ಕೊಪ್ಪಳದ ಉಪನೊಂದಣಾಧಿಕಾರಿ ಪ್ರದೀಪ್‌ ಕುಮಾರ ದರ್ಪಕ್ಕೆ ಕೊನೆಯಿಲ್ಲವೇ?

ಉಪನೊಂದಣಾಧಿಕಾರಿ ‘ಬ್ರೋಕರ್’ ದರ್ಬಾರ್ ‘ಶೀಲು’ ಮಾರಾಟಕ್ಕಿದೆ.!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಏ:06

ಅದು ಕೊಪ್ಪಳದ ಆ ಹಿರಿಯ ಉಪನೊಂದಣಾಧಿಕಾರಿಗಳ ಕಚೇರಿ. ಹೊರಗಡೆ ಬಿಸಿಲು ಸುಡುತ್ತಿದ್ದರೆ, ಒಳಗಡೆ ಕುಳಿತಿರುವ ಅಧಿಕಾರಿಯ ಅಹಂಕಾರ ಅದಕ್ಕಿಂತ ಹತ್ತು ಪಟ್ಟು ಜೋರಾಗಿ ಸಾರ್ವಜನಿಕರನ್ನು ಸುಡುತ್ತಿದೆ. ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದ, ಕಡತಗಳ ಧೂಳಿನ ನಡುವೆ ತಮ್ಮ ಹಕ್ಕುಗಳಿಗಾಗಿ ಅಲೆಯುವ ಸಾಮಾನ್ಯ ಜನರ ಪಾಲಿಗೆ ಈ ಕಚೇರಿ ಈಗ ‘ನರಕ’ವಾಗಿ ಪರಿಣಮಿಸಿದೆ. ಇಲ್ಲಿ ಪ್ರದೀಪ್ ಕುಮಾರ್ ಎಂಬ ಅಧಿಕಾರಿಯಿದ್ದಾನೆ. ಕೈಯಲ್ಲಿ ಪೆನ್ನು, ಮನಸ್ಸಲ್ಲಿ ಅಹಂಕಾರ, ಮತ್ತು ನಾಲಿಗೆಯಲ್ಲಿ ವಿಷ ತುಂಬಿಕೊಂಡಿರುವ ಈ ವ್ಯಕ್ತಿಗೆ ಸಾರ್ವಜನಿಕರೆಂದರೆ ಕೇವಲ ನಗಣ್ಯ ಜೀವಿಗಳು!


ಬ್ರೋಕರ್‌ಗಳ ಕೈಲಿ ‘ಸರ್ಕಾರಿ’ ಶೀಲುಗಳು!
ಇಲ್ಲಿನ ಅಸಲಿ ಖತರ್ನಾಕ್ ಆಟ ಇರುವುದೇ ಕಚೇರಿಯ ಶೀಲುಗಳಲ್ಲಿ. ಸರ್ಕಾರದ ಪವಿತ್ರವಾದ ಮೊಹರುಗಳು ಅಧಿಕಾರಿಯ ಮೇಜಿನ ಮೇಲಿರಬೇಕಿತ್ತು. ಆದರೆ, ಇಲ್ಲಿನ ವಾಸ್ತವವೇ ಬೇರೆ. ಕಚೇರಿಯ ಪ್ರತಿಯೊಂದು ಶೀಲು ಸದಾ ಬ್ರೋಕರ್‌ಗಳ ಕೈಯಲ್ಲಿರುತ್ತವೆ! ಸಾಮಾನ್ಯ ಜನ ಸಾಲಿನಲ್ಲಿ ನಿಂತು ಕಾದು ಸುಸ್ತಾದರೆ, ಬ್ರೋಕರ್‌ಗಳು ಮಾತ್ರ ಅಧಿಕಾರಿಯ ಪಕ್ಕದಲ್ಲೇ ಕುಳಿತು ತಮಗೆ ಬೇಕಾದ ಕಡೆ ಶೀಲು ಒತ್ತಿಕೊಳ್ಳುತ್ತಾರೆ. ಈ ಪ್ರದೀಪ್ ಕುಮಾರ್ ಎಂಬ ಮಹಾಶಯನಿಗೆ ಇದು ಕಾಣಿಸುತ್ತಿಲ್ಲವೋ ಅಥವಾ ಕಾಣದಂತೆ ನಟಿಸುತ್ತಿದ್ದಾರೋ? ಶೀಲುಗಳೇ ಬ್ರೋಕರ್‌ಗಳ ವಶವಾಗಿರುವಾಗ, ಈ ಕಚೇರಿ ಸರ್ಕಾರದ್ದೋ ಅಥವಾ ದಲ್ಲಾಳಿಗಳ ಅಡ್ಡೆಯೋ ಎಂಬ ಅನುಮಾನ ಮೂಡುವುದು ಸಹಜ.


ಏನು ಅಂದುಕೊಂಡಿದ್ದಾರೆ ಈ ಸಾಹೇಬರು?
ಕಣ್ಣೆದುರು ನಿಂತಿರುವ ಬಡಪಾಯಿ ವ್ಯಕ್ತಿ ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದರೆ, ಈ ಸಾಹೇಬರು ಅಸಡ್ಡೆಯಿಂದ ಫೋನಿನಲ್ಲೋ ಅಥವಾ ಕಂಪ್ಯೂಟರ್‌ನಲ್ಲೋ ಮುಳುಗಿರುತ್ತಾರೆ. ಪ್ರಶ್ನೆ ಕೇಳಿದರೆ ಸಾಕು, ಇವರೊಳಗಿನ ‘ಹಿಟ್ಲರ್’ ಜಾಗೃತವಾಗುತ್ತಾನೆ. “ನಿನ್ನ ಕೆಲಸ ಆಗಲ್ಲ ಹೋಗು”, “ನನಗೆ ಗೊತ್ತಿಲ್ಲ”, “ನಾಳೆ ಬಾ” ದಾಖಲೆ ಸರಿಯಾಗಿ ಇಲ್ಲ ಎಂದು ಪೇಪರ್‌ ಅವರ ಮೇಲೆ ಎಸೆಯುತ್ತಾನೆ. ಇವು ಈ ಪ್ರದೀಪ್ ಕುಮಾರ್ ಎಂಬ ಮಹಾಶಯನ ನಿತ್ಯದ ಮಂತ್ರಗಳು. ಸರ್ಕಾರ ಇವರಿಗೆ ಲಕ್ಷ ಲಕ್ಷ ಸಂಬಳ ಕೊಡುವುದು ಜನರ ಸೇವೆ ಮಾಡಲಿಕ್ಕೋ ಅಥವಾ ಬ್ರೋಕರ್‌ಗಳಿಗೆ ಕೆಂಪು ಹಾಸಿಗೆ ಹಾಸಿ ಜನರ ಮೇಲೆ ದರ್ಪ ತೋರಿಸಲಿಕ್ಕೋ?


ಲಂಚದ ವಾಸನೆ ಮತ್ತು ವ್ಯವಸ್ಥೆಯ ಅಣಕ
ಇಲ್ಲಿ ಕಡತಗಳು ತಾವಾಗಿಯೇ ಚಲಿಸುವುದಿಲ್ಲ. ಅವುಗಳಿಗೆ ‘ಗಾಂಧಿ’ ನೋಟಿನ ರೆಕ್ಕೆಗಳು ಬೇಕು. ಆ ರೆಕ್ಕೆಗಳಿಲ್ಲದಿದ್ದರೆ ನಿಮ್ಮ ಕಡತಗಳು ಈ ಕಚೇರಿಯ ಕಪಾಟಿನಲ್ಲಿ ಹೂತುಹೋಗುತ್ತವೆ. ಒಬ್ಬ ಅಧಿಕಾರಿ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಸೌಜನ್ಯವೂ ಇಲ್ಲದ ಇಂತಹವರು ಆ ಕುರ್ಚಿಗೆ ಅರ್ಹರೇ? ಕೊಪ್ಪಳದ ಜನತೆ ಈತನ ದೌರ್ಜನ್ಯವನ್ನು ಎಷ್ಟು ದಿನ ಸಹಿಸಬೇಕು? ಈ ವಿಡಿಯೋ ಸಾಕ್ಷಿಯಾಗಿ ಕಣ್ಣಮುಂದಿದ್ದರೂ ಮೇಲಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಆಶ್ಚರ್ಯದ ಸಂಗತಿ.
​ಪ್ರದೀಪ್ ಕುಮಾರ್ ಅವರೇ, ನೆನಪಿರಲಿ. ಆ ಕುರ್ಚಿ ನಿಮ್ಮ ಅಪ್ಪನ ಆಸ್ತಿಯಲ್ಲ. ಶೀಲುಗಳು ಬ್ರೋಕರ್‌ಗಳ ಕೈಯಲ್ಲಿಟ್ಟುಕೊಂಡು ನೀವು ಯಾವ ‘ಪಾರದರ್ಶಕ’ ಆಡಳಿತ ನೀಡುತ್ತಿದ್ದೀರಿ? ಜನರೇ ನಿಮ್ಮನ್ನು ಅಲ್ಲಿ ಕೂರಿಸಿದ್ದಾರೆ, ಜನರೇ ನಿಮ್ಮನ್ನು ಕೆಳಗಿಳಿಸಲೂ ಬಲ್ಲರು. ನಿಮ್ಮ ಈ ದರ್ಪದ ಆಟ ಹೆಚ್ಚು ದಿನ ನಡೆಯುವುದಿಲ್ಲ. ಈ ವಿಡಿಯೋ ಕೇವಲ ಒಂದು ಟ್ರೈಲರ್ ಅಷ್ಟೆ, ಜನರ ಆಕ್ರೋಶದ ಕ್ಲೈಮ್ಯಾಕ್ಸ್ ಇನ್ನು ಬಾಕಿಯಿದೆ!

error: Content is protected !!
Scroll to Top