ಬೆದವಟ್ಟಿ ಶಿವಸಂಗಮೇಶ್ವರಶ್ರೀಗಳ ಪುಣ್ಯ ಸ್ಮರಣೋತ್ಸವ.

ಮಠಾಧೀಶರ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಅಲಂಕರಿಸಿದ ಶ್ರೀಗಳು-ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು

ರಣಬೇಟೆ ನ್ಯೂಸ್‌ ಕೂಕನೂರ

ಶ್ರೀಶೈಲ ಪೀಠದ ಅಧೀನದಲ್ಲಿರುವ ಬೆದವಟ್ಟಿ ಸಂಸ್ಥಾನ ಹಿರೇಮಠದ ಪೂಜ್ಯರಾದ ಲಿಂಗೈಕ್ಯ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರು ಅನೇಕ ಮಠಾಧೀಶರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ಸ್ಥಾನ ಅಲಂಕರಿಸಿದ್ದಾರೆ ಎಂದು ಯಲಬುರ್ಗಾ ಪಟ್ಟಣದ ಹಿರೇಮಠದ ಪೂಜ್ಯರಾದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು ಇತ್ತೀಚಿಗೆ ಲಿಂಗೈಕ್ಯರಾದ ತಾಲೂಕಿನ ಬೆದವಟ್ಟಿ ಹಿರೇಮಠದ ಪರಮಪೂಜ್ಯ ಶ್ರೀ ಶಿವಸಂಗಮೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಭಾನುವಾರ ಪಟ್ಟಣದ ಅನ್ನದಾನಿಶ್ವರ ಶಾಖಾ ಮಠದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಸಾನಿಧ್ಯ ವಹಿಸಿ ಮಾತನಾಡಿದ ಯಲಬುರ್ಗಾ ಹಿರೇಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಬೆದವಟ್ಟಿ ಶಿವ ಸಂಗಮೇಶ್ವರ ಶ್ರೀಗಳು ಈ ಭಾಗದ ಎಲ್ಲಾ ಮಾಠಾಧೀಶರಿಗೆ ತಂದೆಯ ಸ್ಥಾನದಲ್ಲಿ ನಿಂತುಕೊಂಡು ಮಾರ್ಗದರ್ಶನ ಮಾಡಿದರು, ಅನೇಕ ಕಿರಿಯ ಮಾಠಾಧೀಷರ ಪಟ್ಟಾಧಿಕಾರ ನೆರವೇರಿಸಿದರು.

ಈಗಲೂ ಅವರು ನಮ್ಮೆಲ್ಲರ ಹೃದಯ ಸಿಂಹಾಸನ ಅಲಂಕರಿಸಿದ್ದಾರೆ ಎಂದು ಹೇಳಿದರು. ಈ ಭಾಗದಲ್ಲಿ ದಾಸೋಹ ಸೇವೆ ಮತ್ತು ಪಂಚ ಪೀಠಧಿಪತಿಗಳನ್ನು ಕರೆಸಿ ಅಡ್ಡಪ್ಪಲ್ಲಕ್ಕಿ ಉತ್ಸವ ಮಾಡಿ ಭಕ್ತಿಯ ಭಂಡಾರವನ್ನು ಪಸರಿಸಿದವರು ಎಂದು ಗುರುಗಳ ಗುಣಗಾನ ಮಾಡಿದರು.
ಕುಷ್ಟಗಿಯ ಕರಿಬಸವೇಶ್ವರ ಸ್ವಾಮೀಜಿ ಮಾತನಾಡಿ, ಬೆದವಟ್ಟಿ ಶ್ರೀಗಳು ಗುರು ಸ್ವರೂಪವಾಗಿ ನಿಂತು ಕೊಂಡು ಭಕ್ತಿಯ, ಸಂಸ್ಕಾರದ ಪರಂಪರೆ ಬೆಳೆಗಿಸಿದರು. ಶ್ರೀಗಂಧದ ಕೊರಡಿನಂತೆ ಸಮಾಜಕ್ಕೆ ಸುವಾಸನೆ ಸೂಸಿದರು ಎಂದು ಹೇಳಿದರು. ಅನ್ನದಾನಿಶ್ವರ ಮಠದ ಮಹಾದೇವ ಸ್ವಾಮೀಜಿಗಳು ಮಾತನಾಡಿ, ಕುಕನೂರು ತಾಲೂಕು ಮಹಾಮಾಯೇ ದೇವಿ, ಗುದ್ನೇಶ್ವರ ದೇವರು ಮತ್ತು ಬೆದವಟ್ಟಿ ಶ್ರೀಗಳಿಂದ ಹೆಸರು ಪಡೆದಿದೆ. ಅವರು ಹಾಕಿದ ಪುಣ್ಯ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದರು.

ಪುಣ್ಯಸ್ಮರಣೆ ಕಾರ್ಯಕ್ರಮ ಅಂಗವಾಗಿ ಸುಮಾರು 40 ಬಂಡಿಗಳಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಯಲಬುರ್ಗಾ ಪಟ್ಟಣದ ಶ್ರೀಧರ ಮುರುಡಿಮಠದ ಬಸವಲಿಂಗೇಶ್ವರ ಸ್ವಾಮಿಗಳು, ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಮಂಗಳೂರು ಸಿದ್ದಲಿಂಗ ಶ್ರೀಗಳು, ಅಳವಂಡಿಯ ಮರುಳರಾಧ್ಯ ಶ್ರೀಗಳು, ತಾವರಗೆರೆ ಮಹೇಶ್ವರ ಶರಣರು, ಚಳಗೇರಿ ಶ್ರೀಗಳು ಮತ್ತು ಪ್ರಮುಖರಾದ ಅಂದಪ್ಪ ಜವಳಿ, ವೀರಯ್ಯ ತೊಂಟಾದರ್ಯ ಮಠ, ಮಹೇಶ್ ಕಲ್ಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

error: Content is protected !!
Scroll to Top