ಸಿಇಒ ವರ್ಣಿತಾ ನೇಗಿ ಗಪ್‌ಚುಪ್!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಡಿ:03
ಇದು ಕೇವಲ ಕಥೆಯಲ್ಲ ಆಡಳಿತಕ್ಕೆ ಅಂಟಿದ ಕೊಳಕು ಕಲೆಯ ಗಬ್ಬು ವಾಸನೆ! ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಒಂದು ‘ಬಾಂಬ್’ ಸಿಡಿದಿದೆ. ಅದು ಸಾಮಾನ್ಯ ಬಾಂಬ್ ಅಲ್ಲ, ಬಡವರ ಬದುಕಿಗೆ ಮೀಸಲಿಟ್ಟ ಕೋಟ್ಯಂತರ ರೂಪಾಯಿಗಳ ‘ನರೇಗಾ’ ಕಾಸಿಗೆ ಹೊತ್ತಿಕೊಂಡಿರುವ ನಗಾರಿ ಸದ್ದು!
ಕೇಸಿನ ಪ್ರಮುಖ ನಾಯಕ ಮುತ್ತು ದೊಡ್ಮನೆ ಸಾಮಾಜಿಕ ಕಾರ್ಯಕರ್ತ, ಆದರೆ ನಿಜಕ್ಕೂ ಆತ ನೀವು ಒದುತ್ತಿರುವ ಇದೇ ‘ರಣಬೆಟೆಯ’ ವೆಬ್‌ಸೈಟ್ ಸಂಪಾದಕ. ಇತನ ಕೈಗೆ ಸಿಕ್ಕಿದ್ದು ನಾಲ್ಕು ವರ್ಷಗಳ ‘ಆಡಿಟ್ ವರದಿ’. ಆ ವರದಿಯಲ್ಲಿನ ಅಂಕಿ-ಅಂಶಗಳು ಹೇಳುತ್ತಿವೆ: 2020 ರಿಂದ 2024ರವರೆಗೆ ಕುಕನೂರು ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳು – ಹಿರೇಬಿಡನಾಳ, ಕುದುರಿಮೋತಿ, ಮಂಡಲಗೇರಿ, ಮಂಗಳೂರು, ಮಸಾಬಹಂಚಿನಾಳ, ಇಟಗಿ, ರಾಜೂರ, ಯಾರೇಹಂಚಿನಾಳ, ತಳಕಲ್, ಶಿರೂರು, ಬಾಣಾಪುರ, ಬೆನಕಲ್ – ಗ್ರಾಮಪಂಚಾಯತಿಗಳ ಲೂಟಿ!

ಒಂಬಡ್ಸ್‌ಪರ್ಸನ್ ಕೋರ್ಟ್‌ನಲ್ಲಿ ‘ಗರ್ಜನೆ’!
ದೊಡ್ಮನೆ ನೇರವಾಗಿ ‘ಒಂಬಡ್ಸ್‌ಪರ್ಸನ್’ ರವರಿಗೆ ದೂರು ಸಲ್ಲಿಸಿದ್ದ. ಆರೋಪ ಒಂದೇ: ನರೇಗಾ ಯೋಜನೆ ಅಡಿಯಲ್ಲಿ ಲೆಕ್ಕಪರಿಶೋಧನೆ ವರದಿಯಂತೆ ಜಮಾ ಮಾಡಬೇಕಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಸರ್ಕಾರಕ್ಕೆ ‘ತಿಳುವಳಿ ಮಾಡದೆ’ ವಂಚಿಸಲಾಗಿದೆ! ಇದು ಬಡವರ ಬದುಕಿನ ರಕ್ತ ಕುಡಿದಷ್ಟು ಕರಾಳ ಕೃತ್ಯ.
ಒಂಬಡ್ಸ್‌ಪರ್ಸನ್ ಕಚೇರಿಯಿಂದ ಮೂರು-ಮೂರು ಪತ್ರಗಳು ಹಾರಿಬಂದವು. ಆದರೆ ಈ ಹನ್ನೆರಡು ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ದೇವತೆ/ದೇವರುಗಳಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಕ್ಷರಶಃ ‘ಕೋಮಾ’ ಸ್ಥಿತಿಗೆ ಜಾರಿದ್ದಾರೆ. ಒಂದು ಅಕ್ಷರ ಕೂಡ ಪ್ರತ್ಯುತ್ತರ ಕೊಡಲಿಲ್ಲ!
’ಸಿಇಒಗೆ ವರ್ಣಿತ ನೇಗಿ’ಗೆ ಬಂದ ಪತ್ರ ಸುಡುತ್ತಿದೆ ಬಿಸಿ!
ಪ್ರತ್ಯುತ್ತರ ಕೊಡದ ಈ PDO ಗಳೆಲ್ಲ ‘ಕರ್ತವ್ಯ ಲೋಪ’ ಎಸಗಿದ್ದಾರೆಂದು ಪರಿಗಣಿಸಿ, ದಿನಾಂಕ 20.11.2025 ರಂದು ಸ್ವತಃ ಒಂಬಡ್ಸ್‌ಪರ್ಸನ್ ಕಚೇರಿಯಿಂದ ಕೊಪ್ಪಳ ಜಿಲ್ಲಾ ಪಂಚಾಯತ್‌ನ CEO, ವರ್ಣಿತ ನೇಗಿ ಅವರ ಟೇಬಲ್‌ಗೆ ಬಂದು ‘ಬಿಸಿ’ ಪತ್ರ ಬಿದ್ದಿವೆ. ಪತ್ರದ ಹಿಂದಿನ ಶಕ್ತಿ – ಆಯುಕ್ತರು ಗ್ರಾ. ಅ. ಪಂ. ರಾ. ಇವರ ಪತ್ರ (No. RBC-EGS/282//2023/(E1093213)DATE18.08.2023) ಕೈ ಕಟ್ಟಿ ಕೂರಬೇಡಿ! ಈ ಕರ್ತವ್ಯ ಲೋಪಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ!”
‘ರಣಬೇಟೆ’ ಎಚ್ಚರಿಕೆ ಕೊಟ್ಟರೂ ನಿದ್ದೆಗೆ ಜಾರಿದ ಸಿಇಒ!
ಇಡೀ ಆಡಳಿತವೇ ‘ಆಪರೇಷನ್’ ಟೇಬಲ್ ಮೇಲೆ ಇದ್ದಂತೆ! ಪತ್ರ ಬಿದ್ದು ಒಂದು ವಾರಕ್ಕೂ ಹೆಚ್ಚು ಸಮಯ ಆಗಿದೆ. ಆದರೆ ವರ್ಣಿತ ನೇಗಿ ಅವರ ಆಡಳಿತದಿಂದ ಇಲ್ಲಿಯವರೆಗೆ ಒಂದು ಸಣ್ಣ ‘ಅಲುಗಾಟ’ ಕೂಡ ಆಗಿಲ್ಲ!
ಈ ಹಿಂದೆ ಇದೇ ‘ರಣಬೆಟೆ’ ವೆಬ್ ನ್ಯೂಸ್‌ನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಸಾಲು-ಸಾಲ ವರದಿಗಳನ್ನು ಬರೆದಿದ್ದರೂ ಕೂಡ, ಸಿಇಒ ವರ್ಣಿತ ನೇಗಿಯವರು ಕಣ್ಣು ತೆರೆಯಲಿಲ್ಲ! ಮಂದ ಆಡಳಿತದಿಂದ ವ್ಯವಸ್ಥೆ ಸಂಪೂರ್ಣ ಜಡವಾಗಿ ಹೋಗಿದೆ. ಈ ಕಣ್ಣು, ಕಿವಿ ಇಲ್ಲದ ಅಧಿಕಾರಿಗಳಿಂದ ಆಡಳಿತ ಎನ್ನುವುದು ಅಕ್ಷರಶಃ ‘ಕಾಲಿಗೆ ಕಟ್ಟಿದ ಕಲ್ಲು’ ಆಗಿಬಿಟ್ಟಿದೆ.
ಇದು ‘ಆಡಳಿತದ ಲೋಪ’ ಅಲ್ಲ, ಸರ್. ಇದು ನಿಮ್ಮ ಆಡಳಿತದ ಅಕ್ಷಮ್ಯ ಅಪರಾಧ! ಬಡವರಿಗೆ ಸಿಗಬೇಕಾದ ಕೋಟಿ ಕಾಸು ಕಳ್ಳರ ಪಾಲಾಗುತ್ತಿದ್ದರೆ, ‘ಚೌಕಿದಾರರು’ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಈ ಲೂಟಿಯ ಸುಳಿವು ನೀಡಿದ ಮೇಲೆ, ಕನಿಷ್ಠ ಈ ಘಟನೆಯಾದರೂ ಸಿಇಒ ನೇಗಿಯವರ ಕಣ್ಣು ತೆರೆಸಲಿ. ಈ ಜಡತ್ವವನ್ನು ಕಳಚಿ, ಸರಿ ದಾರಿಯಲ್ಲಿ ಆಡಳಿತ ನಡೆಸಲಿ ಎಂಬುದು ‘ರಣಬೆಟೆ’ಯ ಈ ಬ್ರೇಕಿಂಗ್ ನ್ಯೂಸ್‌ನ ಆಶಯ. ಇಲ್ಲವಾದರೆ, ಬಡವರ ಬದುಕಿನ ಈ ರಕ್ತಪಾತಕ್ಕೆ ಆಡಳಿತವೇ ಹೊಣೆಯಾಗುತ್ತದೆ!

