ಮಿತಿಮೀರಿದ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಯಾವಾಗ…?

ಬಾರ್ ಗಳ ವಿರುದ್ದದ ದೂರುಗಳಿಗೆ ಕ್ಯಾರೇ ಎನ್ನದ ಅಬಕಾರಿ ಡಿಸಿ.

ರಣಬೇಟೆ ನ್ಯೂಸ್

ಕೊಪ್ಪಳ.ಆ.08: ಕುಡುಕರಿಂದಲೇ ಸರಕಾರಗಳು ನಡೆಯುತ್ತವೆ ಎಂಬ ಮಾತು ಜನಜನೀತವಾಗಿದೆ. ಆದರೆ, ಮದ್ಯದ ಅಂಗಡಿಗಳಿಂದ ಸಂದಾಯವಾಗುವ ಮಾಮೂಲು ಹಾಗೂ ಕುಡುಕರ ತೆವಲಿನಿಂದಾಗಿ ಜಿಲ್ಲೆಯ ಒಂದು ವರ್ಗದ ಅಧಿಕಾರಿಗಳ ಬದುಕು ಬಂಗಾರವಾಗುತ್ತದೆ ಎಂದರೆ ನೀವು ನಂಬುತ್ತೀರಾ…? ಹೌದು, ನೀವು ನಂಬಲೇಬೇಕು. ತಾಲೂಕಿನ ಪ್ರತಿಯೊಂದು ಮದ್ಯದ ಅಂಗಡಿಯಿಂದ ಯಾವ ಯಾವ ಅಧಿಕಾರಿಗಳಿಗೆ ಎಷ್ಟೆಷ್ಟು ತಿಂಗಳ ಮಾಮೂಲು ಸಲ್ಲುತ್ತದೆ ಎಂಬ ವಿವರಗಳನ್ನು ಕೇಳಿದರೆ ನೀವೇ ದಂಗಾಗುತ್ತೀರಿ. ಇಲ್ಲಿದೆ ನೋಡಿ ಆ ಕುರಿತಾದ ವಿಸ್ತ್ರತ ವರದಿ.
ಸರಕಾರ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡಬೇಕಾದರೆ ಕೆಲವರಿಗೆ ಷರತ್ತುಗಳನ್ನು ವಿಧಿಸಿ ಪರವಾನಿಗೆ ನೀಡುತ್ತದೆ. ಅವುಗಳಲ್ಲಿ ಸಿ.ಎಲ್.- 2, ಸಿ.ಎಲ್-7, ಸಿ.ಎಲ್-9 ಇನ್ನಿತರ ಪರವಾನಿಗೆಯ ಪ್ರಕಾರಗಳಿವೆ. ಅಷ್ಟಕ್ಕೂ ಸಿ.ಎಲ್-2 ಎಂದರೆ ಮದ್ಯದ ಅಂಗಡಿಗಳಲ್ಲಿ ಮದ್ಯಪ್ರಿಯರಿಗೆ ಯಾವುದೇ ರೀತಿಯ ಆಸನ ವ್ಯವಸ್ಥೆಯಾಗಲೀ, ಕುಳಿತು ಕುಡಿಯುವ ಸೌಕರ್ಯಗಳಾಗಲೀ ಇರುವುದಿಲ್ಲ. ಕೇವಲ ಮದ್ಯಪ್ರಿಯರು ಕೇಳಿದ ಮದ್ಯವನ್ನು ಕೊಟ್ಟು ಕಳುಹಿಸಬೇಕು. ಆದರೆ, ಸಿ.ಎಲ್-2 ಪರವಾನಿಗೆ ಹೊಂದಿದ ಮದ್ಯದ ಅಂಗಡಿಗಳು ಮದ್ಯಪ್ರಿಯರಿಗೆ ಎಲ್ಲಾ ಸೌಕರ್ಯವನ್ನು ಕೊಡುವುದು ನಿಯಮ ಬಾಹೀರವಾಗಿರುತ್ತದೆ. ಅದೇ ರೀತಿ ಸಿ.ಎಲ್- 7 ಪರವಾನಿಗೆ ಹೊಂದಿದ ಮದ್ಯದ ಅಂಗಡಿಗಳು ಕೇವಲ ಲಾಡ್ಡಿಂಗ್ಸ್ ಅಂದರೆ ಪ್ರವಾಸಿಗರ ವಸತಿ ತಾಣಗಳಲ್ಲಿ ಬರುವ ಪ್ರವಾಸಿಗರಿಗೆ ಮಾತ್ರ ಮದ್ಯವನ್ನು ಸರಬರಾಜು ಮಾಡಬೇಕು ಮತ್ತು ಚಿಲ್ಲರೆ ವಹಿವಾಟುಗಳಿಲ್ಲದೇ ತುಂಬಿದ ಬಾಟಲುಗಳನ್ನೇ ಪೂರೈಸಬೇಕು. ಆ ವಸತಿ ಗೃಹಗಳಲ್ಲಿ ತಂಗುವ ಪ್ರವಾಸಿಗರಿಗೆ ಅವರ ಕೊಠಡಿಗಳಲ್ಲೇ ಮದ್ಯಪ್ರಿಯರಿಗೆ ಮದ್ಯ ಸೇವನೆಗೆ ಅವಕಾಶ ನೀಡಬೇಕೆ ಹೊರತು ಅವರಿಗಾಗಿ ಪ್ರತ್ಯೇಕವಾಗಿ ಯಾವುದೇ ಆಸನಗಳ ಸೌಕರ್ಯವನ್ನು ನೀಡಬಾರದು. ಮದ್ಯ ಪೂರೈಕೆಗಾಗಿ ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಬಾರದು ಎಂಬ ನಿಯಮವಿದೆ ಮತ್ತು ಇವರುಗಳು ಪ್ರತಿನಿತ್ಯ ಓಪನಿಂಗ್ ಬ್ಯಾಲೆನ್ಸ್ ಹಾಗೂ ಕ್ಲೋಸಿಂಗ್ ಬ್ಯಾಲೆನ್ಸ್ ವಿವರಗಳನ್ನು ಡಿಮ್ಯಾಂಡ್ ರಿಜಿಸ್ಟರ್‍ನಲ್ಲಿ ನಮೂದಿಸಿ ಅಬಕಾರಿ ಇಲಾಖೆಗೆ ವರದಿ ನೀಡಬೇಕಾಗಿದ್ದು ಕಡ್ಡಾಯವಾಗಿರುತ್ತದೆ. ಇನ್ನು ಸಿ.ಎಲ್-9 ಪರವಾನಿಗೆ ಮದ್ಯದ ಅಂಗಡಿಗಳಲ್ಲಿ ವಸತಿ ಹೊಂದಿರುವ ಮದ್ಯಪ್ರಿಯ ಪ್ರವಾಸಿಗರಿಗೆ ಹಾಗೂ ಹೊರ ಗ್ರಾಹಕರಿಗೆ ಮದ್ಯ ಪೂರೈಸಬಹುದು. ಅದು ಕೂಡ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ 60 ಎಂ.ಎಲ್., 90 ಎಂ.ಎಲ್.ನಿಂದ ಹಿಡಿದು ಪೂರ್ಣ ಬಾಟಲಿಯವರೆಗೆ ನೀಡುವ ಅವಕಾಶವಿದೆ. ಅಲ್ಲದೇ ಲಾಡ್ಡಿಂಗ್‍ನ ಗ್ರಾಹಕರು ಹಾಗೂ ಹೊರ ಗ್ರಾಹಕರಿಗೂ ಅಗತ್ಯಕ್ಕೆ ತಂಕ್ಕಂತೆ ಆಸನದ ವ್ಯವಸ್ಥೆಯಿಂದ ಹಿಡಿದು ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸುವ ಪರವಾನಿಗೆ ಅಬಕಾರಿ ಇಲಾಖೆಯಿಂದ ನೀಡಲಾಗಿರುತ್ತದೆ. ಹೀಗಾಗಿ ಸಿ.ಎಲ್-9 ಪರವಾನಿಗೆ ಹೊಂದಿರುವ ಮಾಲೀಕರು ಸರ್ವ ಸ್ವತಂತ್ರರು.
ಇವೆಲ್ಲಾ ಮಾರ್ಗಸೂಚಿ ಹಾಗೂ ನಿಯಮಗಳನ್ನು ಗಂಭೀರವಾಗಿ ಪರಿಗಣಿಸುವ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮದ್ಯದ ಅಂಗಡಿಯ ಮಾಲೀಕರಿಗೆ ತಿಂಗಳ ಸುಲಿಗೆಯಲ್ಲಿ ನಿರತವಾಗಿವೆ. ಉದಾಹರಣೆಗೆ ಸಿ.ಎಲ್-2, ಸಿ.ಎಲ್-7, ಸಿ.ಎಲ್-9 ಪರವಾನಿಗೆ ಹೊಂದಿದ ಬಾರ್‍ನ ಮಾಲೀಕರು ತಾಲೂಕು ವ್ಯಾಪ್ತಿಯ ಗ್ರಾಮಗಳ ಅನಧಿಕೃತ ಮದ್ಯದ ಅಂಗಡಿಗಳಿಗೆ ಮದ್ಯ ಪೂರೈಸುವುದು ಅನಧಿಕೃತವಾಗಿರುತ್ತದೆ. ಇಂತಹ ಪ್ರಕರಣಗಳು ಪತ್ತೆಯಾದರೆ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಅಧಿಕಾರವಿರುತ್ತದೆ. ಹೀಗಾಗಿಯೇ ಈ ಎಲ್ಲಾ ಅಧಿಕಾರಿಗಳಿಗೆ ತಿಂಗಳ ಮಾಮೂಲು ಸಲ್ಲಿಕೆಯಾಗುತ್ತದೆ. ಅಬಕಾರಿ ಇಲಾಖೆಯಿಂದ ಹಿಡಿದು ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಗಳಿಗೂ ಮದ್ಯದ ಅಂಗಡಿಗಳು ತಿಂಗಳ ಮಾಮೂಲು ಸಲ್ಲಿಸುವುದು ಎಷ್ಟು ಎಂಬುವುದರ ಬಗ್ಗೆ ನಿಮಗೇನಾದರೂ ತಿಳಿದರೆ ದಂಗಾಗುತ್ತೀರಿ. ಇನ್ನು ಪ್ರತಿ ಮದ್ಯದ ಅಂಗಡಿಗಳಲ್ಲಿ ಪರವಾನಿಗೆ ಹೊಂದಿದ ಮಾಲೀಕ ತನ್ನ ಪರವಾಗಿ ಮೂವರು ಪರವಾನಿಗೆ ಹೊಂದಿದ ವೆಂಡರ್‍ಗಳನ್ನು ನೇಮಿಸಲು ಅವಕಾಶವಿದೆ. ಅವರ ಪರವಾಗಿ ಬೇರೆ ಯಾರಾದರೂ ವ್ಯವಹಾರ ನಡೆಸಿದರೆ ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವ ಅವಕಾಶವಿದೆ. ಹೀಗಾಗಿ ಪ್ರತಿ ಮದ್ಯದ ಅಂಗಡಿಯ ಮಾಲೀಕ ಅಧಿಕಾರಿಗಳಿಗೆ ತಿಂಗಳ ಮಾಮೂಲು ತಪ್ಪುವುದಿಲ್ಲ. ಇದು ಎಷ್ಟರ ಮಟ್ಟಿಗೆ ಸತ್ಯವೋ, ಅಸತ್ಯವೋ ಗೊತ್ತಿಲ್ಲ. ಈ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವುದು ಆರೋಪಿತ ಅಧಿಕಾರಿಗಳ ಕೆಲಸ ಎಂಬುವುದು ಪತ್ರಿಕೆಯ ಆಶಯ. ತಮ್ಮ ಅಡ್ಡ ಕಸುಬು ದಂಧೆಗೆ ಅಧಿಕಾರಿಗಳನ್ನು ಎಳೆತರುವುದು ಸಹಜ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಂಬಂಧಿಸಿದ ತಾಲೂಕಿನ ಎಲ್ಲಾ ಮದ್ಯದ ಅಂಗಡಿಗಳ ಸನ್ನದುದಾರರನ್ನು ವಿಚಾರಿಸಿ ಅಗತ್ಯ ಕಾನೂನು ಕ್ರಮ ಕೈಗೊಂಡರೆ ಅಸಲಿಯತ್ತು ಬಯಲಾಗಲಿದೆ. ಯಾಕೆಂದರೆ, ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಹೆಸರಿನಲ್ಲಿ ವಸೂಲಿ ದಂಧೆ ಮಾಡುವ ಅಡ್ಡ ಕಸುಬಿಗಳು ಹೆಚ್ಚಾಗಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾವಹಿಸಲಿ ಎಂಬುವುದು ಪತ್ರಿಕೆಯ ಆಶಯ. ಯಾಕೆಂದರೆ, ಮದ್ಯದ ಅಂಗಡಿಗಳು ಯಾವವೂ ಕೂಡ ನಿಯಮಾನುಸಾರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅಂತಹವರನ್ನು ಹೆಡೆಮುರಿಗೆ ಕಟ್ಟಲು ಹೊರಟ ಅಬಕಾರಿ ಅಧಿಕಾರಿಗಳಿಗಾಗಲೀ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗಾಗಲೀ ಜನಪ್ರತಿನಿಧಿಗಳಿಂದ, ಪ್ರಭಾವಿ ಮುಖಂಡರಿಂದ ಒತ್ತಡ ಬರುವುದು ಸಹಜ. ಆದರೆ, ಪ್ರತಿ ತಿಂಗಳು ಮದ್ಯದ ಅಂಗಡಿಯಿಂದ ಲಕ್ಷಾಂತರ ರೂಪಾಯಿ ವಂತಿಕೆ ಸಲ್ಲಿಕೆಯಾಗುತ್ತಿರುವ ವಿಚಾರ ಗಂಭೀರವಾದದ್ದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಎಚ್ಚರಗೊಂಡು ಕಾರ್ಯ ಪ್ರವೃತ್ತರಾಗಲೀ ಎಂಬುವುದು ಪತ್ರಿಕೆಯ ಆಶಯ.

error: Content is protected !!
Scroll to Top