ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ‘ಜ್ಞಾನಿ’ಗಳ ಗೋಮುಖ ವ್ಯಾಘ್ರ ಲೀಲೆ!

‘ಗೇಟ್‌ವೇ ಆಫ್ ಕರಪ್ಷನ್’: ಡಿಡಿ ಕೃಪಾಕಟಾಕ್ಷದಲ್ಲಿ ಕಳಂಕಿತ ‘ಲೂಟಿಕೋರ’ ಸಚಿನ್ ನಿರಂಕುಶ ಆಡಳಿತ!

ರಣಬೇಟೆ ನ್ಯೂಸ್‌ ಕೊಪ್ಪಳ ಅ:29 (ಸಂಚಿಕೆ-4)

ಭೀಕರ ಭ್ರಷ್ಟಾಚಾರದ ಸರಣಿ ಸಂಚಿಕೆಗಳಲ್ಲಿ ಇದೀಗ ಬೆಳಕಿಗೆ ಬಂದಿರುವುದು, ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ (ಡಿಡಿ) ಕಚೇರಿಯ ನಾಚಿಕೆಗೇಡಿನ ಕರ್ಮಕಾಂಡ! ‘ಜ್ಞಾನ ಜಗತ್ತನ್ನು ಆಳುತ್ತದೆ’ ಎಂಬ ಸತ್ಯವಾಕ್ಯವನ್ನು ಬಂಡವಾಳ ಮಾಡಿಕೊಂಡು, ಸರ್ಕಾರಿ ಖಜಾನೆಯನ್ನೇ ಲೂಟಿ ಹೊಡೆಯಲು ಅನಧಿಕೃತ ಹೊರಗುತ್ತಿಗೆ ನೌಕರನೊಬ್ಬ ಡಿಡಿ ಅವರ ಕೃಪಾಕಟಾಕ್ಷದಿಂದಲೇ ರಾಜಮರ್ಯಾದೆ ಪಡೆದು ಮೆರೆಯುತ್ತಿದ್ದಾನೆ ಎಂಬುದು ಜಿಲ್ಲೆಯ ಆಡಳಿತ ವಲಯದಲ್ಲಿ ಬಿಸಿಯಾದ ಚರ್ಚೆಗೆ ಕಾರಣವಾಗಿದೆ.


​ಲೂಟಿಕೋರನ ಹಳೆಯ ಕಳಂಕ: ಅಂಬೇಡ್ಕರ್ ನಿಗಮದಿಂದ ವಜಾಗೊಂಡ ‘ಸಚಿನ್’ ಪುನಃ ಪ್ರತ್ಯಕ್ಷ!
​ಅಕ್ರಮವಾಗಿ ಸರ್ಕಾರಿ ಕಡತಗಳಿಗೆ ಕನ್ನ ಹಾಕುತ್ತಿರುವ ಈ ಅನಧಿಕೃತ ನೌಕರನ ಹೆಸರು ಸಚಿನ್. ಈತನ ಕರಾಳ ಇತಿಹಾಸವನ್ನು ಕೆದಕಿದರೆ, ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೊಪ್ಪಳದಲ್ಲಿ ಭೂ ಒಡೆತನ, ನೇರ ಸಾಲ ಮತ್ತು ವಿವಿಧ ಉದ್ಯಮಶೀಲತಾ ಯೋಜನೆಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಶೇ. 50 ರಷ್ಟು ಕಮೀಷನ್ ಪಡೆಯುತ್ತಿದ್ದ ಎಂಬ ಆರೋಪದ ಮೇಲೆ ಹಾಲಿಒ ಜಿಲ್ಲಾ ವ್ಯವಸ್ಥಾಪಕರು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ಆದೇಶದ ಮೇರೆಗೆ ವಜಾಗೊಂಡಿದ್ದ!
​ಅಂತಹ ಕಳಂಕಿತ, ಕಿಕ್‌ಬ್ಯಾಕ್ ಪಳಗಿದ ವ್ಯಕ್ತಿಯನ್ನು, “ಸ್ವಯಂಘೋಷಿತ ಭ್ರಷ್ಟಾಚಾರರಹಿತ ವ್ಯಕ್ತಿ” ಎಂದು ಹೇಳಿಕೊಳ್ಳುವ ಇಲಾಖೆಯ ಉಪ ನಿರ್ದೇಶಕ ಶ್ರೀ ಅಜ್ಜಪ್ಪ ಸೊಗಲದ ಅವರು ಯಾವ ಆದೇಶದ ಮೇಲೆ ಪುನಃ ಕಚೇರಿಗೆ ಸೇರಿಸಿಕೊಂಡಿದ್ದಾರೆ? ಈ ಪ್ರಶ್ನೆಗೆ ಉತ್ತರವಿಲ್ಲ!


​ಪಾಸ್‌ವರ್ಡ್ ಹಸ್ತಾಂತರ: ಕಳ್ಳಾಟದ ಜಾಲದ ಕಥೆ!
​ಸಚಿನ್‌ನ ಏಕೈಕ ಅರ್ಹತೆ, ಆತನಿಗೆ ಇರುವ ಕಂಪ್ಯೂಟರ್ ಜ್ಞಾನ ಮತ್ತು ‘ನಕಲಿ ಬಿಲ್ಲುಗಳನ್ನು ಸೃಷ್ಟಿಸುವ ಜಾಲ’! ಈತನ ಇದೇ ‘ಜ್ಞಾನ’ವನ್ನು ದುರುಪಯೋಗಪಡಿಸಿಕೊಳ್ಳಲು, ಡಿಡಿ ಅಜ್ಜಪ್ಪ ಸೊಗಲದ ಅವರು ಇಲಾಖೆಯ ಅತ್ಯಂತ ಗೌಪ್ಯವಾದ ‘ಲಾಗಿನ್ ಪಾಸ್‌ವರ್ಡ್’ ಅನ್ನೇ ಈ ಅನಧಿಕೃತ ನೌಕರನಿಗೆ ಧಾರೆ ಎರೆದಿದ್ದಾರೆ.
​ರಾತ್ರಿಪೂರ್ತಿ ಕಳ್ಳಾಟ: ಕಚೇರಿಯ ಅಧಿಕೃತ ಸಿಬ್ಬಂದಿ ಕರ್ತವ್ಯ ಮುಗಿಸಿ ಮನೆಗೆ ತೆರಳಿದ ಬಳಿಕ, ಕಚೇರಿಯ ದೀಪಗಳು ಮಸುಕಾಗಿ, ‘ಸಚಿನ್ ಮತ್ತು ಅಜ್ಜಪ್ಪ’ ಅವರ ನಡುವಿನ ಅಕ್ರಮ ಹಣಕಾಸಿನ ವ್ಯವಹಾರಗಳು ಮತ್ತು ನಕಲಿ ಬಿಲ್ಲುಗಳ ಸೃಷ್ಟಿಯ ‘ಲೂಟಿ ಕೆಲಸ’ ಪ್ರಾರಂಭವಾಗುತ್ತದೆ ಎಂಬುದು ಬಲ್ಲ ಮೂಲಗಳು ಮತ್ತು ಸಾರ್ವಜನಿಕ ವಲಯದಲ್ಲಿ ಬಿಸುಗುಡುತ್ತಿರುವ ಮಾತು.
​ಅಧಿಕೃತ ಕಡತಗಳು ಅನಧಿಕೃತ ವ್ಯಕ್ತಿಯ ಕೈಯಲ್ಲಿ: ಇಲಾಖೆಯ ಅತ್ಯಂತ ಪ್ರಮುಖ ಮತ್ತು ಗೌಪ್ಯ ಕಡತಗಳು ಅಧಿಕೃತ ಸಿಬ್ಬಂದಿಯ ಬದಲಿಗೆ, ವಜಾಗೊಂಡ ಕಳಂಕಿತ ಆದೇಶವೇ ಇಲ್ಲದ ಅನಧಿಕೃತ ನೌಕರ ಸಚಿನ್‌ನ ಬಳಿ ಇರುವುದು ಯಾವ ನ್ಯಾಯ? ಇದು ಕಚೇರಿ ಗೌಪ್ಯತೆ ಮತ್ತು ಸರ್ಕಾರಿ ನಿಯಮಗಳ ಸ್ಪಷ್ಟ ಉಲ್ಲಂಘನೆ ಅಲ್ಲವೇ?


ಬ್ರಹ್ಮಾಂಡ ಭ್ರಷ್ಟಾಚಾರದ ಕುಳಗಳು: ಕಳಕಪ್ಪನ ವಂಶಸ್ಥನೇ ಈ ಸಚಿನ್?
​ಈ ಹಿಂದೆ ‘ಲ್ಯಾಂಡ್ ಆರ್ಮಿ’ (K.R.I.D.L.) ಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ‘ಕಳಕಪ್ಪ ಕಂದಕೂರ್’ ಎಂಬಾತ ಭ್ರಷ್ಟಾಚಾರದಿಂದ ಕೋಟಿಗಟ್ಟಲೆ ಹಣ, ಅಪಾರ್ಟ್‌ಮೆಂಟ್‌, ಫ್ಲಾಟ್ ಮತ್ತು ಫಾರ್ಮ್‌ಹೌಸ್‌ಗಳನ್ನು ಸಂಪಾದಿಸಿ ‘ಕೋಟಿ ಕುಳ’ ಎಂಬ ಪ್ರಖ್ಯಾತಿ ಪಡೆದಿದ್ದು ಮಾಸುವ ಮುನ್ನವೇ, ಅದೇ ಸಾಲಿಗೆ ಸಚಿನ್ ಸೇರಿರುವ ಅನುಮಾನವಿದೆ. ಈತನು ಹುಬ್ಬಳ್ಳಿ, ಧಾರವಾಡ, ಕೊಪ್ಪಳ ಮುಂತಾದ ಕಡೆಗಳಲ್ಲಿ ಪ್ಲಾಟ್‌ ಮತ್ತು ಆಸ್ತಿಗಳನ್ನು ಸಂಪಾದಿಸಿದ್ದಾನೆಂಬುದು ಸಾರ್ವಜನಿಕರ ಗುಸುಗುಸು!
​”ಅಧಿಕಾರಿಗಳಿಗೆ ಲೂಟಿ ಹಣದ ರುಚಿ ತೋರಿಸಿ, ಅದೇ ರೀತಿಯಲ್ಲಿ ಈತ ಈ ಹಿಂದೆ ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿದ್ದಾನೆ. ಇದು ಭ್ರಷ್ಟಾಚಾರದ ಮೂಲಕ ಆಸ್ತಿ ಸಂಪಾದಿಸುವ ದೊಡ್ಡ ಜಾಲ!” — ಹೆಸರು ಹೇಳಲು ಇಚ್ಚಿಸದ ಇಲಾಖೆಯ ನೌಕರ


ಡಿಡಿ ಅಜ್ಜಪ್ಪನವರ ಮೌನ: ‘ಜಿಲ್ಲಾಧಿಕಾರಿಗಳ ಆದೇಶ’ದ ಸುಳ್ಳು ನಾಟಕ!
​’ರಣಭೇಟಿ ತಂಡ’ವು ಸಚಿನ್‌ನನ್ನು ತಡೆದು, “ನೀವು ಇಲ್ಲಿಗೆ ಹೇಗೆ ಬಂದಿರಿ ಮತ್ತು ಯಾವ ಆದೇಶದ ಮೇಲೆ ಕೆಲಸ ನಿರ್ವಹಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದಾಗ, “ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇಲೆ ವರ್ಗಾವಣೆಗೊಂಡು ಬಂದಿರುತ್ತೇನೆ” ಎಂದು ಸುಳ್ಳು ಹೇಳಿದ್ದಾನೆ! ಆದೇಶವನ್ನು ತೋರಿಸುವಂತೆ ಕೇಳಿದಾಗ, “ನನ್ನನ್ನು ಏನು ಕೇಳಬೇಡಿ, ನೀವು ಏನೇ ಪ್ರಶ್ನೆ ಮಾಡುವುದಿದ್ದರೆ ಅಜ್ಜಪ್ಪ ಸರ್‌ನ ಕೇಳಿ!” ಎಂದು ಜಾರಿಕೊಂಡಿದ್ದಾನೆ.
​ಒಬ್ಬ ಭ್ರಷ್ಟಾಚಾರದ ಆರೋಪ ಹೊತ್ತ ವ್ಯಕ್ತಿಗೆ ಡಿಡಿ ಅಜ್ಜಪ್ಪ ಸೊಗಲದ ಅವರು ಏಕೆ ಆಶ್ರಯ ನೀಡಿರುತ್ತಾರೆ? ಇದೊಂದು ದೊಡ್ಡ ರಾಜಕೀಯ ಮತ್ತು ಆರ್ಥಿಕ ಒಳ ಒಪ್ಪಂದದ ಭಾಗವೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಬಲವಾಗಿದೆ.
​ಸಾರ್ವಜನಿಕರು ಮತ್ತು ವೆಬ್‌ ನ್ಯೂಸ್‌ ನ ಆಗ್ರಹ ಒಂದೇ:
​ಹಣ ಪಾವತಿ ಕಡತಗಳ ಪರಿಶೀಲನೆ: ಸಚಿನ್ ಈ ಕಚೇರಿಗೆ ಬಂದಾಗಿನಿಂದ ವಿವಿಧ ಏಜೆನ್ಸಿಗಳಿಗೆ ಹಣ ಪಾವತಿಯಾಗಿರುವ ಎಲ್ಲಾ ಕಡತಗಳನ್ನು ತಕ್ಷಣ ಜಪ್ತಿ ಮಾಡಿ, ಸಮಗ್ರ ತನಿಖೆ ನಡೆಸಬೇಕು.
​SCP/TSP ಕಾಮಗಾರಿಗಳ ತನಿಖೆ: ಅಲೆಮಾರಿ ಶಾಖೆಯ ಭೂ ಒಡೆತನ ಯೋಜನೆ, SCP/TSP ಯೋಜನೆ ಅಡಿಯಲ್ಲಿ ಕೈಗೊಂಡಿರುವ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮತ್ತು ಸಮುದಾಯ ಭವನಗಳ ಕಳಪೆ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಬೇಕು. ಕಳಪೆ ಕಾಮಗಾರಿ ಆಗಿದ್ದರೂ ಏಜೆನ್ಸಿಗಳು ಮತ್ತು ಗುತ್ತಿಗೆದಾರರಿಗೆ ಹಣ ಪಾವತಿಸಿರುವ ಕಡತಗಳ ಮೇಲೆ ಸಮಗ್ರ ಲೋಕಾಯುಕ್ತ ತನಿಖೆ ಆಗಲೇಬೇಕು!

error: Content is protected !!
Scroll to Top