ದೀಪದ ಕೆಳಗಿನ ಕತ್ತಲೆಯಂತಾದ ಪತ್ರಕರ್ತರ ಬದುಕು!

ಮಲ್ಲಿಕಾರ್ಜುನ ಬಂಗ್ಲೆ ಮಾತ್ರ ರಾಜ್ಯದ ಪತ್ರಕರ್ತರ ಆಶಾಕಿರಣ

ರಣಬೇಟೆ ನ್ಯೂಸ್‌ ಬೆಂಗಳೂರು.

ಪತ್ರಿಕಾ ವರದಿಗಾರರು ಹಾಗೂ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಸಂವಿಧಾನದ ನಾಲ್ಕನೇ ಅಂಗ್ಯವಾಗಿದ್ದಾರೆ ಎಂದು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರು ಸಭೆ ಸಮಾರಂಭಗಳಲ್ಲಿ ಹೇಳೋದನ್ನು ಎಲ್ಲರು ಕೇಳಿರುತ್ತೀರಿ ಆದರೆ ಸಂವಿಧಾನದ ನಾಲ್ಕನೇ ಅಂಗ ಎಂದು ಎಲ್ಲೂ ಸಹ ಉಲ್ಲೇಖವಿಲ್ಲ ಹಾಗೂ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಬದುಕು ಮಾತ್ರ ಹೀನಾಯ ಸ್ಥಿತಿಯಲ್ಲಿದ್ದು ಅವರ ಕಷ್ಟ ಹೇಳುತ್ತಿರುವುದು. ಸಮಾಜದ ಅನುಕೂಲಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಕರ್ತರು ಎಲ್ಲಾ ಮಹನೀಯರ ಪ್ರಚಾರಕ್ಕೆ ಬಳಕೆಯಾಗುತ್ತಿದ್ದಾರೆ ಹೊರತು ಅವರ ಕಷ್ಟ ಸುಖಗಳನ್ನು ಅರಿತು ಅವುಗಳನ್ನು ಈಡೇರಿಸಿ ಪತ್ರಕರ್ತರ ಬದುಕನ್ನು ಹಸನಾಗಿಸುವ ಉದ್ದೇಶ ಮಾತ್ರ ಯಾವ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳಲ್ಲಾಗಲಿ ಕಂಡುಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪತ್ರಕರ್ತರಿಗೆ ಊರುಗೋಲಾಗಿ ಅವರ ಕತ್ತಲೆಯ ಬಾಳಿಗೆ ಬೆಳಕಾಗಿ ನಿಂತಿರುವ ಏಕೈಕ ವ್ಯಕ್ತಿ ಎಂದರೆ ಬಂಗ್ಲೆ ಮಲ್ಲಿಕಾರ್ಜುನ.
ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡುವ ದೀಪದ ಬುಡದಲ್ಲಿಯೇ ಕತ್ತಲೆ ಆವರಿಸಿಕೊಂಡಂತಹ ಪರಿಸ್ಥಿತಿ ಇಂದು ಪತ್ರಕರ್ತರಿಗೆ ಒದಗಿ ಬಂದಿದ್ದು ಆ ಕತ್ತಲೆಗೆ ಕಂಡು ಬರುತ್ತಿರುವ ಏಕೈಕ ಬೆಳಕಿನ ಆಶಾಕಿರಣವಾಗಿ ಮಲ್ಲಿಕಾರ್ಜುನ ಬಂಗ್ಲೆ ಹೊರಹೊಮ್ಮಿದ್ದಾರೆ.


ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದವರಾದ ಮಲ್ಲಿಕಾರ್ಜುನ ಬಂಗಲೆ. ಹೆಸರು ಮಾತ್ರ ಬಂಗಲೆಯಾಗಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ತುಂಬಾ ಜೀವನವನ್ನು ಸಾಗಿಸಿಕೊಂಡು ಬಂದವರು. ಅವರ ತಾತ ಮುತ್ತಾತನವರು ಯಾರದು ಬಂಗಲೇ ಕಾಯುವ ಕಾಯಕ ಮಾಡುತ್ತ ಬಂದಿದ್ದು ಇವರ ಮನೆತನಕ್ಕೆ ಬಂಗಲೇ ಎಂಬ ಹೆಸರು ಬಂದಿರುತ್ತದೆ. ಆದರೆ ವಾಸ್ತವವಾಗಿ ಮಧ್ಯಮ ವರ್ಗದ ಬಳ್ಳಾರಿಯಲ್ಲಿ ಮಾಸಪತ್ರಿಕೆಯನ್ನು ಪ್ರಾರಂಭಿಸಿ ನಂತರದ ದಿನಗಳಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ನಂತರ ರಾಜ್ಯ ತಂಡದಲ್ಲಿ ಸಹ ಕಾರ್ಯನಿರ್ವಹಿಸಿ ನಂತರ ಸತ್ಯಾಸತ್ಯತೆಗೆ ಬೆಲೆ ಇಲ್ಲ ಎಂಬುದನ್ನು ಅರಿತುಕೊಂಡು ಪತ್ರಕರ್ತರ ಸಂಘದಲ್ಲಿ ಈ ಸಮಯದಲ್ಲಿದ್ದಾರೆ ಪತ್ರಕರ್ತರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿಲ್ಲ ಎಂಬುದನ್ನು ಮನಗೊಂಡು 2022-23ರ ಮೇ 25 ರಂದು ನೂತನವಾಗಿ ಕಾರ್ಯನಿರತ ಪತ್ರಕರ್ತರ ಎಂಬ ಸಂಘಟನೆಯನ್ನು ಸ್ಥಾಪಿಸುವುದರ ಮೂಲಕ ರಾಜ್ಯದ ಪತ್ರಕರ್ತರಿಗೆ ಧ್ವನಿಯಾಗಿ ನಿಂತವರು ಇದೆ ಮಲ್ಲಿಕಾರ್ಜುನ ಬಂಗಲೆ. ನೂತನ ಪತ್ರಕರ್ತರ ಸಂಘಟನೆಯನ್ನು ಸ್ಥಾಪಿಸಿ ರಾಜ್ಯಾಧ್ಯಕ್ಷರಾಗಿ ರಾಜ್ಯಾದ್ಯಂತ ಸಂಘಟನೆ ಮಾಡುತ್ತ ಬಂದಿರುವುದು ಹೊಸ ಇತಿಹಾಸವಾಗಿದೆ ಎಂದರೆ ತಪ್ಪಾಗಲಾರದು.
ಮಲ್ಲಿಕಾರ್ಜುನ ಬಂಗಲೆ ಇಡುತ್ತಿರುವ ಪ್ರತಿ ಹೆಜ್ಜೆಯೂ ಪತ್ರಕರ್ತರ ಶ್ರೇಯಸ್ಸು ಮತ್ತು ಏಳಿಗೆಯನ್ನು ಬಯಸುತ್ತಾ ಸಾಗುತ್ತಿದ್ದು ಪತ್ರಕರ್ತರಿಗೆ ಮಾಸಾಶನ, ರಾಜ್ಯಾದ್ಯಂತ ಸಂಚರಿಸಲು ಬಸ್ ಪಾಸ್ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಪತ್ರಕರ್ತರಿಗೂ ಸಹ ಆದ್ಯತೆ ಸೇರಿದಂತೆ ಇನ್ನಿತರ ಕಲ್ಪಿಸುವಂತೆ ಹಗಲಿರುಳು ಶ್ರಮಿಸುತ್ತಾ ಬೀದಿಗಿಳಿದು ಪತ್ರಕರ್ತರಿಗಾಗಿ ಹೋರಾಟ ಮಾಡುತ್ತಿರುವ ಏಕೈಕ ಜೀವಿ ಮಲ್ಲಿಕಾರ್ಜುನ ಬಂಗ್ಲೆ.
ಇಂತಹ ಹೋರಾಟಗಾರನ ಕಿರೀಟಕ್ಕೆ ಮತ್ತೊಂದು ವಜ್ರದ ಹರಳು ಸೇರಿಕೊಂಡಿದ್ದು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳು ಮಹಾ ಒಕ್ಕೂಟ ರಚನೆಯಾಗಿದ್ದು ಆ ಒಕ್ಕೂಟಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಬಲ್ಲೆ ಮಲ್ಲಿಕಾರ್ಜುನ ಆಯ್ಕೆಗೊಂಡಿರುವುದು ಸಾಧನೆಯ ದಾರಿಗೆ ಬೆಳಕು ಚೆಲ್ಲಿದಂತಾಗಿದೆ. ಕಾರ್ಯನಿರತ ಪತ್ರಕರ್ತರ ಏಕೈಕ ಆಶಾಕಿರಣ ಬಂಗ್ಲೆ ಮಲ್ಲಿಕಾರ್ಜುನರಾಗಿದ್ದು ಅವರು ಸಾಗುವ ದಾರಿ ಯಶಸ್ವಿಗೊಂಡರೆ ಪ್ರತಿಯೊಬ್ಬರ ಜೀವನ ಸುಗಮಗೊಳ್ಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಆದ್ದರಿಂದ ಯಶಸ್ಸು ಕಾಣುವುದರೊಂದಿಗೆ ಪತ್ರಕರ್ತರ ಸಮಸ್ಯೆಗಳು ಇತ್ಯರ್ಥ ಗೊಳ್ಳಲಿ ಎಂಬುದು ನಮ್ಮ ರಣಭೇಟೆ ತಂಡದ ಆಶಯವಾಗಿದೆ.

error: Content is protected !!
Scroll to Top