ತೆರೆಮರೆಯ ಹಿಂದೆ ನಡೆಯಿತಾ ಪ್ರಕರಣ ಮುಚ್ಚಿಹಾಕುವ ಷಡ್ಯಂತ್ರ..!?

ಕಾರಟಗಿ ರೈಸ್ ಮಿಲ್ ಮೇಲೆ ದಾಳಿ ನಡೆದು ವಾರ ಕಳೆದರೂ ದಾಖಲಾಗದ ಪ್ರಕರಣ

ರಣಬೇಟೆ ನ್ಯೂಸ್ ಕೊಪ್ಪಳ.ಆ.16: ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ತಾವರಗೇರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ವೆಬ್ ನ್ಯೂಸ್ ವಿಸ್ತೃತ ವರದಿ ಪ್ರಕಟಿಸಿತ್ತು. ಅದರ ಜಾಡು ಬೆನ್ನು ಹತ್ತಿದ ಬಳ್ಳಾರಿಯ ಐಜಿ ನೇತೃತ್ವದ ಪೊಲೀಸ್ ತಂಡ ಇತ್ತೀಚೆಗೆ ಕೆಲ ವಾರಗಳ ಹಿಂದೆ ಕಾರಟಗಿ ಹೊರವಲಯದ ಬೂದಗುಂಪಾ ರಸ್ತೆಯ ವ್ಹೇ ಬ್ರಿಜ್ ಸಮೀಪದ ರೈಸ್ ಮಿಲ್ ಒಂದರ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ನಗದು ಹಾಗೂ ಟನ್ ಗಟ್ಟಲೆ ಪಡಿತರ ಅಕ್ಕಿ ಜಪ್ತಿ ಮಾಡಿತ್ತು. ಆದರೆ ವಿಪಾರ್ಯಸವೆಂದರೆ ಇದ್ಯಾವುದೂ ಸುದ್ದಿ ಆಗಲೇ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಎಫೈಆರ್ ದಾಖಲಾಗದಿರುವುದು ಹಲವು ಶಂಕೆಗಳನ್ನು ಹುಟ್ಟು ಹಾಕಿದೆ.


ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯ ಮನೆಯ ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದ್ದರೂ ಕೂಡ ಸಚಿವ ತಂಗಡಗಿ ತಮಗೇನೂ ವಿಷಯವೇ ಗೊತ್ತಿಲ್ಲ ಎಂಬಂತೆ ಮುಗುಮ್ಮಾಗಿ ಕುಳಿತಿರುವುದು ಪ್ರಕರಣ ಮುಚ್ಚಿ ಹೋಯ್ತಾ ಎಂಬ ಅನುಮಾನ ಮೂಡಿಸುವಂತಿದೆ.
ಯಾಕೆಂದರೆ ದಾಳಿಗೊಳಗಾದ ರೈಸ್ ಮಿಲ್ ಕೈ ಪಾಳೆಯದ ಪ್ರಭಾವಿ ಮುಖಂಡನದ್ದು ಎನ್ನಲಾಗುತ್ತಿದೆ. ಕಳೆ ಎರಡ್ಮೂರು ವರ್ಷಗಳಿಂದ ಪಡಿತರ ಅಕ್ಕಿ ಕಳ್ಳ ದಂಧೆಗೆ ಈ ಮಿಲ್ ಪ್ರಮುಖ ಹಬ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪಗಳಿವೆ.


ಒಂದು ಮೂಲಗಳ ಮಾಹಿತಿ ಪ್ರಕಾರ ಐಜಿ ನೇತೃತ್ವದ ಪೊಲೀಸ್ ತಂಡದಿಂದ ದಾಳಿಗೊಳಗಾದ ರೈಸ್ ಮಿಲ್ ನ ಮಾಲೀಕ ಕಾಂಗ್ರೆಸ್ ನ ಆಯಕಟ್ಟಿನ ಹುದ್ದೆಯಲ್ಲಿರುವ ಪ್ರಭಾವಿ ಮುಖಂಡನದ್ದು. ಈ ಮಿಲ್ ನ ಉಸ್ತುವಾರಿಯನ್ನು ಯರಡೋಣಾ ಗ್ರಾಮದ ಪ್ರಮುಖನೊಬ್ಬ ನೋಡಿಕೊಳ್ಳುತ್ತಾನೆ. ಪಡಿತರ ಅಕ್ರಮ ದಂಧೆಯು ಈತನ ನೆರಳಿನಲ್ಲೇ ನಡೆಯುತ್ತದೆ ಎನ್ನಲಾಗುತ್ತಿದೆ. ಕಾರಟಗಿಯ ಇನ್ನೊಬ್ಬ ಪಡಿತರ ದಂಧೆಕೋರರನಿಗೆ ಆತನ ತಮ್ಮನೇ ಉಸ್ತುವಾರಿ. ಸದ್ಯಕ್ಕೆ ಈ ದಾಳಿಯ ನಂತರದ ವಿದ್ಯಮಾನಗಳು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಯಾಕೆಂದರೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗಾಗಲಿ ಸ್ಥಳೀಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಗುಟ್ಟಾಗಿಡಲಾಗಿದೆ. ಈ ದಾಳಿಯ ಕುರಿತಂತೆ ಒಂದೇ ಒಂದು ಪ್ರಕರಣ ದಾಖಲಿಸದೆ ಐಜಿ ನೇತೃತ್ವದ ಪೊಲೀಸ್ ತಂಡ ಏನು ಸಾಧಸಲಿ ಹೊರಟಿದೆ ಎಂಬುದು ಎಂಥಹ ಶತಮೂರ್ಖರಿಗಾಗಲಿ ಅರ್ಥವಾಗುತ್ತದೆ. ಸಣ್ಣಪುಟ್ಟ ದಂಧೆಕೋರರನ್ನು ಹಿಡಿದು ಪ್ರಕರಣ ದಾಖಲಿಸಿ ಈ ಅಕ್ರಮ ಪಡಿತರ ದಂಧೆಗೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ ಎಂದು ಬಿಂಬಿಸಿಕೊಳ್ಳುವ ಆಹಾರ ಇಲಾಖೆಯ ಅಧಿಕಾರಿಗಳಿಂದ ನ್ಯಾಯ ದೊರೆಯುವುದಿಲ್ಲ ಎಂದು ಮೇಲಾಧಿಕಾರಿಗಳಿಗೆ ದೂರು ನೀಡಿದರೆ, ಇವರೂ ಕೂಡ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದರಾ..? ಅಥವಾ ಹೊಂದಾಣಿಕೆ ಮಾಡಿಕೊಂಡರಾ ಎಂದು ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
ಒಟ್ಟಿನಲ್ಲಿ ಉಸ್ತುವಾರಿ ಸಚಿವ ತಂಗಡಿಯ ಮನೆಯ ಸಮೀಪದಲ್ಲೇ ನಡೆದ ಈ ಪ್ರಕರಣದಲ್ಲಿ ಸಾಕಷ್ಟು ಗೋಲ್ ಮಾಲ್ ನಡೆದಿರುವ ಶಂಕೆಯಿದೆ. ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಕೂಡಾ ಈ ಬಗ್ಗೆ ತುಟಿ ಬಿಚ್ಚದಿರುವುದು ನೋಡಿದರೆ, ಈ ದಂಧೆಯ ಹಿಂದೆ ಕೈ ಪಡೆಯ ಪ್ರಭಾವಿಗಳ ನೆರಳಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇನ್ನಾದರೂ ಈ ಪ್ರಕರಣದ ಬಗ್ಗೆ ಸಚಿವ ಶಿವರಾಜ ತಂಗಡಗಿ ಸ್ಪಷ್ಟೀಕರಣ ನೀಡುತ್ತಾರಾ ಕಾದು ನೋಡಬೇಕಿದೆ.

error: Content is protected !!
Scroll to Top