ರಣಬೇಟೆ ನ್ಯೂಸ್ ಕೂಕನೂರ.
ಕೂಕನೂರ ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಇಬ್ಬರು ಹಿರಿಯ ವ್ಯಕ್ತಿಗಳ ಮೇಲೆ ಕೆಇಬಿಯ ದಂಡ ಪಾವತಿಸಿಲ್ಲ ಎಂದು ಠಾಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಕುರಿತು ಇಂದು ಕಕ್ಕಿಹಳ್ಳಿ ಗ್ರಾಮದ ನಾರಾಯಣಪ್ಪ ಕಟ್ಟಿಮನಿ ಹಾಗೂ ಶಂಕ್ರಪ್ಪ ಸೂಳಕೇರಿ ಎಂಬುವವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಪ್ಪಳ ಇವರಿಗೆ ಕುಕನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗುರುರಾಜ್ ಟಿ ವಿರುದ್ಧ ದೂರು ನೀಡಿದ್ದಾರೆ.

ಪಿಎಸ್ಐ ಗುರುರಾಜ್ ರವರು ಇಬ್ಬರೂ ಗ್ರಾಮಸ್ಥರನ್ನು ಠಾಣೆಗೆ ಕರೆಸಿ ಕೆಇಬಿಯು ದಂಡ ವಿಧಿಸಿದ್ದು, ಇದು ಒಂದು ಕಳ್ಳತನ ಪ್ರಕರಣವಾಗಿದೆ, ನಿಮ್ಮ ಮೇಲೆ ಅರೆಸ್ಟ್ ವಾರೆಂಟಾಗಿದೆ. ಹಾಗಾಗಿ ನೀವು ಈ ತಕ್ಷಣ ದಂಡವನ್ನು ಕಟ್ಟಬೇಕು ಇಲ್ಲವಾದರೆ ನಿಮ್ಮ ಮೇಲೆ ಎಫ್ಐಆರ್ ದಾಖಲಾಗುತ್ತದೆ ಆಮೇಲೆ ಕಠಿಣ ಕ್ರಮ ಜರಿಸಬೇಕಾಗುತ್ತದೆ ಎಂದು ಹೇಳಿ ಗಧರಿಸಿದ್ದಾರೆ. ಬಳಿಕ ಗ್ರಾಮಸ್ಥರು ಪಿಎಸ್ಐ ಅವರನ್ನು ಮನವಿ ಮಾಡಿಕೊಂಡು ಈ ದಂಡವನ್ನ ನಾಳೆ ಕಟ್ಟುತ್ತೇವೆ ಕಾಲಾವಕಾಶ ಕೊಡಿ ಸರ್ ಎಂದು ಮನವಿ ಮಾಡಿದ್ದಾರೆ. ಇವರ ಮನವಿಗೆ ಸ್ಪಂಧಿಸದ ಪಿಎಸ್ಐ ಇವರಿಬ್ಬರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ನಾರಾಯಣಪ್ಪ ಎನ್ನುವರಿಗೆ ಕಪಾಳಕ್ಕೆ ಜೋರಾಗಿ ಹೊಡೆದಿದ್ದಾರೆ ಎಂದು ನೊಂದವರು ಪಿಎಸ್ಐ ಮೇಲೆ ಆರೋಪ ಮಾಡಿದ್ದಾರೆ.