ರಣಬೇಟೆ ನ್ಯೂಸ್
ಕೊಪ್ಪಳ.
ಯಾವುದೇ ಧರ್ಮದ ಕಾರ್ಯಕ್ರಮಗಳನ್ನು ಗ್ರಾಮದ ಜನರೆಲ್ಲರೂ ಒಗ್ಗೂಡಿಕೊಂಡು ಭಾವೈಕ್ಯತೆಯಿಂದ ಆಚರಣೆ ಮಾಡುವುದರಿಂದ ಎಲ್ಲಾ ಧರ್ಮದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ತಾಲೂಕಿನ ಹಳೆ ಬಂಡಿ ಹರ್ಲಾಪುರ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ಜರುಗಿದ್ದು ನೂರಾರು ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು ಗ್ರಾಮದಲ್ಲಿ ಡೊಳ್ಳು ಕುಣಿತ ಬಾಜಾ ಭಜಂತ್ರಿ ಯೊಂದಿಗೆ ಕುಂಬೋತ್ಸವ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಕುಂಬೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಸೌಹಾರ್ದತೆಯಿಂದ ಗ್ರಾಮದ ಮುಖಂಡರೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಹಬ್ಬಗಳ ಆಚರಣೆಯಿಂದ ಕಾರ್ಯಕ್ರಮ ಯಶಸ್ವಿ ಸಾಧ್ಯವಾಗಿದ್ದು ಈ ವರ್ಷ ಮುಂಗಾರು ಪೂರ್ವ ಮಳೆಯ ಚೆನ್ನಾಗಿ ಸುರಿದ ಪರಿಣಾಮ ಎರಡು ಬೆಳೆಗೆ ನೀರು ಲಭ್ಯವಾಗುವ ಎಲ್ಲಾ ಅವಕಾಶವಿದೆ ಎಂದು ರೈತರಿಗೆ ಸಿಹಿ ಸಂದೇಶ ನೀಡಿದರು.
.

ಜಾತ್ರೆಯಲ್ಲಿ ಸೇರಿದ ಭಕ್ತರು ತಾಯಿ ದುರ್ಗಾದೇವಿಗೆ ತಮ್ಮ ಹರಕೆ ಇಷ್ಟಾರ್ಥಗಳನ್ನು ಈಡೇರಿಸಿ ದೇವಿ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಶ್ರೀ ದುರ್ಗಾದೇವಿ ಮೂರ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಕೆ ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಕೆ ಎಮ್ ಸೈಯದ್, ಮಾಜಿ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಯಂಕಪ್ಪ ಹೊಸಳ್ಳಿ ಚನ್ನ ಕೃಷ್ಣ ಗೊಲ್ಲರ ,ಯಮನೂರಪ್ಪ ವಡ್ಡರ್, ಭೀಮರಾಯ ಪತ್ತೆಪುರ, ಸೋಮನಾಥ ವಾಲಿಕಾರ ಸೇರಿದಂತೆ ಶ್ರೀದುರ್ಗಾದೇವಿ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.