ರಣಬೇಟೆ ನ್ಯೂಸ್ ಕೊಪ್ಪಳ.
ಭಾರತೀಯ ಜನತಾ ಪಕ್ಷ ಕೊಪ್ಪಳ ಜಿಲ್ಲಾ ಮೊರ್ಚಾ ವತಿಯಿಂದ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ನಂತರ ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ದಡೇಸುಗೂರು ಮಾತನಾಡಿ ಕೊಪ್ಪಳ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ಜರುಗುತ್ತಿದ್ದು ಮರಳು ದಂಧೆ ಕೋರರಿಗೆ ಕಾನೂನು ವ್ಯವಸ್ಥೆಯ ಯಾವುದೇ ರೀತಿಯ ಭಯವಿಲ್ಲದ ವಾತಾವರಣ ನಿರ್ಮಿಸಿಕೊಂಡಿದ್ದಾರೆ. ನೈಸರ್ಗಿಕ ಸಂಪತ್ತನ್ನು ಅಕ್ರಮವಾಗಿ ಕೊಳ್ಳೆ ಹೊಡೆಯುತ್ತಿರುವ ಮರಳು ದಂಧೆ ಗಾರರಿಗೆ ಕಾನೂನು ವ್ಯವಸ್ಥೆಯ ಅರಿವು ಮೂಡಿಸುತ್ತ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ಕಾರ್ಯ ಶೀಘ್ರದಲ್ಲಿ ಜರುಗಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವೆಟರ್ ಮಾತನಾಡಿ ಮರಳು ಗಣಿಗಾರಿಕೆಯಲ್ಲಿ ತೊಡಗಿದ ದಂಧೆ ಕೋರರೂ ಹಾಗೂ ಮರಳು ಸಾಗಾಣೆ ದಾರರಿಗೆ ಯಾವುದೇ ಅಂಜಿಕೆ ಇಲ್ಲದೆ ರಾಜಾರೋಷವಾಗಿ ಅಕ್ರಮ ದಂಧೆಯಲ್ಲಿ ತೊಡಗಿದ್ದು ಇವರನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಶೀಘ್ರದಲ್ಲಿ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಪ್ರಮುಖರಾದ ಚಂದ್ರಶೇಖರ್ ಕವಲೂರು,ಗಣೇಶ್ ಹೊರತಟ್ನಾಳ್, ಪ್ರದೀಪ್ ಇಟ್ನಾಳ್, ರಮೇಶ್ ಕವಲೂರು, ಉಮೇಶ್ ಕುರಡೇಕರ್, ವಾಣಿ ಶ್ರೀ ಮಠದ್, ಕೀರ್ತಿ ಪಾಟೀಲ್, ರಾಜು ವಸ್ತ್ರದ, ರೇವತಿ ಮಟ್ಟಿ, ಸುನಂದ ಹಂಚಿನಾಳ, ಗೀತಾ ಬಳ್ಳಾರಿ, ಹಾಗೂ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.