15 ರಂದು ಶ್ರೀಶಿವಸಂಗಮೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೆ

ರಣಬೇಟೆ ನ್ಯೂಸ್‌ ಕೂಕನೂರ.

ತಾಲೂಕಿನ ಬೆದವಟ್ಟಿ ಗ್ರಾಮದ ಶ್ರೀಶೈಲ ಪೀಠದ ಶ್ರೀಮಠದ ಪೂಜ್ಯರಾದ ಶ್ರೀ ಶಿವ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 28 ಮೇ 2025 ರಂದು ಲಿಂಗೈಕ್ಯರಾಗಿದ್ದು ಅವರ ಪ್ರಥಮ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಜೂನ್ 15 ರಂದು ರವಿವಾರ ಬೆಳಿಗ್ಗೆ ಕುಕನೂರು ಪಟ್ಟಣದ ಮುಂಡರಗಿ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಕೊಪ್ಪಳ ಜಿಲ್ಲೆಯ ಮಠಾಧೀಶರ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದೆ ಎಂದು ಪಟ್ಟಣದ ಹಿರಿಯರಾದ ವೀರಯ್ಯ ತೋಂಟದಾರ್ಯಮಠ ಹೇಳಿದರು.
ಪಟ್ಟಣದ ಮುಂಡರಗಿ ಶ್ರೀ ಅನ್ನದಾನೇಶ್ವರ ಮಠದಲ್ಲಿ ವರದಿಗಾರರೊಂದಿಗೆ ವೀರಯ್ಯ ತೋಟದಾರ್ಯಮಠ ಮಾತನಾಡುತ್ತಾ ಶ್ರೀಗಳು ಈ ಭಾಗದ ನಡೆದಾಡುವ ದೇವರಾಗಿದ್ದು, ಅನೇಕ ಕಡೆಗಳಲ್ಲಿ ಧರ್ಮ ಜಾಗೃತಿ ಕಾರ್ಯವನ್ನು ಮಾಡಿದ ಮಹಾನ್ ಪುರುಷರಾಗಿದ್ದಾರೆ ಭಕ್ತರನ್ನು ಆಧ್ಯಾತ್ಮದ ಕಡೆಗೆ ಕರೆದೊಯ್ಯುತ್ತಿದ್ದ ಅವರ ಮಾರ್ಗಗಳು ಅನನ್ಯ ವಾಗಿದ್ದು ಎಲ್ಲಾ ವರ್ಗದ ಭಕ್ತರನ್ನು ಸಮಾನವಾಗಿ ಕಾಣುತ್ತಾ ಧಾರ್ಮಿಕ ಕ್ಷೇತ್ರ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತಿದ್ದರು . ಶ್ರೀಗಳ ಶಿವ ಗಣರಾಧನೆಯನ್ನು ಜೂನ್ ಒಂದರಂದು ಶ್ರೀಶೈಲ ಜಗದ್ಗುರುಗಳ ಉಪಸ್ಥಿತಿಯಲ್ಲಿ ನೆರವೇರಿಸಿದ್ದು ಈಗ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೋತ್ಸವವನ್ನು ಜೂನ್ 15ರಂದು ಕುಕನೂರು ಪಟ್ಟಣದ ಶ್ರೀಮಠದಲ್ಲಿ ಆಯೋಜಿಸಲಾಗಿದ್ದು ಅಂದು ಬೆಳಿಗ್ಗೆ ಎಂಟು ಗಂಟೆಗೆ ಪ್ರಮುಖ ಬೀದಿಗಳಲ್ಲಿ ಪೂಜ್ಯರ ಭಾವಚಿತ್ರ ಮೆರವಣಿಗೆ ನಂತರ ಧರ್ಮಸಭೆ ಹಾಗೂ ಅನ್ನ ಸಂತರ್ಪಣೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗಬೇಕು ಎಂದು ಮಠಾಧೀಶರ ಒಕ್ಕೂಟದಿಂದ ಅಪ್ಪಣೆ ಮಾಡಲಾಗಿದ್ದು ಪ್ರತಿಯೊಬ್ಬ ಭಕ್ತ ವರ್ಗದವರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

error: Content is protected !!
Scroll to Top