ರಣಬೇಟೆ ನ್ಯೂಸ್
ಕೊಪ್ಪಳ
ಪ್ರಾದೇಶಿಕ ಸಾರಿಗೆ ಕಚೇರಿ ಎಂದರೇ ಅಷ್ಟೇ ಅಲ್ಲ. ಮಧ್ಯವರ್ತಿಗಳ ಮೂಲಕ ಸರ್ಕಾರಕ್ಕೆ ವಂಚನೆ, ದಗಾ, ಹಿಂಡು ಹಿಂಡು ಜನ, ಚಿಕ್ಕ ತಪ್ಪು, ದೊಡ್ಡ ಆದಾಯ! ಓದುಗರಿಗೆ ಇದು ಸಾಮನ್ಯ ಸುದ್ಧಿ ಆದರೆ ಇದು ಸಾವಿರ ಕೊಳವೆಗಳ ಹುತ್ತ. ಯಾಮಾರಿದರೆ ಕಚೇರಿಯಲ್ಲಿ ಕೂಡಿ ಹಾಕುವ ಕೆಲಸದಿಂದ ಹಿಡಿದು ಹಲ್ಲೆ ಮತ್ತು ನಕಲಿ ಪ್ರಕರಣ ಅದಕ್ಕೂ ಹೆದರದಿದ್ದರೇ! ಆರ್ ಟಿ ಓ ಕಚೇರಿಯ ಮಾಜಿ ಅಧಿಕಾರಿ ಹಾಲಿ ಕಚೇರಿ ಕಪಿಮುಷ್ಟಿ ನಿಯಂತ್ರಕರೊಬ್ಬರ ಬಲಗೈ-ಎಡಗೈ ಬಂಟರಿಂದ ಬೆದರಿಗೆ ಅವರಿಗೂ ಬಗ್ಗದೇ ಮುನ್ನುಗಿದ್ದರೇ! ಜಾತಿ ಎಂಬ ದಾಳ ಪ್ರಯೋಗ ಮೀಸೆ ಚಿಗುರದ ಹುಡುಗನಿಂದ ಹಿಡಿದು ಎದೆ ಹುಬ್ಬಿಸಿ ಬರುವ ದಷ್ಟ ಪುಷ್ಟ ನಡು ವಯಸ್ಸಿನ ಯುವಕರು ಕಂಡ ಕಂಡಲ್ಲಿ ರಾಜಿ ಸಂಧಾನದ ಮಾತು ಕಥೆಗೆ ಇಳಿಯುತ್ತಾರೆ. ಇದನ್ನು ಹೆದರಿಸಿ ಮುನ್ನುಗಿದರೆ ಸರ್ಕಾರಿ ಕಚೇರಿಯಲ್ಲಿ ಒಬ್ಬ ದಡೂತಿ ದೇಹದ ಸದಾ ಸರ್ಕಾರಿ ಅಧಿಕಾರಿಗಳ ಬೆನ್ನ ಹಿಂದೆ ಬಾಲ ಆಡಿಸುತ್ತಾ ಹೆಚ್ಚು ಮಾತನಾಡದೆ ತನ್ನನ್ನೂ ತಾನೇ ಗ್ರೇಟ್ ಲಿಸನರ್ ಎಂದು ಬಿಂಬಿಸಿಕೊಂಡು ಪ್ರತಿ ವಿವರವನ್ನು ಕಚೇರಿಯಲ್ಲಿ ಸಂಗ್ರಹಿಸಿ ಯಾವ ಯಾವ ಅಧಿಕಾರಿಗೆ ಎಸ್ಟು ಪಾಲು ನೀಡಬೇಕೆಂದು ನಿರ್ದಾರ ಮಾಡುವ ದೊಡ್ಡ ದೇಹದ ಸಣ್ಣ ಮನಸ್ಥಿತಿಯ ಮನುಷ್ಯ ಜಾಸ್ತಿ ಮಾತನಾಡಿದರೇ ನನ್ನನು ದಾಟಿ ಯಾವ ವ್ಯಕ್ತಿಯು ಏನು ಮಾಡಲ್ಲ ಎಂಬ ನಂಬಿಕೆಯ ಮೇಲೆ ಎಲ್ಲಾ ಅಧಿಕಾರಿಗಳಿಗೂ ತುಂಬಾ ಹತ್ತಿರ ಅಗುತ್ತಾನೆ. ಇದು ನಮ್ಮ ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಚೇರಿಯ ಕರ್ಮಕಾಂಡ ಮತ್ತು ಭ್ರಷ್ಟಾಚಾರದ ಒಂದು ಜಲಕ್ ಅಷ್ಟೇ.
ಲೋಕಾಯುಕ್ತ ಕಣ್ಣಿಗೆ ಬೀಳದ ನರಸಪ್ಪನೆಂಬ ಲಂಚಬಾಕ.

ಅಸಲಿ ನರಸಪ್ಪ ನಕಲಿ ನಾಟಕ.!
ಇತನ ಕಥೆ ಹೇಳುತ್ತಾ ಹೊದರೇ ದಿನಗಳೇ ಬೇಕಾಗುತ್ತೇ ನೋಡಲು ಸಾದಾ ಸೀದಾ ಆದರೇ ಬಲೇ ಆಸಾಮಿ ಕನ್ರೀ! ಕಚೇರಿ ಹೋರಗಡೆ ಸಾದಾ ಸೀದಾ ಕಚೇರಿ ಹೊಳಗಡೆ ಒಳ್ಳೆ ಸಿರಿವಂತನ ಅವತಾರ ಕಚೇರಿಯ ತುಂಬಾ ಬರೀ ದುಡ್ಡಿನ ವಾಸನೆ ಎಲ್ಲಾ ರೂ ೫೦೦ ಮುಖಬೆಲೆಯ ಹೊಸ ಗರಿ ಗರಿ ನೋಟುಗಳೆ! ಸರಿ ಆಗಿದ್ರೆ ಮುಂದೆ ಇತನ ಕಥೆ ಓದಿ ಇತನ ಹೆಸರು ನರಸಪ್ಪ (ಕ್ಯಾಲಿಕೇಟರ್ ನರಸಪ್ಪ) ಎಂದು ನಾನು ಕರೆಯುತ್ತೇನೆ ಇತನು ಹಲವಾರು ವರ್ಷದಿಂದ ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೇ ಬೀಡು ಬಿಟ್ಟಿರುತ್ತಾನೆ ಅಧೀಕ್ಷಕ ಹುದ್ದೆಯಲ್ಲಿ ಸದ್ಯ ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿ ಕಡತ ನಿರ್ವಹಣೆ, ಕಚೇರಿಯ ಸಾರಿಗೆ ಮತ್ತು ಸಾರಿಗೇತರ ವಿಭಾಗ, ಆಡಿಟ್, ಕಲಿಕಾ ಚಾಲನಾ ಅನುಜ್ಞಾ ಪತ್ರ ವಿಭಾಗ, ಅವಕ-ಜವಕ, ಅನುಪಯುಕ್ತ ಮತ್ತು ತೆರಿಗೆ ಮರುಪಾವತಿ, ಡಿಎಸ್‌ಎ ವಿಭಾಗ, ಮತ್ತು ಮೇಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡುವುದು ಇತನ ಕರ್ತವ್ಯ ಆದರೇ ಈ ಕ್ಯಾಲಕಲೇಟ್ ನರಸಪ್ಪ ಇದರ ಜೋತೆಗೆ ಬೇರೆ ಇನ್ನೊಂದು ಹುದ್ದೆಯನ್ನು ನಿರ್ವಹಿಸುತ್ತಿದ್ದಾನೆ ಅದೇ ನೋಡಿ ಸರ್ಕಾರಕ್ಕೆ ವಂಚನೆ ಮಾಡಿ ತೆರಿಗೆಯನ್ನು ಹೊತರುಪಡಿಸಿ ಜನರು ಮತ್ತು ಮದ್ಯವರ್ತಿಗಳಿಂದ ಕಕ್ಕ ತಿನ್ನುವ ಕೆಲಸ! ಕಚೇರಿಯಲ್ಲಿ ಕುಳಿತರೇ ಅದೆಂತ ಸ್ಟೈಲ್ ಅಂತಿನಿ ಇತನ ಸುತ್ತಾ ೨೦-೩೦ ಮದ್ಯವರ್ತಿಗಳು ಎಲ್ಲರ ಕೈಯಲ್ಲಿ ಅವಕ-ಜವಕದಲ್ಲಿ ಹಂತ-ಹಂತವಾಗಿ ಬರಬೇಕಾದ ಸರ್ಕಾರಿ ಪೈಲ್‌ಗಳು ಖಾಸಗಿಯಾಗಿ ಇವರನ್ನು ಹುಡುಕಿಕೊಂಡು ಬರುತ್ತೆ ಈ ಮದ್ಯವರ್ತಿಗಳು ಸರ್ಕಾರಿ ಸಿಬ್ಬಂದಿಗಳಂತೆ ಕೈಯಲ್ಲಿ ಪೈಲುಗಳು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ೫೦೦ ಮುಖಬೆಲೆಯ ನೊಟುಗಳನ್ನು ಹಿಡಿದುಕೊಂಡಿರುತ್ತಾರೆ ಅಧೀಕ್ಷಕ ಹುದ್ದೆಯಲ್ಲಿರುವ ಈ ಕ್ಯಾಲುಕಲೇಟರ್ ನರಸಪ್ಪ ಪೈಲ್‌ಗಳಿಗೆ ಸಹಿ ಮಾಡಲು ಹಣಕ್ಕೆ ಬೇಡಿಕೆಯನ್ನು ಇಡುತ್ತಾನೆ ಆ ಹಣವನ್ನು ಕೊಟ್ಟರೇ ಮಾತ್ರ ಪೈಲ್‌ಗಳಿಗೆ ಸಹಿ ಇಲ್ಲ ಅಂದ್ರೇ ಇಲ್ಲಾ ಇತನ ನಾಜೂಕ ಮತ್ತು ಬುದ್ದಿವಂತಿಕೆ ಇಷ್ಟಕ್ಕೆ ಮುಗಿಯಲ್ಲ ತನ್ನ ಜೇಬಿನಿಂದ ಒಂದು ಬಿಳಿ ಹಾಳೆಯಲ್ಲಿ ಎಲ್ಲಾ ಬರೆದಿಟ್ಟುಕೊಂಡಿರುತ್ತಾನೆ ಎಷ್ಟು ಕಡತಗಳು ಬಂದಿವೆ? ಇವಾಗ ಎಷ್ಟು ಪೈಲ್‌ಗಳಿಗೆ ಸಹಿ ಆಗಿದೆ! ಯಾವ ಮದ್ಯವರ್ತಿ ಎಷ್ಟು ಕೊಟ್ಟ? ಎಂದು ಅದರಲ್ಲಿ ತನ್ನದೇ ಅಮೃತಾಕ್ಷರದಿಂದ ಬರೆದಿಟ್ಟುಕೊಳ್ಳುತ್ತಾನೆ. ಸದಾ ಮದ್ಯವರ್ತಿಗಳಿಂದ ತುಂಬಿ ತುಳುಕುವ ಕಚೇರಿಯಲ್ಲಿ ಯಾರಾದ್ರು ತನ್ನ ಬಂಡವಾಳ ಬಯಲಿಗೆ ತಂದರೇ ಕಷ್ಟ ಎಂದುಕೊಂಡು ಇವಾಗ-ಇವಾಗ ಕ್ಯಾಲಕಿಲೇಟರ್‌ನಲ್ಲಿ ಟೈಪ್ ಮಾಡಿ ಮದ್ಯವರ್ತಿಗಳಿಗೆ ತೋರಿಸುತ್ತಾನೆ ಆ ವ್ಯಕ್ತಿಯು ಟೈಪ್ ಮಾಡಿದಷ್ಟು ಹಣವನ್ನು ಕೊಟ್ಟರೆ ಮಾತ್ರ ಪೈಲ್ ಗಳಿಗೆ ಸಹಿ ಇಲ್ಲದಿದ್ದರೇ ಇಲ್ಲಾ. ಮದ್ಯವರ್ತಿಗಳು ಮತ್ತು ಕ್ಯಾಲುಕಲೇಟರ್ ನರಸಪ್ಪ ಈ ಎಲ್ಲಾ ನವರಂಗಿ ಆಟಗಳನ್ನು ಸರ್ಕಾರಿ ಕಚೇರಿಯ ಸಮಯದಲ್ಲಿ ಆಡುವುದಿಲ್ಲ ಇದೆಲ್ಲಾ ಸಂಜೆ ಸಮಯದಲ್ಲಿ ಶುರುವಾಗುತ್ತೆ.
ಸರ್ಕಾರಿ ಕಚೇರಿ ಖಾಸಗಿ ಸಿಬಂಧಿಗಳು!

ಇದನ್ನು ಪ್ರಭಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ಕೆ ದಾಮೋದರ್ ಅವರನ್ನು ನಮ್ಮ ತಂಡ ಪ್ರಶ್ನಿಸಿದಾಗ ನಮ್ಮ ಕಚೇರಿಯಲ್ಲಿ ಮದ್ಯವರ್ತಿಗಳು ಇಲ್ಲ ಮತ್ತೆ ಅದು ನನ್ನ ಗಮನಕ್ಕೆ ಬಂದಿರುವುದಿಲ್ಲ ಎಂದು ಎರಡು ಮಾತುಗಳನ್ನಾಡಿ ಸಲಿಸಾಗಿ ಹೊರಗೆ ಕಳುಹಿಸಿದರು. ಅವರ ಕೊಠಡಿಯ ಹೊರಗಡೆ ನೂರಾರು ಸಂಖ್ಯೆಯಲ್ಲಿ ಮದ್ಯವರ್ತಿಗಳು ಕಾದುಕುಳಿತಿರುವುದು ವಿರ್ಪಯಾಸ ಈ ಕಚೇರಿಯಲ್ಲಿ ಶಿಸ್ತಿನ ಸಿಪಾಯಿಗಳು ಈ ಮದ್ಯವರ್ತಿಗಳು ಎಂದರೇ ತಪ್ತಾಗಲ್ಲ ಬೀಡಿ!
ಈ ಭೃಷ್ಟತೆಯ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು.

ಲೋಕಾ ಕಣ್ಣಿಗೆ ಬೀಳದ ಈ ಕಚೇರಿ ಮತ್ತು ಲಂಚಬಾಕ ಕ್ಯಾಲಿಕಲೇಟರ್ ನರಸಪ್ಪ ಮತ್ತು ಆರ್ ಟಿ ಓ ಕಚೇರಿಯಲ್ಲಿ ಮದ್ಯವರ್ತಿಗಳನ್ನು ನೋಡದ ಕೆ .ದಾಮೋದರ್ ವಿರುದ್ದ ನಿಬಂಧಕರು ಕರ್ನಾಟಕ ಲೊಕಾಯುಕ್ತ ಬೆಂಗಳೂರು ರವರಿಗೆ ದೂರು ದಾಖಲು ಮಾಡಲಾಗಿದೆ. ನರಸಪ್ಪ ಕೊಪ್ಪಳವನ್ನು ಬಿಟ್ಟು ಸದ್ಯದಲ್ಲೆ ಮುಂಬಡ್ತಿ ಪಡೆದುಕೊಂಡು ಜಾಗವನ್ನು ಖಾಲಿ ಮಾಡುವ ನಿರೀಕ್ಷೆಯಲ್ಲಿ ಎಲ್ಲ ಮೂಲಗಳಿಂದ ಪ್ರಯತ್ನವನ್ನು ಪಡುತ್ತಿದ್ದು ಜಂಟಿ ಸಾರಿಗೆ ಆಯುಕ್ತರು ಕಲಬುರಗಿ ಮತ್ತು ಆಯುಕ್ತರು ಮತ್ತು ಸುರಕ್ಷತೆ ಟಿ ಟಿ ಎಮ್ ಸಿ ಕಟ್ಟಡ ಶಾಂತಿನಗರ ಬೆಂಗಳೂರು ಅವರು ಇಂತಹ ಭ್ರಷ್ಟ ಅಧಿಕಾರಿಗಳಿಗೆ ಅದು ಯಾವ ಆಧಾರದ ಅಡಿಯಲ್ಲಿ ಮುಂಬಡ್ತಿ ನೀಡುತ್ತಾರೋ!ಕಾದು ನೋಡೊಣ ಮತ್ತು ಇವರುಗಳಿಗೆ ಸದರಿ ಲೋಕಾಯುಕ್ತ ದಾಖಲಾಗಿರುವ ಪ್ರಕರಣದ ನಕಲು ಪ್ರತಿಯನ್ನು ಲಗತ್ತಿಸಿ ಮುಂಬಡ್ತಿಯನ್ನು ತಡೆಯುವಂತೆ ಪತ್ರವನ್ನು ಬರೆದು ಕಾದು ನೋಡೋಣ ನರಸಪ್ಪ ಲೋಕಾಯುಕ್ತ ಮತ್ತು ದಾಮೋದರ್ ಇವರುಗಳ ಮೇಲೆ ದಾಖಲಾಗಿರುವ ಪ್ರಕರಣ ಮುಗಿಯುವವರೆಗೆ ಇವರುಗಳಿಗೆ ಮುಂಬಡ್ತಿಯನ್ನು ನಿಲ್ಲಿಸಿ ಸಾರ್ವಜನಿಕ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರಾ ಕಾದು ನೋಡೋಣ. ಇನ್ನು ಮುಂದೆಯಾದರು ಈ ಕ್ಯಾಲುಕಲೇಟರ್ ನರಸಪ್ಪನಂತಹ ಡಿಲಿಂಗ್ ಅಧಿಕಾರಿಗಳ ಮೇಲೆ ದಾಳಿಯಾಗಲಿ ಆದಾಯಕ್ಕಿಂತ ನೂರು ಪಟ್ಟು ಜಾಸ್ತಿ ಚರ ಸ್ಥಿರ ಆದಾಯ ಮಾಡಿರುತ್ತಾರೆ ಎಂಬ ಅನುಮಾನಗಳು ಇವರದೇ ಸಿಬ್ಬಂದಿಗಳ ಬಾಯಲ್ಲಿ ಹಲವಾರು ಬಾರಿ ಬಂದಿವೆ ಮತ್ತು ಸಾರ್ವಜನಿಕ ವಲಯದಲ್ಲಿ ಹಲವಾರು ಬಾರಿ ಕೇಳಿಬಂದಿವೆ ಇಂತಹ ಕಚೇರಿ ಮತ್ತು ನರಸಪ್ಪನ ಮನೆ ಮೇಲೆ ದಾಳಿ ಮಾಡುತ್ತೀರೆಂದು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.