ರಣಬೇಟೆ ನ್ಯೂಸ್ ಕೊಪ್ಪಳ.
ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿಗಳ ಬದಲಾವಣೆ ಸಾರ್ವಜನಕವಾಗಿ ಪ್ರತಿ ಒಬ್ಬರ ಮೊಗದಲ್ಲಿ ಸಂತಸ ತಂದಿದೆ ನೂತನವಾಗಿ ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿಗಳಾಗಿ ಆಗಮಿಸಿರುವ ಸುರೇಶ ಇಟ್ನಾಳ ಅವರಿಂದ ಕೊಪ್ಪಳದಲ್ಲಿ ನಡೆಯುವ ಅತಿಯಾದ ಭ್ರಷ್ಟಚಾರಕ್ಕೆ ಕಡಿವಾಣ ಬಿದ್ದರೇ ಸಾಕು! ಅಕ್ರಮ ಮರಳು ದಂಧೆ, ಅತಿಯಾದ ಪಡಿತರ ಅಕ್ಕಿ ಮಾಫಿಯ, ಗಣಿ ಮಾಫಿಯ, ರಿಯಲ್ ಎಸ್ಟೇಟ್, ಮತ್ತು ಪತ್ರಕರ್ತ ಮತ್ತು ಮಾಹಿತಿಹಕ್ಕು ಬಳಕೆದಾರರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುವ ಅಧಿಕಾರಿಗಳ ನಿಯಂತ್ರಣ! ಸದರಿ ಜಿಲ್ಲಾಧಿಕಾರಿಗಳ ಕಚೇರಿಯ ಅವಕ-ಜವಕ ಪಸ್ತಕವನ್ನು ತಾವುಗಳು ಪರಿಶೀಲನೆ ಮಾಡಿದರೇ ತಮಗೆ ಕೊಪ್ಪಳ ಜಿಲ್ಲೆಯ ನೈಜ ಚಿತ್ರಣ ದೊರಕುತ್ತದೆ. ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲೆಯ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಿ ಅವರ ಕಷ್ಟ ಸುಖವನ್ನು ಆಲಿಸಬೇಕು ಎಂದು ಒಂದು ಚಿಕ್ಕ ಕಳಕಳಿಯೊಂದಿಗೆ ಬಲ್ದೋಟ್ ಕಾರ್ಖಾನೆಯನ್ನು ಸ್ಥಗಿತಗೊಳಿಸಲು ತಾವುಗಳ ಜನರ ಪರವಾಗಿ ನಿಂತುಕೊಳ್ಳುತ್ತಿರೆಂದು ಬಾವಿಸುತ್ತೆವೆ ಹೊಸ ಜಿಲ್ಲಾಧಿಕಾರಿಗಳಿಗೆ ಹೃದಯಸ್ಪರ್ಶಿ ಸ್ವಾಗತ. ಇದರ ಜೊತೆಗೆ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಳಿನ್ ಅತುಲ್ ರವರನ್ನು ಕೆಕೆಆರ್‌ಡಿಬಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಗೆ ನೂತನವಾಗಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಆಗಮಿಸಿದ ವರ್ಣಿತ ನೇಗಿ ಅವರಿಂದ ಉತ್ತಮ ಆಡಳಿತವನ್ನು ಪ್ರತಿಯೊಬ್ಬ ನಾಗರಿಕರು ನೋಡಲು ಬಯಸುತ್ತಾರೆ ತಮ್ಮ ವ್ಯಾಪ್ತಿಗೆ ಒಳಪಡುವ ೧೫೩ ಗ್ರಾಮಪಂಚಾಯತಿಗಳ ನೂರಾರು ಕೋಟಿ ರೂಪಾಯಿಯ ಸ್ಥಳೀಯ ಲೆಕ್ಕ ಪರಿಶೋಧನೆ ಮತ್ತು ಸರಿ ಸುಮಾರು 200 ಕೋಟಿ ಅಧಿಕ ಮೊತ್ತದ ಸಾಮಾಜಿಕ ಲೆಕ್ಕ ಪರಿಶೋಧನೆ ನಿಮ್ಮ ಆಡಳಿತದಲ್ಲಾದರು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತಿರುವಳಿ ಆಗಲಿ ಎಂಬುದು ಪ್ರತಿಯೊಬ್ಬ ಬುದ್ದಿವಂತ ನಾಗರಿಕನ ಆಸೆ. ಈ ಹಿಂದೆ ಕೊಪ್ಪಳ ಜಿಲ್ಲೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾದ ರಾಹುಲ್ ರತ್ನಂ ಪಾಂಡೆ ಅವರ ಆಡಳಿತ ವೈಖರಿಯನ್ನು ತುಂಬಾ ಮೆಚ್ಚಿದ್ದು ತುಂಬಾ ಕ್ರಿಯಾಶೀಲರು ಅವರಿಗೆ ಸ್ಮಾರ್ಟ್ ಗವರ್ನನ್ಸ್ ಮತ್ತು ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.