ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್

ಮತ್ತೆ ಮಾತೃ ಇಲಾಖೆಗೆ ವರ್ಗಾವಣೆಯಾದ ಪಡಿತರ ದಂಧೆಯ ಬಿಗ್‍ಬಾಸ್ ಬಿರಾದಾರ್

ರಣಬೇಟೆ ನ್ಯೂಸ್

ಗಂಗಾವತಿ, ಆ.30: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿರುವ ಬಗ್ಗೆ ರಣಬೇಟೆ ವೆಬ್‍ನ್ಯೂಸ್ ವಿಸ್ತೃತ ವರದಿ ಮಾಡಿತ್ತು. ಈ ವರದಿಯನ್ನು ಆಧರಿಸಿ ಸದ್ಯಕ್ಕೆ ಸರಕಾರ ಅಧೀನ ಕಾರ್ಯದರ್ಶಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಜಿ.ಕೆ. ನರಸಿಂಹ ಮೂರ್ತಿಯವರು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಅವರ ಹೆಸರಿನಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದಾರ್ ಅವರನ್ನು ಮಾತೃ ಇಲಾಖೆಗೆ ವರ್ಗಾಯಿಸಿ ಆದೇಶ ಆಗಷ್ಟ್ 29ರ ಶುಕ್ರವಾರದಂದು ಹೊರಡಿಸಿದ್ದಾರೆ.


ಗಂಗಾವತಿ ನಗರದ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ದುಬೈ, ಯುಎಇ ಮೂಲದ ಖಾಸಗಿ ಕಂಪನಿಯ ಲಾಲ್ ಎನ್ನುವ ಬ್ರ್ಯಾಂಡ್‍ವೊಂದರ ಚೀಲದಲ್ಲಿ ಪಡಿತರ ಅಕ್ಕಿಗಳನ್ನು ತುಂಬಿ ಸಾಗಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಣಬೇಟೆ ವೆಬ್‍ನ್ಯೂಸ್ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಸರಕಾರ ಅಧೀನ ಕಾರ್ಯದರ್ಶಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಜಿ.ಕೆ. ನರಸಿಂಹ ಮೂರ್ತಿಯವರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದಾರ್ ಅವರನ್ನು ಮಾತೃ ಇಲಾಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾಕೆಂದರೆ ಆಹಾರ ಇಲಾಖೆಯ ಉಪನಿರ್ದೇಶಕರಾಗಿ ಅಧಿಕಾರ ವಹಿಸಿದ ಕೇವಲ ಆರು ತಿಂಗಳಲ್ಲಿ ಕೋಟ್ಯಂತರ ಲೂಟಿ ಮಾಡಿದ್ದ ಸೋಮಶೇಖರ್ ಅವರನ್ನು ಕಾನೂನು ಅಡಿಯಲ್ಲಿ ಸೂಕ್ತ ಕ್ರಮಕ್ಕೆ ತನಿಖೆಗೆ ಸೂಚಿಸಿ ಆದೇಶ ಹೊರಡಿಸುವ ಬದಲು ಅವರನ್ನು ರಕ್ಷಿಸುವ ಕಾರ್ಯ ನಡೆದಿದೆ ಎಂಬುವುದು ಇವರ ಆದೇಶದಿಂದ ಸಾಬೀತಾಗುತ್ತಿದೆ.
ಅಷ್ಟಕ್ಕೂ ಆದೇಶ ಪ್ರತಿಯಲ್ಲಿ ಏನೀದೆ…?


ಶ್ರೀ ಸೋಮಶೇಖರ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ನಿಯೋಜನೆ ಮೇಲೆ ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕೊಪ್ಪಳ ಜಿಲ್ಲೆ ಇವರು ಇಲಾಖೆಯ ಉಪ ನಿರ್ದೇಶಕರ ಹುದ್ದೆಯೊಂದಿಗೆ ಜಿಲ್ಲಾ ವ್ಯಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕೊಪ್ಪಳ ಜಿಲ್ಲೆ ಹುದ್ದೆಯ ಅಧಿಕ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸದರಿಯವರು ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯ ಸರಿಯಾದ ಮೇಲುಸ್ತುವಾರಿ ಕೈಗೊಳ್ಳದೇ ಇರುವ ಕಾರಣ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಮೀಲಾಗಿ ದಿನಾಂಕ:25.08.2025ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಿಂದ 250 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲು ಕಾರಣರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ :0179/2025ನ್ನು ದಿನಾಂಕ:26.08.2025 ರಂದು ದಾಖಲಿಸಲಾಗಿರುತ್ತದೆ.
ಮುಂದುವರೆದು, ದಿನಾಂಕ:29.08.2025ರಂದು ಮಾನ್ಯ ವಿಧಾನ ಪರಿಷತ್ತಿನ ಭರವಸೆ ಸಭೆ ನಿಗದಿಯಾಗಿದ್ದು, ಸದರಿ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಅನ್ನಭಾಗ್ಯ ಅಕ್ಕಿ ದುರುಪಯೋಗ ಪ್ರಕರಣದ ಬಗ್ಗೆಯೂ ಭರವಸೆ ಸಮಿತಿಯ ಮಾನ್ಯ ಅಧ್ಯಕ್ಷರು ಮತ್ತು ಸದಸ್ಯರಿಂದ ಪೂರಕ ಮಾಹಿತಿ ಕೋರುವ ಸಂಭವವಿರುವ ಕಾರಣ ಪ್ರಕರಣಕ್ಕೆ ಸಂಬಂಧಿಸಿದ ಪೂರ್ಣ ವರದಿ ಸಲ್ಲಿಸುವಂತೆ ದಿನಾಂಕ:28.8.2025ರಂದು ದೂರವಾಣಿ ಮೂಲಕ ಕೋರಲಾಗಿದ್ದರೂ ಸಹ ಶ್ರೀ ಸೋಮಶೇಖರ ಬಿರಾದಾರ, ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕೊಪ್ಪಳ ಜಿಲ್ಲೆ ಇವರು ವರದಿ ಸಲ್ಲಿಸದೇ ವಿಳಂಬವೆಸಗಿರುವ ಹಿನ್ನೆಲೆಯಲ್ಲಿ ಸದರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕೊಪ್ಪಳ ಜಿಲ್ಲೆ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿ. ಆದೇಶಿಸಿದೆ.
ಮುಂದುವರೆದು, ಸದರಿಯವರನ್ನು ಅವರ ಮಾತೃ ಇಲಾಖೆಯಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ. ಅಪರ ಜಿಲ್ಲಾಧಿಕಾರಿ, ಕೊಪ್ಪಳ ಜಿಲ್ಲೆ ಇವರನ್ನು ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕೊಪ್ಪಳ ಜಿಲ್ಲೆ ಹುದ್ದೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ.
ಆದರೆ, ಈ ಪ್ರಕರಣದಲ್ಲಿ ಸೋಮಶೇಖರ ಬಿರಾದಾರ್ ಅವರನ್ನು ರಕ್ಷಿಸುವ ತಂತ್ರ ಬಿಟ್ಟರೆ ಇನ್ನೇನು ಕಾಣಿಸುತ್ತಿಲ್ಲ. ಯಾಕೆಂದರೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದಾರ್ ಅಧಿಕಾರ ಸ್ವೀಕರಿಸಿ ಕೇವಲ ಆರು ತಿಂಗಳಲ್ಲಿ ಕೋಟ್ಯಂತರ ಲೂಟಿ ಮಾಡಿದ ಅಧಿಕಾರಿಯೊಬ್ಬನನ್ನು ಮಾತೃ ಇಲಾಖೆಗೆ ವರ್ಗಾಯಿಸಿ ಕೈತೊಳೆದುಕೊಳ್ಳುವ ಪ್ರಕ್ರಿಯೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ರಣಬೇಟೆ ವೆಬ್‍ನ್ಯೂಸ್ ಸೋಮಶೇಖರ್ ಬಿರಾದಾರ್ ವಿರುದ್ಧ ಕಾನೂನು ಹೋರಾಟ ಮುಂದುವರೆಸಲಿದೆ ಎಂಬುವುದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬಯಸುತ್ತದೆ. ಯಾಕೆಂದರೆ, ವರ್ಗಾವಣೆಯಾದ ನಂತರ ದಿಢೀರನೇ ಗಂಗಾವತಿಯ ಆಹಾರ ಉಗ್ರಾಣಕ್ಕೆ ದಾಂಗುಡಿ ಇಡುವ ಸೋಮಶೇಖರ್ ಬಿರಾದಾರ್, ದಾಖಲೆಯನ್ನು ಸೃಷ್ಠಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುವುದು ಸಾರ್ವತ್ರಿಕವಾಗಿ ಚರ್ಚೆಯಾಗುತ್ತಿದೆ. ಹೀಗಾಗಿ ಕೂಡಲೇ ಸೋಮಶೇಖರ್ ಬಿರಾದಾರ್ ಅವರನ್ನು ಅಮಾನತ್ತಿನಲ್ಲಿಟ್ಟು ಇಲಾಖಾ ಕಾನೂನು ತನಿಖೆಯ ವ್ಯಾಪ್ತಿಗೆ ಒಳಪಡಿಸಿ ತನಿಖೆ ನಡೆಸಬೇಕು. ಆಹಾರ ಇಲಾಖೆಯಲ್ಲಿ ಸೋಮಶೇಖರ್ ಬಿರಾದಾರ್ ನಡೆಸಿರುವ ಅಂದಾದುಂದಿಯ ತನಿಖೆ ನಡಸಿ ಕಾನೂನು ಅಡಿಯಲ್ಲಿ ಸೂಕ್ತ ಶಿಕ್ಷೆಯಾಗಬೇಕು ಎಂಬುವುದೇ ಸಾರ್ವಜನಿಕರ ಆಶಯವಾಗಿದೆ.

error: Content is protected !!
Scroll to Top