ರಣಬೇಟೆ ನ್ಯೂಸ್
ಕೊಪ್ಪಳ.
ಯಾವುದೇ ಸ್ಪರ್ಧೆಗಳಾಗಲಿ ಕೇವಲ ಕ್ರೀಡಾ ಮನೋಭಾವನೆಯಿಂದ ಕಾಣಬೇಕೆ ಹೊರತು ಅದನ್ನೇ ಜೀವನವನ್ನಾಗಿಸಿ ಕೊಳ್ಳುವ ಅಥವಾ ಜೂಜಾಟ, ಮೋಜಾಟ, ಮನೋರಂಜನೆ ಹಾಗೂ ವ್ಯಾಪಾರ ಮಾಡಿಕೊಳ್ಳುವುದು ದುರದೃಷ್ಟದ ಸಂಗತಿಯಾಗಿದ್ದು ಯಾವುದೇ ಸ್ಪರ್ಧೆಗಳಾಗಲಿ ಅವನು ಕ್ರೀಡಾ ರೂಪದಲ್ಲಿ ಕಂಡಾಗ ಮಾತ್ರ ಅದರ ಮಹತ್ವ ಮನವರಿಕೆಯಾಗುತ್ತದೆ.
ಇತ್ತೀಚಿಗೆ ಭಾರತೀಯ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿನಿಧಿಸುವ ರ್‌ಪಿಬಿ ತಂಡ ಸುಮಾರು 17 ವರ್ಷಗಳ ನಂತರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಸಂತಸದ ವಿಷಯ ಆದರೆ ಅದು ಕೇವಲ ಸೀಮಿತ ಸಂತೋಷಕ್ಕೆ ಸೀಮಿತವಾಗಿ ಇರಬೇಕಿತ್ತು ಆದರೆ ದೇಶದ ಒಟ್ಟು ಜನಸಂದಣಿಯಲ್ಲಿ 30 ರಿಂದ 40% ಜನರಿಗೆ ಸಂಪೂರ್ಣ ಮಾಹಿತಿ ಇದ್ದು ಅದನ್ನು ಇಷ್ಟಪಟ್ಟು ವೀಕ್ಷಣೆ ಮಾಡುತ್ತಾರೆ ಇಂತಹ ಕಾರಣಗಳಿಂದಲೇ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಎಂದು ಸಹ ಕರೆಯಲಾಗುತ್ತದೆ.
ಈ ಕ್ರಿಕೆಟ್ ಆಟವನ್ನು ಗಮನಿಸಿದರೆ ಈ ಕ್ರಿಕೆಟ್ ಭಾರತದ ಇತರೆ ಕ್ರೀಡೆಗಳು ಬೆಳಕಿಗೆ ಬಾರದಂತೆ ತನ್ನದೇ ಆದ ಪಾರುಪತ್ಯವನ್ನು ಹೊಂದಿದ್ದು ದೇಶಾದ್ಯಂತ ವ್ಯಾಪಕವಾಗಿ ಆವರಿಸಿಕೊಂಡಿದೆ ದುರಾದೃಷ್ಟವೇನೆಂದರೆ ಭಾರತದಲ್ಲಿ ಕ್ರಿಕೆಟ್ ಅನ್ನು ಕೇವಲ ಕ್ರೀಡೆ ಅಂದುಕೊಳ್ಳದೆ ಕ್ರೀಡಾ ಮನೋಭಾವ ಮೀರಿ ತೀರ ಅತಿರೇಕದ ಭಾವನೆಗಳನ್ನು ಜನರಲ್ಲಿ ಮೂಡಿಸಿದ್ದು ಕೆಲವರಿಗೆ ಇದು ಜೀವನಕ್ಕಿಂತ ಹೆಚ್ಚಿನ ಅಭಿಮಾನವನ್ನು ಮೂಡಿಸಿದ್ದು ಇನ್ನೂ ಕೆಲವರಿಗೆ ಜೂಜು, ಮೋಜು ಹಾಗೂ ಅವರ ವ್ಯಾಪಾರವೇ ಆಗಿಹೋಗಿದೆ. ದೇಶದಲ್ಲಿ ಚೆನ್ನಾಗಿ ಆಟವಾಡಿದ ಕ್ರಿಕೆಟ್ ಪಟುವನ್ನು ದೇವರ ಸ್ಥಾನಕ್ಕೆ ಹೋಲಿಸಿ ಹೊಗಳುವುದು ಹಾಗೂ ಪಂದ್ಯವನ್ನು ಗೆಲ್ಲಲು ದೇವಸ್ಥಾನಗಳಲ್ಲಿ ಹೋಮ ಹವನ ವಿಶೇಷ ಪೂಜೆ ಮಾಡಿಸುವುದು ಅತಿರೇಕರ ಸಂಕೇತವಾಗಿವೆ.
ಆಯಾ ದೇಶದ, ರಾಜ್ಯದ, ಪ್ರದೇಶದ, ಊರಿನ ಅಥವಾ ಆ ವ್ಯಕ್ತಿಯ ಕುಟುಂಬದವರು. ಅಭಿಮಾನಿಗಳು ಮತ್ತು ಬೆಂಬಲಿಗರು ತಮ್ಮ ತಮ್ಮ ತಂಡಗಳ ವಿಜಯವನ್ನು ಬಯಸುವುದು, ನಿರೀಕ್ಷಿಸುವುದು, ಆತಂಕದಿಂದ ಕಾಯುವುದು ಮತ್ತು ತಮ್ಮ ನಂಬುಗೆಯ ದೈವದ ಪ್ರಾರ್ಥನೆ. ಒಂದು ಸಹಜ ವರ್ತನೆ…..

ಅದನ್ನು ಮೀರಿ ಅತಿಯಾಗಿ ಏನೇ ಮಾಡಿದರು ಅದು ಅತಿರೇಕ ಆಗಿದ್ದು ಯಾವುದೇ ದೇಶ ಅಥವಾ ಧರ್ಮದವರೇ ಆಗಲಿ ಪೂಜೆ ಪುನಸ್ಕಾರಗಳು, ದೇಶದ ಒಟ್ಟು ಸಾಮರ್ಥ್ಯದ ಪ್ರದರ್ಶನ ಎಂಬಂತೆ ವರ್ತಿಸುವುದು ಕ್ರೀಡಾ ಧರ್ಮಕ್ಕೆ ವಿರುದ್ಧ ಮತ್ತು ಮೌಡ್ಯ. ಏಕೆಂದರೆ ಆ ಕ್ರಿಯೆಗಳು ಆಟಗಾರರು ಮತ್ತು ಕ್ರೀಡೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಕ್ರೀಡೆಯಲ್ಲಿ ಇಡೀ ದೇಶದ ಎಲ್ಲರೂ ಭಾಗವಹಿಸುವುದಿಲ್ಲ. ಹಾಗೆಯೇ ಕ್ರೀಡಾ ಫಲಿತಾಂಶ ಶಾಶ್ವತವೇನು ಅಲ್ಲ. ಆ ಕ್ಷಣದ ಸೋಲು ಗೆಲುವು ಮಾತ್ರ ಅದು ಮತ್ತೆ ಆಡಿದಾಗ ಯಾವುದೇ ಸಮಯದಲ್ಲಿ ಫಲಿತಾಂಶ ಬದಲಾಗಬಹುದು…
ಇದು ಒಂದು ದೇಶದ ನಾಗರಿಕ ಪ್ರಜ್ಞೆಯ ಸಂಕೇತ. ಒಂದು ಹಂತದ ಕೂಗಾಟ, ಕಿರುಚಾಟ, ಚಪ್ಪಾಳೆ. ನೃತ್ಯ ಎಲ್ಲವೂ ವೈಯಕ್ತಿಕ ಮತ್ತು ಸಾಮೂಹಿಕ ಮಟ್ಟದಲ್ಲಿ ಸಹನೀಯ. ಆದರೆ ಅದನ್ನು ಮೀರಿ ಹಿಂಸೆ, ಅಸೂಯೆ, ಕೋಪ, ದ್ವೇಷ, ಅನಾಗರಿಕ ವರ್ತನೆ, ಪ್ರತಿಸ್ಪರ್ಧಿಯ ನಿಂದನೆ, ಫಲಿತಾಂಶ ಒಪ್ಪಿಕೊಳ್ಳದಿರುವುದು ಎಲ್ಲವೂ ವ್ಯಕ್ತಿಯ ಮತ್ತು ದೇಶದ ನಾಗರಿಕ ಪ್ರಜ್ಞೆಯನ್ನೇ ಪ್ರಶ್ನಿಸುವಂತಾಗುತ್ತದೆ. ಜೊತೆಗೆ ಆರ್‌ಸಿಬಿಯ ವಿಜಯೋತ್ಸವ 11 ಜನರ ಪ್ರಾಣಕ್ಕೆ ಕುತ್ತು ತಂದಿರುವುದು ವಿಪರ್ಯಾಸವಾಗಿದ್ದು. ಇಲ್ಲಿ ಪ್ರಶಸ್ತಿಯನ್ನು ಗೆದ್ದು ತಂದ ಆಟಗಾರರು, ಕಾರ್ಯಕ್ರಮವನ್ನು ಆಯೋಜಕರು, ಪೊಲೀಸ್ ಇಲಾಖೆ ಹಾಗೂ ಸರ್ಕಾರ ಸೇರಿದಂತೆ ಅಭಿಮಾನಿಗಳು ಸಹ ಈ ಸಂಭ್ರಮಾಚರಣೆಯ ಸೂತಕಕ್ಕೆ ಕಾರಣವಾಗಿದ್ದು ಮುಂದೆಂದು ಇಂತಹ ಅವಘಡ ಸಂಭವಿಸದೆ ಇರಲಿ ಎಂಬುದು ಎಲ್ಲರ ಆಶಯವಾಗಿದೆ .
ಆದ್ದರಿಂದ ಆರ್ಸಿಬಿ ಗೆಲುವನ್ನು ಒಂದು ಸಜಹ ಕ್ರೀಡಾ ಸ್ಪೂರ್ತಿಯಿಂದ ಆಸ್ವಾಧಿಸೋಣ. ಸೋಲು ಗೆಲುವನ್ನು ಸಹ ಸಹಜವಾಗಿ ಸ್ವೀಕರಿಸೋಣ. ಈ ಟೆಲಿವಿಷನ್ ಮಾಧ್ಯಮಗಳ ಹುಚ್ಚು ಮತ್ತು ವಿಕೃತ ಸ್ವಭಾವದ ನಡವಳಿಕೆಗಳ ಸುದ್ದಿ ಪ್ರಸಾರದ ಅನಾಗರಿಕ ನಡವಳಿಕೆಗೆ ಬಲಿಯಾಗದೆ ದೇಶದ ಸಾಂಸ್ಕೃತಿಕ ವ್ಯಕ್ತಿತ್ವದ ಘನತೆಯನ್ನು ಎತ್ತಿ ಹಿಡಿಯೋಣ….
ಕ್ರಿಕೆಟ್ ಆಟಗಾರರು ದೇವರುಗಳು ಅಲ್ಲ, ಅತಿಮಾನುಷ ಶಕ್ತಿಗಳು ಅಲ್ಲ. ಕೇವಲ ಪ್ರತಿಭಾವಂತ ಕ್ರೀಡಾ ಪಟುಗಳು ಮಾತ್ರ ಅದನ್ನು ಗೌರವಿಸುತ್ತಾ….