
ಸಾರಿಗೆ ಇಲಾಖೆ ಎಡವಟ್ಟು; ಸಾರ್ವಜನಿಕರ ಪರದಾಟ.
ರಣಬೇಟೆ ನ್ಯೂಸ್
ಕೊಪ್ಪಳ
ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಕಚೇರಿಯೊಂದಡೆ ಹಾಗೂ ಚಾಲನಾ ಪರವಾಗಿ ಪರೀಕ್ಷಾ ಮತ್ತು ವಾಹನ ನೋಂದಣಿ ತಪಾಸಣಾ ಸ್ಥಳ ಇನ್ನೊಂದಡೆ ಇದ್ದು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ ಜಿಲ್ಲಾ ಕೇಂದ್ರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯಕ್ಕೆ ದಿನನಿತ್ಯ ಹಲವಾರು ಕೆಲಸದ ನಿಮಿತ್ಯ ಸಾರ್ವಜನಿಕರು ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸುವುದು ಸಾಮಾನ್ಯವಾಗಿ ಸಂಗತಿಯಾಗಿದ್ದು ಆದರೆ ಅದರಲ್ಲಿ ಬಹುತೇಕ ಜನರು ವಾಹನ ಚಾಲನಾ ಪರವಾನಿಗೆ ಪತ್ರದ ಉದ್ದೇಶ ಹಾಗೂ ತಮ್ಮ ನೂತನ ಹಾಗೂ ನವೀಕರಣಗೊಂಡ ವಾಹನಗಳ ತಪಾಸಣೆಗೆಂದು ಆಗಮಿಸುವ ಸಾರ್ವಜನಿಕರಿಗೆ ಅಚ್ಚರಿಯ ಸಂಗತಿ ಎಂದು ಕಾದಿರುತ್ತದೆ. ತಮ್ಮ ವಾಹನ ಚಾಲನಾ ಪರವಾನಿಗೆ ಮತ್ತು ವಾಹನ ನೋಂದಣಿಗೆ ಸಂಬಂಧಿಸಿದಂತೆ ದಾಖಲಾತಿಗಳ ನೋಂದಣಿ ಕಾರ್ಯ ಕಚೇರಿಯಲ್ಲಿ ಮುಗಿಯುತ್ತಿದ್ದಂತೆಯೇ ಮುಂದಿನ ಪ್ರಕ್ರಿಯೆಗಾಗಿ ಹಳೆಯ ಕಚೇರಿಯ ಆವರಣಕ್ಕೆ ತೆರಳುವಂತೆ ಕಾರ್ಯಾಲಯದ ಸಿಬ್ಬಂದಿಗಳು ಸೂಚನೆ ನೀಡುತ್ತಿದ್ದು ಮತ್ತೆ ಇನ್ನೆಲ್ಲಿ ಹೋಗಬೇಕು ಎಂಬುದ ಸಾರ್ವಜನಿಕರ ಗೊಂದಲಕ್ಕೀಡು ಮಾಡುತ್ತಿರುವ ಸಂಗತಿಯಾಗಿದ್ದು ವಾಹನ ಚಾಲನ ಪರವಾನಗಿ ಹಾಗೂ ವಾಹನಗಳ ತಪಾಸಣಾ ಸ್ಥಳ ಹೊಸಪೇಟೆ ರಸ್ತೆಯ ನಗರದ ಹೊರವಲಯದಲ್ಲಿದ್ದು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಕನಿಷ್ಠ ಮೂರು ಕಿಲೋಮೀಟರ್ಗಳಷ್ಟು ದೂರದಲ್ಲಿದ್ದು ತಮ್ಮ ಕೆಲಸ ಕಾರ್ಯಗಳು ಆಗಮಿಸುವ ಸಾರ್ವಜನಿಕರು ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಇಡಿ ಶಾಪ ಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಇನ್ನು ನಗರದ ಹೊರ ವಲಯದ ಹೊಸಪೇಟೆ ರಸ್ತೆಯ ಎಡಬಾಗದ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಹಳೆ ಕಚೇರಿಯ ಆವರಣದಲ್ಲಿ ಅಧಿಕಾರಿಗಳು ನೋಂದಣಿಗಾಗಿ ಆಗಮಿಸಿದ ವಾಹನಗಳ ಹಾಗೂ ವಾಹನ ಚಾಲನ ಪರವಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದು ಇಲ್ಲಿ ಯಾವುದೇ ನೀರು ಹಾಗೂ ನೆರಳಿನ ವ್ಯವಸ್ಥೆ ಇಲ್ಲದೆ ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರು ಅಕ್ಷರ ಸಹ ಗೋಳಾಡುವ ಪರಿಸ್ಥಿತಿ ಕಂಡುಬರುತ್ತದೆ. ಸಾಮಾನ್ಯವಾಗಿ ಒಂದು ವಾಹನ ಪರವಾನಿಗೆಗೆ ಕನಿಷ್ಠ 1200/-ರೂಪಾಯಿಗಳ ಶುಲ್ಕವನ್ನು ವಿಧಿಸುತ್ತಿದ್ದು ಸಾರ್ವಜನಿಕರು ಮೊದಲೇ ಕಚೇರಿ ಹಾಗೂ ಪರೀಕ್ಷಾ ಸ್ಥಳಗಳಿಗೆ ಅಲೆದಾಡಿ ಬೇಸತ್ತು ರೋಸಿಹೋಗಿರುತ್ತಾರೆ ಅದರ ಜೊತೆ ಪರೀಕ್ಷಾ ಸ್ಥಳದಲ್ಲಿ ಕನಿಷ್ಠ ಪಕ್ಷ ನೀರಿನ ವ್ಯವಸ್ಥೆ ಕೂಡ ಇಲ್ಲದೆ ಇರುವುದು ವಿಪರ್ಯಾಸದ ಸಂಗತಿಯಾಗಿದ್ದು ಬೇಸಿಗೆ ಸಂದರ್ಭದಲ್ಲಿ ಮನೆಯ ಮಾಳಿಗೆ ಸೇರಿದಂತೆ ಸಾಧ್ಯವಾದ ಕಡೆಗಳಲ್ಲೆಲ್ಲ ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಿ ಎಂದು ಹೇಳಿಕೊಳ್ಳುವ ಸರ್ಕಾರದ ಆ ದಿನದ ಕಾರ್ಯಾಲಯದ ಕೆಲಸದ ಸ್ಥಳದಲ್ಲಿಯೇ ಸಾರ್ವಜನಿಕರು ನೀರಿಗಾಗಿ ಪರದಾಡುವುದು ನಿಜಕ್ಕೂ ಸೂಚನೆಯ ಸಂಗತಿಯಾಗಿದ್ದು ಜೊತೆಗೆ ಈ ಸ್ಥಳದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳಿಲ್ಲದೆ ಇರುವುದರಿಂದ ನೀರು ಕುಡಿಯಲು ಸಹ ಸಾರ್ವಜನಿಕರು ಕಿಲೋ ಮೀಟರ್ ಗಟ್ಟಲೆ ದೂರ ಹೋಗಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಇತ್ತೀಚಿನ ಕೆಲ ವರ್ಷಗಳ ಹಿಂದೆ ಅಷ್ಟೇ ನಗರದಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಕಟ್ಟಡ ಲೋಕಾರ್ಪಣೆಗೊಂಡಿದ್ದು ಈ ಕಟ್ಟಡದ ಹತ್ತಿರ ಪರೀಕ್ಷಾ ಸ್ಥಳ ಮಾಡದೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು ಅವೈಜ್ಞಾನಿಕವಾಗಿ ಕಾರ್ಯಾಲಯದ ಕಟ್ಟಡ ನಿರ್ಮಿಸಿದ್ದು ಸಾರ್ವಜನಿಕರು ಪರದಾಡುವ ಪರಿಸ್ಥಿತಿಗೆ ಕಾರಣವಾಗಿದೆ. ಜನರ ಅನುಕೂಲಕ್ಕೆ ತಕ್ಕಂತೆ ಕಚೇರಿ ಕಾರ್ಯಾಲಯಗಳನ್ನು ನಿರ್ಮಿಸಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೊಪ್ಪಳ ನಗರದ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಸಾರ್ವಜನಿಕರು ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಹಾಡಿ ಹೊಗಳುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಮುಂದಾದರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಚೇರಿ ಸ್ಥಳ ಹಾಗೂ ಪರೀಕ್ಷಾ ಸ್ಥಳಗಳನ್ನು ಒಂದೇ ಕಡೆಗಳಲ್ಲಿ ಕಾರ್ಯನಿರ್ವಹಿಸುವತ್ತ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.