ರಣಬೇಟೆ ನ್ಯೂಸ್ ಕೊಪ್ಪಳ ತಾಲ್ಲೂಕು,
ಬಂಡಿ ಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ರೈತರ ಬಳಕೆಗೆ ನಿರ್ಮಿಸಲಾದ ಕಾಲುವೆ ಸೇತುವೆ ಇದೀಗ ವಿವಾದದ ಕಣವಾಗಿದ್ದು, ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ. ಮೂಲಗಳ ಪ್ರಕಾರ, ಕೆಲ ಖಾಸಗಿ ರಿಸಾರ್ಟ್ ಮಾಲೀಕರು ತಮ್ಮ ವಾಣಿಜ್ಯ ಉಪಯೋಗಕ್ಕಾಗಿ ಕಾಲುವೆಯ ಸೇತುವೆಯ ತಡೆಗೋಡೆಯನ್ನು ರಾತ್ರಿಕಾಲದಲ್ಲಿ ಸಿಸಿ ಡ್ರಿಲ್ಲಿಂಗ್ ಉಪಯೋಗಿಸಿ ಹಾನಿಗೊಳಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಬಸಾಪುರದಲ್ಲಿ ಕಾಲುವೆ ಮೂಲಕ ನೀರು ಹರಿದು ರೈತರ ಭೂಮಿಗಳಿಗೆ ನೆರವಾಗುತ್ತಿದೆ. ಈ ನಿಟ್ಟಿನಲ್ಲಿ ನಿರ್ಮಿಸಲಾದ ಸೇತುವೆ, ಗ್ರಾಮದ ಸಾರ್ವಜನಿಕ ಪ್ರಯಾಣಕ್ಕೆ ಸಹಾಯಕವಾಗಿದೆ. ಆದರೆ, ಖಾಸಗಿ ರಿಸಾರ್ಟ್‌ನ ಗ್ರಾಹಕರಿಗೆ ತ್ವರಿತ ಪ್ರವೇಶ ಕಲ್ಪಿಸಲು ಸೇತುವೆಯ ಅಡ್ಡಲಾಗಿ ತಡೆಗೋಡೆಯನ್ನು ಕೆಡವಿರುವುದರಿಂದ ಅದರ ತಾಂತ್ರಿಕ ಸ್ಥಿರತೆಯಲ್ಲಿ ಹಾನಿ ಸಂಭವಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

“
ಇದು ಸಾರ್ವಜನಿಕ ಸೌಲಭ್ಯಕ್ಕೆ ಹಾನಿಯಾಗಿದೆ. ಯಾರಿಗೂ ಸ್ವಂತ ಹಿತಕ್ಕಾಗಿ ಸಾರ್ವಜನಿಕ ಸಂಪತ್ತು ಹಾಳು ಮಾಡುವ ಹಕ್ಕಿಲ್ಲ,” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆ ಕುರಿತು ಗ್ರಾಮ ಪಂಚಾಯಿತಿ ಅಥವಾ ಜಲಸಂಪತ್ತು ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಲಿ. ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ಸಿದ್ಧತೆ ನಡೆಸುದ್ದಾರೆ. ಸಾರ್ವಜನಿಕವಾಗಿ ಉಪಯೋಗವಾಗುವ ಮೂಲಸೌಕರ್ಯಗಳಿಗೆ ಇಂತಹ ಹಾನಿಯಾಗುತ್ತದೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ..