ಸೊಗಲಾದ್ ಸಾಹೇಬರ ‘ಸ್ವಯಂ ರಾಜ್ಯ’: ಈ ಕಛೇರಿ ‘ಪ್ರಭುತ್ವ’ಕ್ಕೆ ಸೇರಿದ್ದೇ?

ಸರ್ಕಾರಿ ಆಜ್ಞೆಗೆ ಕೊಪ್ಪಳದಲ್ಲಿ ನಿರ್ಬಂಧ!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:28 (ಸಂಚಿಕೆ-3)

ಸಜ್ಜನರಿಗೆ ಶಿಸ್ತು, ದುರ್ಜನರಿಗೆ ಶಿಕ್ಷೆ ಎಂಬುದು ಆಡಳಿತದ ಮೂಲ ಮಂತ್ರ. ಆದರೆ, ಈ ಮೂಲ ಮಂತ್ರವನ್ನೇ ಮರೆತಂತೆ ಕಾಣುತ್ತಿರುವ ಕೊಪ್ಪಳ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲಾದ್ ಸಾಹೇಬರ ವರ್ತನೆಗೆ ಸರ್ಕಾರಿ ಸನ್ನದಿನಲ್ಲಿ (ಕಛೇರಿಯಲ್ಲಿ) ಬಾರೀ ಧಿಕ್ಕಾರ ವ್ಯಕ್ತವಾಗಿದೆ. ಇವರು ಸರ್ಕಾರದ ಉನ್ನತ ಆಜ್ಞೆಗಳು ಮತ್ತು ಕಿರಿಯ ಅಧಿಕಾರಿಗಳ ಸಂಕಟದ ಮೊರೆಗಳನ್ನೂ ಕಡೆಗಣಿಸಿ, ತಮ್ಮ ಮನಸೋ ಇಚ್ಛೆ ವರ್ತಿಸುತ್ತಿರುವುದು ಆಶ್ಚರ್ಯಕರ ಸನ್ನಿವೇಶಕ್ಕೆ ನಾಂದಿ ಹಾಡಿದೆ.


​ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಎಲ್. ನರಸಿಂಹಮೂರ್ತಿ ಅವರು ದಿನಾಂಕ 27-06-2025 ರಂದು ಆಡಳಿತದ ಸೌಲಭ್ಯಕ್ಕಾಗಿ ಕೆಲ ಅಧಿಕಾರಿಗಳ ವರ್ಗಾವಣೆ ಕುರಿತು ಖಡಕ್ ಆದೇಶ ಹೊರಡಿಸಿದ್ದರು.
​ಇವರ ಆಜ್ಞೆಯ ಪ್ರಕಾರ:


ಗಂಗಾವತಿಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶೃತಿ ಎಂ. ಅವರನ್ನು ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿಗೆ ಕಳುಹಿಸಿಕೊಡಬೇಕು.


ಕುಷ್ಟಗಿಯ ಕಛೇರಿ ಅಧೀಕ್ಷಕರು ಹಾಗೂ ಸಹಾಯಕ ನಿರ್ದೇಶಕರು (ಗ್ರೇಡ್-2) ಬಾಲಪ್ಪ ಸಂಗನಾಳ ಅವರನ್ನು ಗದಗ ಜಿಲ್ಲೆಯ ಅಂಬೇಡ್ಕರ್ ನಿಗಮಕ್ಕೆ ಸಾಗಹಾಕಬೇಕು.
​ಇದು ಸರ್ಕಾರದ ಅಧಿಕೃತ ಆಜ್ಞೆ. ಆದರೂ, ಕೊಪ್ಪಳದಲ್ಲಿ ನೆಲೆ ನಿಂತಿರುವ ಈ ‘ಗಜಕರ್ಣ’ ಉಪ ನಿರ್ದೇಶಕ ಅಜ್ಜಪ್ಪ ಸೊಗಲಾದ್ ಅವರು ತಮ್ಮ ಸ್ಥಾನದ ಮದದಿಂದಲೋ ಅಥವಾ ಬೇರಾವ ದುರ್ಬುದ್ಧಿಯಿಂದಲೋ, ಈ ಅಧಿಕಾರಿಗಳಿಗೆ ಬಿಡುಗಡೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ! ದೊಡ್ಡ ಸಾಹೇಬರ ಆಜ್ಞೆಯನ್ನು ಗಾಳಿಗೆ ತೂರಿ, ಆಡಳಿತಾತ್ಮಕವಾಗಿ ದೊಡ್ಡ ವಚನಭ್ರಷ್ಟತೆ ಮೆರೆದಿರುವುದು ಸ್ಪಷ್ಟ.


ಶರಣಪ್ಪನವರ ‘ಇಕ್ಕಟ್ಟು’:
​ಈ ‘ಅಪರಾಧ’ಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಕೊಪ್ಪಳದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣಪ್ಪ ಚವಾಣ್ ಅವರ ವಿಷಯದಲ್ಲಿಯೂ ಸೊಗಲಾದ್ ಸಾಹೇಬರು ಅದೇ ಧೋರಣೆ ಅನುಸರಿಸಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿಗಳು ದಿನಾಂಕ 21-08-2025 ರಂದೇ ಶರಣಪ್ಪ ಚವಾಣ್ ಅವರನ್ನು ಸಹಾಯಕ ನಿರ್ದೇಶಕರ ಹುದ್ದೆಯಿಂದ ಬಿಡುಗಡೆಗೊಳಿಸಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಯ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯನ್ನು ಹೆಚ್ಚುವರಿ ಪ್ರಭಾರವನ್ನಾಗಿ ನಿರ್ವಹಿಸುವಂತೆ ಆಜ್ಞೆ ಮಾಡಿದ್ದರು.
​ಆದರೆ, ಈ ಹೆಚ್ಚುವರಿ ಪ್ರಭಾರದ ಕಾರಣದಿಂದ ಇಲಾಖಾ ಆಡಳಿತದಲ್ಲಿ ಲೋಪಗಳು ಉಂಟಾಗುತ್ತಿದ್ದು, ಪ್ರಮುಖವಾಗಿ ವಸತಿ ನಿಲಯಗಳ ನಿರ್ವಹಣೆಯಲ್ಲಿ ಅರಿವಿಗೆ ಬರುವಂತೆ ಕೊರತೆ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಸಹಾಯಕ ನಿರ್ದೇಶಕ ಶರಣಪ್ಪ ಚವಾಣ್ ಅವರೇ ತಮ್ಮ ಹೆಚ್ಚುವರಿ ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿ, ತಮ್ಮ ಸಂಕಟವನ್ನು ತೋಡಿಕೊಂಡಿದ್ದಾರೆ.
​ಆದರೂ, ‘ಗಜಕರ್ಣ’ ಉಪ ನಿರ್ದೇಶಕ ಅಜ್ಜಪ್ಪ ಸೊಗಲಾದ್ ಅವರು ಈ ಬಗ್ಗೆಯೂ ಸಂಪೂರ್ಣ ಮೌನ ತಾಳಿದ್ದು, ಶರಣಪ್ಪ ಚವಾಣ್ ಅವರನ್ನು ಬಿಡುಗಡೆಗೊಳಿಸದೆ ಕರ್ತವ್ಯ ಲೋಪದಲ್ಲಿ ನಿರತರಾಗಿದ್ದಾರೆ.

ಅಜ್ಜಪ್ಪ ಸೊಗಲದ “ಅಂದಾ ದರ್ಬಾರ್ “
​ಹೀಗೆ, ಹಿರಿಯ ಅಧಿಕಾರಿಗಳ ಮೂರು ಪ್ರತ್ಯೇಕ ಆಜ್ಞೆಗಳನ್ನು ಹಾಗೂ ಸ್ವತಃ ಸಹಾಯಕ ನಿರ್ದೇಶಕರ ಮೊರೆಗಳನ್ನೂ ನಿರ್ಲಕ್ಷಿಸಿರುವ ಈ ಉಪ ನಿರ್ದೇಶಕರ ಆಡಳಿತವು ‘ಅನ್ನೋನಿಯ’ ದಿಂದ ಕೂಡಿದೆಯೇ ಎಂಬ ಅನುಮಾನ ಮೂಡಿದೆ. ಇವರು ಇಷ್ಟೊಂದು ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರಲು ಕಾರಣವಾದರೂ ಏನು? ಅಜ್ಜಪ್ಪ ಸೊಗಲದ ಇವರ “ಅಂದಾ ದರ್ಬಾರ್ “ ವರ್ಗಾವಣೆಗೊಂಡ ನೌಕರರು ನಮ್ಮನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಮನವಿ ಪತ್ರ ನೀಡಿದರು ಸೋಗಲದ ಇವರು ನೌಕರರ ಮನವಿಗೆ ಸ್ಪಂದಿಸದೆ ತಮ್ಮದೇ ಏಕ ಚಕ್ರಾಧಿಪತ್ಯ ಸರ್ವಾಧಿಕಾರತ್ವವನ್ನು ಮುಂದುವರಿಸುತ್ತಿದ್ದಾರೆ, ಸರಕಾರದ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರರು ವರ್ಗಾವಣೆಗೊಂಡ ತಕ್ಷಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವದು ಕಡ್ಡಾಯವಾಗಿರುತ್ತದೆ ಆದರೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಅಜ್ಜಪ್ಪ ಸೊಗಲದ ಇವರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ಅಧಿಕಾರದ ದರ್ಪದಿಂದ ವರ್ತಿಸುತ್ತಾರೆ ಒಂದು ವೇಳೆ ಸದರಿ ನೌಕರರನ್ನು ಇದ್ದ ಸ್ಥಳದಲ್ಲಿಯೇ ಮುಂದುವರಿಸಬೇಕಾದರೆ ಸರ್ಕಾರದ ಗಮನಕ್ಕೆ ತಂದು ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಸರ್ಕಾರದ ಅನುಮತಿ ಪಡೆಯಬೇಕೆಂಬ ಸಾಮಾನ್ಯ ಜ್ಞಾನ ಇಲ್ಲವೇ? ಇವರು ಸದರಿ ನೌಕರರನ್ನು ಮುಂದುವರೆಸಿರುವುದು ನೋಡಿದರೆ ಮೇಲ್ನೋಟಕ್ಕೆ ಯಾವುದೊ ಅಕ್ರಮ ಯೋಜನೆ ಯೋಚನೆಯ ಮುನ್ಸೂಚನೆ ಇರಬಹುದು ಅನಿಸುತ್ತದೆ ಅದು ಏನೆಂದರೆ, ವರ್ಗಾವಣೆಗೊಂಡ ಸಹಾಯಕ ನಿರ್ದೇಶಕರಿಂದ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಇಲಾಖೆಯ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವುದರ ಸಲುವಾಗಿ ಇವರನ್ನು ಮುಂದುವರಿಸಿರಬಹುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಇವರ ಅಧಿಕಾರ ಅವಧಿಯಲ್ಲಿ ಕೆಲವೊಂದು ತಾಲೂಕುಗಳಲ್ಲಿ ಆಹಾರದ ಬಿಲ್ಲುಗಳನ್ನು ಡಬಲ್ ಬಿಲ್ ಪಾಸ್ ಮಾಡಿರುವ ಬಗ್ಗೆ ಕಚೇರಿಗೆ ದೂರುಗಳು ಸಲ್ಲಿಕೆಯಾದರೂ ಅವುಗಳನ್ನು ಗಾಳಿಗೆ ತೂರಿ ನನ್ನನ್ನು ಯಾರು ಪ್ರಶ್ನೆ ಮಾಡುವುದಿಲ್ಲ ಎಂಬ ಧೋರಣೆಯಲ್ಲಿ ಅವರು ಮುಂದುವರೆಸಿರುತ್ತಾರೆ.
​ಆಡಳಿತ ವಿಭಾಗವು ಈಗ ಈ ಉಪ ನಿರ್ದೇಶಕರಿಗೆ, “ತಕ್ಷಣವೇ ನಿಮ್ಮ ‘ಕೈ ಚಳಕ’ ನಿಲ್ಲಿಸಿ, ವರ್ಗಾವಣೆಗೊಂಡವರನ್ನು ಸೌಜನ್ಯಯುತವಾಗಿ ಬಿಡುಗಡೆಗೊಳಿಸಿ ಮತ್ತು ಇನ್ನು ಮುಂದೆ ಆಡಳಿತದ ಆಜ್ಞೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ” ಎಂದು ಕಠಿಣ ಎಚ್ಚರಿಕೆ ನೀಡಿಬೇಕಿದೆ
​ಸರ್ಕಾರದ ಹಿರಿಯ ಸಾಹೇಬರ ಆಜ್ಞೆಗಳನ್ನೇ ಉಲ್ಲಂಘಿಸಿ, ಕಿರಿಯ ಅಧಿಕಾರಿಗಳಿಗೆ ಸಂಕಷ್ಟ ತಂದೊಡ್ಡಿರುವ ಈ ‘ಸೋಗುಗಾರ’ನ ಮೇಲೆ ಕೇವಲ ಎಚ್ಚರಿಕೆ ಸಾಲದು, ಬದಲಾಗಿ ಕಠಿಣ ದಂಡನೆಯನ್ನು ವಿಧಿಸಬೇಕು ಎಂದು ಸಾರ್ವಜನಿಕರು ಮತ್ತು ಸಜ್ಜನ ಅಧಿಕಾರಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಮುಂದುವರೆಯುತ್ತದೆ……

error: Content is protected !!
Scroll to Top