ರಣಬೇಟೆ ನ್ಯೂಸ್ ಕೊಪ್ಪಳ.
ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಹಾದು ಹೋಗಿರುವ ಕೊಪ್ಪಳ ಗಂಗಾವತಿ ರಾಷ್ಟ್ರೀಯ ಹೆದ್ದಾರಿಗೆ ರೈಲ್ವೆ ಕ್ರಾಸಿಂಗ್ ತಪ್ಪಿಸಲು ಮೇಲ್ ಸೇತುವೆಯ ನಿರ್ಮಾಣ ಮಾಡಿ ಉದ್ಘಾಟನೆಯಾಗಿ ಒಂದರಿಂದ ಎರಡು ವರ್ಷಗಳು ಕಳೆದು ಮೇಲೆ ಸೇತುವೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಗೆ ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ.
ಗ್ರಾಮದಲ್ಲಿ ಪ್ರಮುಖವಾಗಿ ಪ್ರೌಢಶಾಲೆಗೆ ಶಾಲಾ ಮಕ್ಕಳು ಇದೇ ರಸ್ತೆಯನ್ನು ಅವಲಂಬಿಸಿದ್ದು ಜೊತೆಗೆ ಹೊಸಪೇಟೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದ್ದು ಈ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾದರೆ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ವಾಹನ ಚಾಲನೆ ಮಾಡುವ ಪರಿಸ್ಥಿತಿ ಇರದಿದ್ದರೆ ವಾಹನದಲ್ಲಿ ಕುಳಿತಿರುವ ಪ್ರಯಾಣಿಕರು ಇಂತಹ ರಸ್ತೆಯನ್ನು ಇತ್ತೀಚಿನ ದಿನಗಳಲ್ಲಿ ಕಂಡೆ ಇರಲಿಲ್ಲ. ಇಂತಹ ರಸ್ತೆಗಳು ಇನ್ನೂ ಇದ್ದಾಗೆ ಎಂದು ಒಬ್ಬರನ್ನೊಬ್ಬರು ಪ್ರಶ್ನಿಸಿಕೊಳ್ಳುತ್ತಿದ್ದಾರೆ.

ವಿಪರ್ಯಾಸದ ಸಂಗತಿ ಎಂದರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಸ್ವಗ್ರಹದಿಂದ ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಬೇಕಾದರೆ ಇದೆ ರಸ್ತೆಯಲ್ಲಿ ಓಡಾಡುತ್ತಿದ್ದು ರಸ್ತೆಯ ಪರಿಸ್ಥಿತಿ ಅವರ ಅರಿವಿಗೆ ಇದ್ದರೂ ಸಹ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವುದು ಹಲವಾರು ಪ್ರಶ್ನೆಗಳನ್ನು ಸಾರ್ವಜನಿಕರ ಮನಸ್ಸಲ್ಲಿ ಕೊಟ್ಟುಕೊಳ್ಳುತ್ತಿವೆ.
ಗೆಳೆಯರ ಸುತ್ತಮುತ್ತ ಬಹುತೇಕ ಕಾರ್ಖಾನೆಗಳನ್ನು ಹೊಂದಿದ್ದು ಕಾರ್ಖಾನೆಗಳಲ್ಲಿ ಏನಾದರೂ ಅವಘಡ ಸಂಭವಿಸಿದಲ್ಲಿ ಕಾರ್ಖಾನೆಯ ಕಾರ್ಮಿಕರನ್ನು ಆಸ್ಪತ್ರೆ ಸೇರಿಸಬೇಕೆಂದರೆ ಇದೆ ರಸ್ತೆ ಸಂಚಾರಕ್ಕೆ ಇದ್ದು ಇದನ್ನು ಬಿಟ್ಟರೆ ಬೇರೆ ಯಾವ ರಸ್ತೆಗಳು ಇರುವುದಿಲ್ಲ. ಆದರೂ ಸಹ ಸಂಬಂಧ ಪಟ್ಟ ಇಲಾಖೆ ಇಂತಹ ಜನ ದಟ್ಟಣೆ ಇರುವ ರಸ್ತೆಯನ್ನು ತಿರುಗಿ ಸಹ ನೋಡದೆ ಇರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.

ಗ್ರಾಮದಲ್ಲಿರುವ ಗಿಣಿಗೇರ ನಾಗರಿಕ ಹೋರಾಟ ಸಮಿತಿಯಿಂದ ರೈಲ್ವೆ ಮೇಲ್ ಸೇತುವೆ ಹಾಗೂ ಸಂಪರ್ಕ ರಸ್ತೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿ ದೂರವಾಣಿ ಮೂಲಕ ಸಹ ಮಾತನಾಡಿದರು ಸಹ ಅಧಿಕಾರಿಗಳು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಸದಸ್ಯರು ಹೇಳುತ್ತಾರೆ.
ಸ್ಥಳೀಯ ಚುನಾಯಿತ ಪ್ರತಿನಿಧಿಗಳಾದ ಶಾಸಕ ಹಾಗೂ ಸಂಸದರು ಪ್ರತಿದಿನ ಗಿಣಿಗೇರ ಮಾರ್ಗವಾಗಿಯೇ ಸಂಚಾರ ಮಾಡುತ್ತಿದ್ದರು ಸಹ ಸಚಿವರು, ಸಂಸದರು ಹಾಗೂ ಶಾಸಕರು ಇತ್ತಕಡೆ ಗಮನ ಹರಿಸದೆ ಇರುವುದು ಬೇಸರದ ಸಂಗತಿಯಾಗಿದೆ.