‘ವೈದ್ಯಕೀಯ ಮಾಫಿಯಾ’ ಕೊಪ್ಪಳ ತಾಲೂಕಿನಲ್ಲಿ ನಕಲಿ ವೈದ್ಯರ ದರ್ಬಾರ್!

ಜಿಲ್ಲಾ ಆರೋಗ್ಯ ಇಲಾಖೆಯ ‘ಕಾಣದ ಕೈಗಳ’ ಕರಾಮತ್ತು!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ನಂ :12 (ಸಂಚಿಕೆ -02)

ಕೊಪ್ಪಳ: ಜಿಲ್ಲೆಯ ಆರೋಗ್ಯ ಇಲಾಖೆಯ ಪಾರದರ್ಶಕ ಆಡಳಿತವು ಇಂದು ಅತಿದೊಡ್ಡ ಪ್ರಶ್ನಾರ್ಥಕ ಚಿಹ್ನೆಯ ಮುಂದೆ ನಿಂತಿದೆ. ತಾಲೂಕಿನಾದ್ಯಂತ ಎಲೆಕ್ಟ್ರೋಮಿಯೋಪತಿ ಹೆಸರಿನಲ್ಲಿ ಸುಮಾರು 100 ಕ್ಕೂ ಹೆಚ್ಚು ಅನಧಿಕೃತ ವೈದ್ಯರು ಯಾವುದೇ ಕೆಪಿಎಂಇ (KPME) ನೋಂದಣಿ ಇಲ್ಲದೆ ರಾಜಾರೋಷವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿರುವ ಬಗ್ಗೆ ಹಲವಾರು ದೂರು ಬಂದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.


​ನಕಲಿ ವೈದ್ಯರ ಕುರಿತು ಈ ಹಿಂದೆಯೇ ಗಂಭೀರವಾದ ತನಿಖಾ ವರದಿಯನ್ನು ನೀಡಲಾಗಿತ್ತು. ಈ ಕುರಿತು ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಆಗಿದ್ದ ಡಾ. ಲಿಂಗರಾಜ ಸದರಿ ಅವರು, ಬಸವರಾಜ ಕಟ್ಟಿಗೆ ಹಳ್ಳಿ ಅವರ ಹೆಸರನ್ನು ಉಲ್ಲೇಖಿಸಿ, “ಕೊಪ್ಪಳ ತಾಲೂಕಿನಲ್ಲಿ ನಕಲಿ ವೈದ್ಯರು ಸಕ್ರಿಯರಾಗಿದ್ದು, ಅವರ ಅನಧಿಕೃತ ಚಟುವಟಿಕೆಗಳ ಕುರಿತು ಕಟ್ಟುನಿಟ್ಟಿನ ವರದಿ ಸಲ್ಲಿಸಲಾಗುತ್ತದೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ಆಗಲೇ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದೆವು,” ಎಂದು ಸ್ಪಷ್ಟಪಡಿಸಿದ್ದರು.
​ಆದರೆ, ಡಿಎಚ್‌ಒ ಅವರು ನಕಲಿ ವೈದ್ಯರ ವಿರುದ್ದ ತಮ್ಮ ಕಚೇರಿಯಿಂದ ತನಿಖಾ ತಂಡ ರಚನೆ ಮಾಡಿ ವಿಚಾರಣೆ ನಡೆಸಿ ಸ್ಥಳ ಪರೀಶಿಲನೆ ನಡೆಸಿದರೇ 100 ಕ್ಕೂ ಹೆಚ್ಚು ನಕಲಿ ವೈದ್ಯರ ಕೊಪ್ಪಳ ನಗರ ಮತ್ತು ಸುತ್ತ-ಮುತ್ತಲಿನ ಹಳ್ಳಿ ಪ್ರದೇಶಗಳಲ್ಲಿ ಕ್ಲೀನಿಕ್‌ ನಡೆಸುವ ಸೂಕ್ತ ಮಾಹಿತಿ ಸಿಗುತ್ತದೇ ಆದರೇ ಇದೆಲ್ಲ ಮಾಹಿತಿ ಇದ್ದರೂ ಕೂಡ ಯಾವುದೇ ಶಾಶ್ವತ ಕ್ರಮ ಏಕೆ ಜರುಗಿಸಿಲ್ಲ ಎಂಬುದು ಸ್ಥಳೀಯ ಆರೋಗ್ಯ ಅಧಿಕಾರಿಗಳ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ

ಕೋವಿಡ್ ದುರಂತವೇ ಪಾಠವಾಗಲಿಲ್ಲ!
​ಹಿಂದಿನ ನಿದರ್ಶನಗಳು ಅಧಿಕಾರಿಗಳ ಮೌನಕ್ಕೆ ಕನ್ನಡಿ ಹಿಡಿದಿವೆ.
​ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ, ನಕಲಿ ವೈದ್ಯರ ತಪ್ಪು ಚಿಕಿತ್ಸೆಯಿಂದಲೇ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಾವುಗಳು ಹೆಚ್ಚಾಗುತ್ತಿವೆ ಎಂದು ಜಿಲ್ಲಾಡಳಿತವು ಸ್ವತಃ ಒಪ್ಪಿಕೊಂಡಿತ್ತು. ಆಗಿನ ಜಿಲ್ಲಾಧಿಕಾರಿಗಳ ಕಠಿಣ ಆದೇಶದ ಬಳಿಕವಷ್ಟೇ ಕುಷ್ಟಗಿ, ತಾವರಗೇರಾ ಸೇರಿದಂತೆ ಹಲವೆಡೆ ದಾಳಿ ನಡೆಸಿ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿತ್ತು. ಕೆಪಿಎಂಇ ಕಾಯಿದೆ ಅನ್ವಯ, ಅನಧಿಕೃತವಾಗಿ ವೃತ್ತಿ ನಡೆಸುವವರಿಗೆ ₹5 ಲಕ್ಷದವರೆಗೆ ದಂಡ ಮತ್ತು 3 ವರ್ಷ ಸೆರೆವಾಸ ವಿಧಿಸಲು ಅವಕಾಶವಿದ್ದರೂ, ಕೇವಲ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರವೃತ್ತಿ ಇಲ್ಲಿ ಬೆಳೆದುಬಂದಿದೆ.
​”ಈ ಹಿಂದಿನ ವರದಿಯನ್ನು ಇಟ್ಟುಕೊಂಡು ಪ್ರಸ್ತುತ ಡಿಎಚ್‌ಒ ಮತ್ತು ಇತರೆ ಅಧಿಕಾರಿಗಳು ಏಕೆ ದೃಢವಾದ ಕ್ರಮ ಕೈಗೊಂಡಿಲ್ಲ? ನಕಲಿ ವೈದ್ಯರ ಈ ಮಾಫಿಯಾಗೆ ಅಧಿಕಾರಿಗಳ ಮೌನವೇ ಕುಮ್ಮಕ್ಕು ನೀಡುತ್ತಿದೆಯೇ?” ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಣಭೇಟೆಯ ಆಗ್ರಹ: ಪ್ರಾಣ ರಕ್ಷಣೆಯಾಗಲಿಜಿಲ್ಲಾಡಳಿತವು ರೋಗಿಗಳ ಜೀವದ ರಕ್ಷಣೆಗಾಗಿ ಕೂಡಲೇ ಈ ಕೆಳಗಿ ಕ್ರಮಗಳನ್ನು ಜರುಗಿಸಬೇಕು:
​ಜಿಲ್ಲಾ ಕಾರ್ಯಪಡೆಯು ರಣರಂಗಕ್ಕೆ ಇಳಿಯಲಿ: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿರುವ ವಿಶೇಷ ಕಾರ್ಯಪಡೆಯು ತಕ್ಷಣವೇ ಎಲ್ಲಾ 100 ಕ್ಕೂ ಹೆಚ್ಚು ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ, ಕೆಪಿಎಂಇ ಕಾಯಿದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಜೈಲಿಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಬೇಕು.
​ಡಿಎಚ್‌ಒ ಲಿಂಗರಾಜ್ ಅವರ ಕಚೇರಿಯಲ್ಲಿ ನಕಲಿ ವೈದ್ಯರಿಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವದ ಆಡಳಿತ ಮತ್ತು ಜನರ ಪ್ರಾಣ ರಕ್ಷಣೆ ಕುರಿತಾಗಿದೆ. ಜಿಲ್ಲಾಡಳಿತವು ಕೂಡಲೇ ಎಚ್ಚೆತ್ತುಕೊಂಡು, ನಕಲಿ ವೈದ್ಯರ ಹಾವಳಿಯನ್ನು ನಿಯಂತ್ರಿಸದಿದ್ದರೆ, ಮುಂದಿನ ದಿನಗಳಲ್ಲಿ ಇದರ ಬೆಲೆ ಜಿಲ್ಲೆಯ ಜನತೆ ಜೀವ ತೆರುವ ಮೂಲಕ ಪಾವತಿಸಬೇಕಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಮುಂದುವರೆಯುತ್ತದೆ…….

error: Content is protected !!
Scroll to Top