ರಣಬೇಟೆ ನ್ಯೂಸ್ ಕೊಪ್ಪಳ
ಕುರಿಗಳಿಗೆ ನೀರು ಕುಡಿಸುವ ಉದ್ದೇಶದಿಂದ ಕುರಿಗಾಗಿಯೂ ಬಸಾಪುರ ಕೆರೆಗೆ ಹೋದ ಸಂದರ್ಭದಲ್ಲಿ ಹಲ್ಲೆ ಮಾಡಿರುವ ಘಟನೆ ಶುಕ್ರವಾರ ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಬಲ್ದೋಟ ಕಂಪನಿಗೆ ಸಂಬಂಧಿಸಿದಂತೆ ತಾಲೂಕಿನ ಬಸಾಪುರ ಕೆರೆ ಒತ್ತುವರಿ ವಿಚಾರ ಇವರ ಚರ್ಚೆಗೆ ಗ್ರಾಸವಾಗುತ್ತಿದ್ದು ಇದೀಗ ಮತ್ತೊಂದು ಪ್ರಕರಣಕ್ಕೆ ಬಸಾಪುರ ಕೆರೆ ಸಾಕ್ಷಿಯಾಗಿದೆ. ಬಸಾಪುರದ ಕೆರೆಯ ಕಡೆ ಕುರಿಗಾಹಿ ದೇವಪ್ಪ ಹಾಲಹಳ್ಳಿ ಎಂಬುವರು ಕುರಿಗೆ ನೀರು ಕುಡಿಸುವ ಉದ್ದೇಶದಿಂದ ಬಸಾಪುರ ಕೆರೆಯ ಕಡೆ ಕುರಿಗಳನ್ನು ಪಡೆದುಕೊಂಡು ಹೋದಾಗ ಬಲ್ದೋಟ ಕಂಪನಿಯ ಸೆಕ್ಯೂರಿಟಿ ಕುರಿಗಾಹಿಯ ಮೇಲೆ ಮನಸೋ ಇಚ್ಚೆ ಸ್ಥಳಿಸುವುದರೊಂದಿಗೆ ಹಲ್ಲೆ ಮಾಡಿರುತ್ತಾರೆ. ತೀವ್ರವಾಗಿ ಗಾಯಗೊಂಡಿದ್ದ ಕುರಿಗಾಹಿಯನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿರುತ್ತದೆ.
ಎಂ ಎಸ್ ಪಿ ಎಲ್ ಬಲ್ದೋಟ ಕಂಪನಿಯ ಸೆಕ್ಯೂರಿಟಿ ಗಾರ್ಡುಗಳು ಕುರಿಗಾಹಿಯಾ ಮೇಲೆ ತೀವ್ರ ಹಲ್ಲೆ ನಡೆಸಿದ್ದು ತಲೆ,ಸೊಂಟ ಹಾಗೂ ಕಾಲುಗಳಿಗೆ ಜೋರಾಗಿ ಹೊಡೆದ ಪರಿಣಾಮ ತಲೆಯಿಂದ ರಕ್ತ ಸೋರಿಕೆಯಾಗುತ್ತಿದ್ದು, ಕಾಲುಸಹ ಮುರಿದಿರುವ ಸಾಧ್ಯತೆಯಿದ್ದು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆಕ್ಯೂರಿಟಿ ಗಾಡಿಗಳ ದೌರ್ಜನ್ಯಕ್ಕೆ ಸ್ಥಳೀಯರು ಹಾಗೂ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
