ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ತಮಟೆ ಚಳುವಳಿ

ರಕ್ತದಿಂದ ಪೋಸ್ಟರ್ ಬರೆದು ಶಾಸಕರ ಮನೆ ಮುಂದೆ ಪ್ರದರ್ಶಿಸಿ ಪ್ರತಿಭಟನೆ

ಕೊಪ್ಪಳ.ಆ.18: ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ನಗರದಲ್ಲಿ ನಡೆದ ತಮಟೆ ಚಳುವಳಿಯಲ್ಲಿ ಪ್ರತಿಭಟನಾಕಾರರು ತಮ್ಮ ರಕ್ತದಿಂದ ಪೋಸ್ಟರ್ ಬರೆದು ಪ್ರದರ್ಶಿಸುವ ಮೂಲಕ ಸರ್ಕಾರದ ಗಮನ ಸೆಳೆದರು.
ನಗರದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಈಶ್ವರ ಉದ್ಯಾನವನದಿಂದ ಶಾಸಕರ ಮನೆಯವರಿಗೆ ತಮಟೆ ಬಾರಿಸುತ್ತಾ ಸಾಗಿ, ನಗರದ ಶಾಸಕ ರಾಘವೇಂದ್ರ ಹಿಟ್ನಾಳ್ ಮನೆಯ ಮುಂದೆ ಸಮಾವೇಶಗೊಂಡು ಬೃಹತ್ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿ ಸಮುದಾಯದಲ್ಲಿ ನೂರಕ್ಕೂ ಹೆಚ್ಚು ಜಾತಿಯನ್ನು ಹೊಂದಿದ್ದು ಅವುಗಳಲ್ಲಿ ಮೀಸಲಾತಿ ವರ್ಗಿಕರಣಕ್ಕಾಗಿ ಒಳ ಮೀಸಲಾತಿಯನ್ನು ಈ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ಜಾರಿ ಮಾಡುವಂತೆ ಶಾಸಕರು ಒತ್ತಾಯಿಸಬೇಕು ಎಂದು ಶಾಸಕರ ಮನೆಯ ಮುಂದೆ ಬಾಯಿ ಬಡಿದುಕೊಂಡು ಪ್ರತಿಭಟಿಸಲಾಯಿತು.
ಕಳೆದ ಮೂರು ಅವಧಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ನಮ್ಮ ಸಮುದಾಯ ಬೆಂಬಲಿಸಿದೆ. ಸದ್ಯ ಶಾಸಕರು ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೆ ತರುವಂತೆ ಸದನದಲ್ಲಿ ಶಾಸಕರು ಒತ್ತಾಯಿಸಬೇಕು ಎಂದು ರಕ್ತದಿಂದ ಬರೆದ ಪತ್ರ ಹಾಗೂ ಪೋಸ್ಟರ್ಗಳನ್ನು ಪ್ರದರ್ಶಿಸಿ ಶಾಸಕರನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಮುದಾಯದ ವಿವಿಧ ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಸಹಸ್ರಾರು ಜನ ಪಾಲ್ಗೊಂಡಿದ್ದರು.

error: Content is protected !!
Scroll to Top