ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಹೈಮಾಸ್ಕ್ ದೀಪಗಳನ್ನು ಅಳವಡಿಸದೇ ಬೋಗಸ್ ಬಿಲ್ ತಯಾರಿಸಿ ಹಣ ಎತ್ತುವಳಿ: ಹೆಚ್. ವಸಂತಕುಮಾರ

ರಣಬೇಟೆ ನ್ಯೂಸ್‌ ಗಂಗಾವತಿ.

ಗಂಗಾವತಿ: ನಗರದ ಗಣೇಶ ಸರ್ಕಲ್‌ನಲ್ಲಿ ಮತ್ತು ೧೮ ಸಮಾಜದ ಸ್ಮಶಾನದಲ್ಲಿ ಹೈ ಮಾಸ್ಕ್ ದೀಪಗಳನ್ನು ಅಳವಡಿಸಲು ಕೆ.ಕೆ.ಆರ್.ಡಿ.ಬಿ. ಯೋಜನೆ ಅಡಿಯಲ್ಲಿ ಹಣ ಮಂಜೂರಾಗಿರುತ್ತದೆ. ಆದರೆ ಸದರಿ ಕಾಮಗಾರಿಯನ್ನು ನಿರ್ವಹಿಸದೇ ಬೋಗಸ್ ದಾಖಲೆಗಳನ್ನು ಸೃಷ್ಟಿಮಾಡಿಕೊಂಡು ಸರ್ಕಾರದ ಹಣವನ್ನು ಲೂಟಿ ಮಾಡಿರುತ್ತಾರೆ ಎಂದು ಕರ್ನಾಟಕ ದಲಿತ ರಕ್ಷಣ ವೇದಿಕೆ ಜಿಲ್ಲಾಧ್ಯಕ್ಷರಾದ ಹೆಚ್. ವಸಂತಕುಮಾರ ಕಟ್ಟಿಮನಿ ಆರೋಪಿಸಿದರು.
ಅವರು ಸದರಿ ಕಾಮಗಾರಿಯಲ್ಲಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಲು ಒತ್ತಾಯಿಸಿ, ಜೂನ್-೧೭ ರಂದು ತಾ.ಪಂ ನಡೆದ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ತಂಗಡಗಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಸದರಿ ಕಾಮಗಾರಿಗಳಲ್ಲಿ ಎರಡೂ ಕಡೆಗಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸದೇ ಬಿಲ್ಲುಗಳನ್ನು ಎತ್ತುವಳಿ ಮಾಡಿರುತ್ತಾರೆ. ಸದರಿ ಬೋಗಸ್ ಕಾಮಗಾರಿಯ ಬಗ್ಗೆ ತಿಳಿದ ಅಧಿಕಾರಿಗಳು/ಇಂಜಿನೀಯರುಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ತಮ್ಮ ಲಾಭಕ್ಕಾಗಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ವಂಚನೆಯನ್ನು ಮಾಡಿದ್ದಾರೆ. ಇಂತಹ ಭ್ರಷ್ಟ ಇಂಜಿನೀಯರುಗಳನ್ನು ತಕ್ಷಣ ಅಮಾನತ್ತು ಮಾಡಬೇಕು ಮತ್ತು ಗುತ್ತಿಗೆದಾರರನ್ನು ಕಪ್ಪುಪಟ್ಟಿಯಲ್ಲಿ ಸೇರಿಸಬೇಕು ಹಾಗೂ ಸದರಿ ಲೂಟಿ ಆಗಿರುವ ಹಣವನ್ನು ಇವರಿಂದಲೇ ಸರ್ಕಾರಕ್ಕೆ ಭರಿಸಿಕೊಳ್ಳಬೇಕು ಹಾಗೂ ಕಾಮಗಾರಿಯನ್ನು ತನಿಖೆ ಮಾಡಬೇಕೆಂದು ಕೊಪ್ಪಳ ಕೆ.ಆರ್.ಐ.ಡಿ.ಎಲ್. ಕಛೇರಿಯ ಕಾರ್ಯಪಾಲಕ ಅಭಿಯಂತರರಿಗೆ ದೂರು ಸಲ್ಲಿಸಲಾಗಿರುತ್ತದೆ. ಆದರೆ ಈ ಭ್ರಷ್ಟ ಅಧಿಕಾರಿಗಳು ಯವುದೇ ಕ್ರಮ ಕೈಗೊಂಡಿರುವುದಿಲ್ಲ. ಕಾರಣ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಸದರಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಮತ್ತು ಕಾಮಗಾರಿಯ ಅನುದಾನವನ್ನು ಪುನಃ ಸರ್ಕಾರದ ಬೊಕ್ಕಸಕ್ಕೆ ಮರುತುಂಬಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶರಣಬಸವ, ಚನ್ನಬಸವ, ಪರಶುರಾಮ, ಹನುಮಂತ, ದೇವರಾಜ, ಮಹೇಶ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

error: Content is protected !!
Scroll to Top