವರಿಗೆ ನೆನಪೇ ಇಲ್ಲ.


ಸಂತೋಷ್ ಬಿರಾದಾರ್ ಎಂಬ ‘ಕುಕನೂರು ಕುಳ’:
ಇನ್ನು ಈ ಕುಕನೂರು ತಾಲೂಕಿನ ಇಒ ಸಂತೋಷ್ ಬಿರಾದಾರ್ ಕಥೆ ಕೇಳಿ. ಕಳೆದ ಐದಾರು ವರ್ಷಗಳಿಂದ ವರ್ಗಾವಣೆಯಾಗದೆ ಇಲ್ಲೇ ಅಂಟಿಕೊಂಡು ಕುಳಿತಿರುವ ಈ ಮಹಾಶಯರಿಗೆ ಕುಕನೂರು ಅಕ್ಷರಶಃ ಸ್ವಂತ ಆಸ್ತಿಯಾಗಿಬಿಟ್ಟಿದೆ. ಜಿಲ್ಲಾ ಪಂಚಾಯತಿಯಿಂದ ಭ್ರಷ್ಡ ಪಿಡಿಒಗಳ ವಿರುದ್ಧ ವಿಚಾರಣೆಗೆ ಐದಾರು ನೋಟಿಸ್‌ಗಳು ಬಂದರೂ, ಆ ನೋಟಿಸ್‌ಗಳನ್ನು ಹಳೆಯ ಪೇಪರ್‌ನಂತೆ ಗುಡಿಸಿ ಹಾಕುತ್ತಿರುವ ಈತನ ದರ್ಪಕ್ಕೆ ರಾಜಕೀಯದ ‘ಟಾನಿಕ್’ ಕಾರಣವೇ? ಭ್ರಷ್ಟ ಪಿಡಿಒಗಳನ್ನು ರಕ್ಷಿಸುವುದೇ ಈತನ ದಿನನಿತ್ಯದ ಕಾಯಕವಾಗಿಬಿಟ್ಟಿದೆ.


ಸಹಾಯಕ ಕಾರ್ಯದರ್ಶಿ ಪೂಜಾರ್ ಎಂಬ ‘ವಸೂಲಿ ರಾಜ’
ಈ ಲೂಟಿಕೋರರ ಗ್ಯಾಂಗ್‌ಗೆ ಜಿಲ್ಲಾ ಪಂಚಾಯತಿಯಲ್ಲಿ ಬೆನ್ನೆಲುಬಾಗಿ ನಿಂತಿರುವುದು ಸಹಾಯಕ ಕಾರ್ಯದರ್ಶಿ ಎ.ಎಸ್. ಪೂಜಾರ್. ಹಿಂದೆ ಆರ್‌ಡಿಪಿಆರ್ ಸಿಬ್ಬಂದಿಗಳ ಅನುಮೋದನೆಗೆ ತಲಾ 10,000 ರೂಪಾಯಿ ಲೂಟಿ ಮಾಡುತ್ತಿದ್ದಾಗ ಇವರ ವಿಡಿಯೋಗಳು ಅವರ ಸಿಬ್ಬಂಧಿಗಳಿಂದಲೇ ಪತ್ರಕರ್ತರ ಕೈ ಸೇರಿದ್ದವು. ಅಂತಹ ‘ಧನಪಿಶಾಚಿ’ ಪೂಜಾರ್ ಈಗ ಭ್ರಷ್ಟಾಚಾರದ ಪ್ರಕರಣಗಳನ್ನು ಒಳಗಿಂದೊಳಗೆ ಮುಚ್ಚಿ ಹಾಕುವ ಎಕ್ಸ್‌ಪರ್ಟ್ ಆಗಿ ಬದಲಾಗಿದ್ದಾರೆ. ಪೂಜಾರ್ ನಂತಹ ಲೂಟಿಕೋರರ ಮೇಲೆ ಲೋಕಾಯುಕ್ತದ ಹದ್ದಿನ ಕಣ್ಣು ಬೀಳಲೇಬೇಕು. ಬಿರಾದಾರ್ ಮತ್ತು ಪೂಜಾರ್ ಎಂಬ ಈ ‘ಅಪವಿತ್ರ ಜೋಡಿ’ಯಿಂದಾಗಿ ನಿಷ್ಠಾವಂತ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಮಾರ್ಚ್ ತಿಂಗಳ ಮೋಜಿನಲ್ಲಿ ಮುಳುಗಿರುವ ಇವರ ಕಳ್ಳಾಟವನ್ನು ‘ರಣಬೇಟೆ’ ಸುಮ್ಮನೆ ಬಿಡುವುದಿಲ್ಲ. ಭ್ರಷ್ಟರ ಈ ಕೋಟೆಯನ್ನು ಚೂರುಚೂರು ಮಾಡುವವರೆಗೆ ನಮ್ಮ ಸಮರ ನಿಲ್ಲದು.
​ಸಿಇಒ ಅವರೇ, ನೀವು ತನಿಖೆ ಮಾಡ್ತೀರಾ ಅಥವಾ ಭ್ರಷ್ಟರ ಈ ಲೂಟಿಗೆ ಆಶೀರ್ವಾದ ಮಾಡ್ತೀರಾ?

ಮುಂದಿನ ಸಂಚಿಕೆಯಲ್ಲಿ ಕೊಪ್ಪಳ ಜಿ.ಪಂ. ನ CAO ಅಮಿನ್‌ ಅತ್ತಾರರ ಸಾಮ್ರಜ್ಯದ ಅಸಲಿ ಆಟ ಭಾಗ -02

ಭ್ರಷ್ಟಾಚಾರಿಗಳ ರಕ್ಷಣೆಗೆ ನಿಂತ ಸಹಾಯಕ ಕಾರ್ಯದರ್ಶಿ ಎ.ಎಸ್. ಪೂಜಾರ್ ಸರಣಿ ವರದಿ ನಿರಿಕ್ಷೀಸಿ.

error: Content is protected !!
Scroll to Top