ರಣಬೇಟೆ ನ್ಯೂಸ್ ಕೊಪ್ಪಳ.
ಕೊಪ್ಪಳ ನಗರದಲ್ಲಿ ಬೀದಿಬದಿ ವ್ಯಾಪಾರಸ್ಥರ ತೂಕ ಮತ್ತು ಸಾಧನಗಳ ತಪಾಸಣೆಯನ್ನು ಮಾಡಲಾಯಿತು. ಕಾನೂನು ಮತ್ತು ಮಾಪನ ಶಾಸ್ತ್ರದ ನಿರೀಕ್ಷಕರಾದ ಎಂ. ಬದಿಯುದ್ದೀನ್ ಅಹಮದ್ ಅವರು ತೂಕ ಮತ್ತು ಸಾಧನಗಳು ಸರಿಯಿಲ್ಲದ ವ್ಯಾಪಾರಸ್ಥರ ಮೇಲೆ ಮೊಕದ್ದಮೆ ದಾಖಲಿಸಿ ದಂಡ ವಿಧಿಸಿದರು. ನಗರದ ಜವಾಹರ ರಸ್ತೆ, ಅಶೋಕ ಸರ್ಕಲ್ ಸೇರಿದಂತೆ ವಿವಿಧಡೆ ಬೀದಿ ಬದಿ ವ್ಯಾಪಾರಸ್ಥರು ತೂಕ ಮತ್ತು ಸಾಧನಗಳು ಸರಿಯಾಗಿ ಇಟ್ಟುಕೊಂಡು ಗ್ರಾಹಕರಿಗೆ ಕಾಣುವಂತೆ ಇರಬೇಕು, ಬೀದಿ ಬದಿ ವ್ಯಾಪಾರಸ್ಥರು ಕಾನೂನು ಮತ್ತು ಮಾಪನ ಶಾಸ್ತ್ರ ನಿರೀಕ್ಷಕರ ಕಚೇರಿಗೆ ಹಾಜರಾಗಿ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳುವಂತೆ ಎಲ್ಲಾ ವ್ಯಾಪಾರಸ್ಥರಿಗೆ ಸೂಚನೆ ನೀಡಿದರು, ಗ್ರಾಹಕರೊಂದಿಗೆ ಸೌಹಾರ್ದಿತವಾಗಿ, ಸೌಜನ್ಯ ದೊಂದಿಗೆ ವಿಶ್ವಾಸದಿಂದ ವ್ಯಾಪಾರ ಮಾಡುವಂತೆ, ವ್ಯಾಪಾರಸ್ಥರಿಗೆ ತೂಕ ಮತ್ತು ಸಾಧನಗಳ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಖರೀದಿಸಲು ಬಂದ ಗ್ರಾಹಕರು ನಿರೀಕ್ಷಕ ಎಂ. ಬದಿಯುದ್ದೀನ್ ಅಹ್ಮದ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.