
ರಣಬೇಟೆ ನ್ಯೂಸ್ ಕೊಪ್ಪಳ
ಕೊಪ್ಪಳ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ, ರಾಜಕೀಯ ಚತುರ, ಅಭಿವೃದ್ಧಿಯ ಹರಿಕಾರ ಎಂದೆಲ್ಲ ಕರೆಸಿಕೊಳ್ಳುವ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸರ್ಕಾರದಲ್ಲಿ ಸರಿಯಾದ ಅವಕಾಶ ಸಿಗಲಿಲ್ಲವೇನೋ ಎಂಬ ಮಾತುಗಳು ಕ್ಷೇತ್ರದ ಮತದಾರರು ಮಾತನಾಡುತ್ತಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದು. ರಾಜ್ಯದಲ್ಲಿ ಯಾರೂ ಮಾಡದಂತಹ ಅಭಿವೃದ್ಧಿಯನ್ನು ಮಾಡಿದರು ಸಹ ಅವರಿಗೆ ಸರ್ಕಾರ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಕೊರಗು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜನತೆಯನ್ನು ಕಾಡುತ್ತಿದೆ.
ಸುಮಾರು ಏಳು ಬಾರಿ ಶಾಸಕರಾಗಿ ಹಲವು ಬಾರಿ ಸಚಿವರಾಗಿ, ಸಂಸದರಾಗಿ ನಿರ್ವಹಿಸಿ ಅಪಾರ ಅನುಭವವುಳ್ಳ ಜನಪ್ರಿಯ ರಾಜಕಾರಣಿ ಬಸವರಾಜ ರಾಯರೆಡ್ಡಿ ಅವರಿಗೆ ಮಂತ್ರಿಮಂಡಲದಲ್ಲಿ ಅನೇಕ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೊರಗು ಕ್ಷೇತ್ರದ ಮತದಾರರನ್ನು ಕಾಡುತ್ತಿದ್ದು, ರಾಯರೆಡ್ಡಿ ಅವರ ವರ್ಚಸ್ಸು ನೋಡಿದರೆ ಅವರು ಏನೆಲ್ಲಾ ಸ್ಥಾನಮಾನಗಳನ್ನು ಅಲಂಕರಿಸಬಹುದಿತ್ತು ಎಂದು ಯೋಚನೆ ಮಾಡಲು ಸಹ ಸಾಧ್ಯವಾಗದಷ್ಟು ಪ್ರಭುದ್ಧ ರಾಜಕಾರಣಿಯಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಯಾವುದೇ ಸ್ಥಾನಮಾನ ಸಿಗದೇ ಇರುವುದು ಹಾಗೂ ಸಮಾಧಾನಕ್ಕೆ ಎಂಬಂತೆ ಮುಖ್ಯಮಂತ್ರಿಗಳ ಆರ್ಥಿಕ ಸ್ಥಾನಮಾನ ನೀಡಿದ್ದು ಅವರ ಅಭಿಮಾನಿಗಳಲ್ಲಿ ನಿರಾಶೆಯ ಮನೆ ಮಾಡಿದೆ.
ರಾಜ್ಯದ ಮುಖ್ಯಮಂತ್ರಿಗಳು ಹಲವಾರು ಸಭೆ ಸಮಾರಂಭಗಳಲ್ಲಿ ತಾವೇ ಹೇಳಿಕೊಳ್ಳುತ್ತಿರುವ ವಿಚಾರವೇನೆಂದರೆ ರಾಯರೆಡ್ಡಿ ಒಬ್ಬ ರಾಜಕೀಯ ಚತುರನಾಗಿದ್ದು, ಈ ವ್ಯಕ್ತಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯನ್ನು ತಾವು ಸಹ ತಮ್ಮ ಕ್ಷೇತ್ರದಲ್ಲಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಅಂತಹ ರಾಜಕೀಯ ಮುತ್ಸದ್ದಿ ರಾಯರೆಡ್ಡಿ ಆಗಿದ್ದು. ಅದು ಹೇಗೆ ಕಾರ್ಯನಿರ್ವಹಿಸುತ್ತಾರೆ ಗೊತ್ತಿಲ್ಲ ಆದರೆ ತಮ್ಮ ಕ್ಷೇತ್ರಕ್ಕೆ ಬೇಕಾಗುವ ಎಲ್ಲಾ ಸರ್ಕಾರಿ ಸೌಲಭ್ಯವನ್ನು ಮಂಜೂರು ಮಾಡಿಕೊಂಡು ಬರುವ ಚಾಕಚಕ್ಯತೆ ರಾಯರೆಡ್ಡಿ ಅವರಲ್ಲಿದ್ದು ಅವರು ಅಭಿವೃದ್ಧಿ ಹರಿಕಾರರೆಂದರೆ ತಪ್ಪಾಗಲಾರದು ಎಂದು ಸಿದ್ದರಾಮಯ್ಯನವರೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ.

ಇಷ್ಟೆಲ್ಲ ನಿಪುಣತೆ ಹೊಂದಿರುವ ಬಸವರಾಜ ರಾಯರೆಡ್ಡಿ ಅವರು ಸರ್ಕಾರದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಅವರ ಕಾರ್ಯಕ್ಷೇತ್ರವನ್ನು ಕೇವಲ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿದೆ ಇಡೀ ರಾಜ್ಯದ್ಯಂತ ಅವರ ಅಭಿವೃದ್ಧಿ ಕಾರ್ಯಗಳ ಅವಶ್ಯಕತೆ ಇದ್ದು ಅವರ ಯೋಗ್ಯತೆಗೆ ತಕ್ಕ ಸ್ಥಾನವಿಲ್ಲ ಎಂಬುದು ಅವರ ಕಾರ್ಯಕರ್ತರ ಕೊರಗಾಗಿದೆ. ಜೊತೆಗೆ ಮಂತ್ರಿಮಂಡಲ ಮಾತ್ರವಲ್ಲ ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲಾ ಅರ್ಹತೆ ಹೊಂದಿರುವ ಉತ್ತರ ಕರ್ನಾಟಕದ ಅಭ್ಯರ್ಥಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.
ಇದರೊಂದಿಗೆ ಪಕ್ಷದ ಎಲ್ಲಾ ಬಣಗಳು, ಎಲ್ಲಾ ಜಾತಿಯ ಮುಖಂಡರೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದು ಎಲ್ಲರ ಜೊತೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೆ ಹೈಕಮಾಂಡ್ ಜೊತೆಗೆ ಸಹ ಉತ್ತಮ ಒಡನಾಟ ಹೊಂದಿರುವ ಸೂಕ್ತ ಸ್ಥಾನಮಾನ ನೀಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಂದಾಳು ಎನಿಸಿಕೊಂಡಿರುವ ಕೆಲವು ಮುಖಂಡರು ಇವರ ಕಾರ್ಯ ವೈಕರಿಯ ಮುಂದೆ ಮಂಕಾಗಿ ಇವರೇ ಸರ್ವೋಚ್ಚ ನಾಯಕರಾಗಿ ಹೊರಹೊಮ್ಮುವುದರಿಂದ ಇವರಿಗೆ ಸೂಕ್ತ ಅವಕಾಶ ನೀಡುತ್ತಿಲ್ಲ ಎಂಬ ಅಪವಾದವನ್ನು ಸಹ ರಾಯರೆಡ್ಡಿ ಅಭಿಮಾನಿ ಬಳಗದಿಂದ ಕೇಳಿ ಬರುತ್ತಿರುವ ಸಾಮಾನ್ಯ ಮಾತಾಗಿದೆ.
ಏನೇ ಆದರೂ ಅಭಿವೃದ್ಧಿ ಹೆಸರಿನಲ್ಲಿ ಜಯಶೀಲರಾಗಿ ನಂತರ ತಮ್ಮ ಜಯಕ್ಕೆ ಕಾರಣರಾದ ಮತದಾರರನ್ನೇ ಮರೆತುಬಿಡುವ ಇಂದಿನ ರಾಜಕಾರಣಿಗಳ ಮಧ್ಯೆ ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಚಿಂತಿಸಿ ಕ್ಷೇತ್ರವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯುತ್ತಿರುವ ಇಂತಹ ಸರಳ, ಸಜ್ಜನಿಕೆ ವ್ಯಕ್ತಿತ್ವದ ರಾಜಕಾರಣಿಗೆ ಶೀಘ್ರದಲ್ಲಿ ಸೂಕ್ತ ಸದಾವಕಾಶಗಳು ಒದಗಿ ಇಡೀ ರಾಜ್ಯವೇ ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದೇ ನಮ್ಮ ಆಶಯ.