ಪ್ರಾಧಿಕಾರದ ಪ್ರತಿ ನೋಟಿನ ಮೇಲೆ ‘ಪಿ. ಯೋಗಾನಂದ’ನ ದುಷ್ಟ ಸಹಿ!

2023-24ರ KUDA ಆಡಿಟ್: ಇದು ವರದಿ ಅಲ್ಲ, ಭ್ರಷ್ಟರ ‘ಡೆತ್ ನೋಟ್’!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:07

ಯಜಮಾನರೇ, ಈ ಕಥೆ ಕೇಳಿ ನಿಮ್ಮೊಳಗಿನ ಮನುಷ್ಯ ಮರುಗುತ್ತಾನೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ (KUDA)ದ ಪಾವಿತ್ರ್ಯವನ್ನು ಮೂವರು ಸೇರಿ ಹೇಗೆ ಬಲಿಕೊಟ್ಟರು ನೋಡಿ! ಇದು ಬರೀ ಲೆಕ್ಕದ ಆಡಿಟ್ ವರದಿ ಅಲ್ಲ, ಇದು ಆ ಬಡ ಕೊಪ್ಪಳದ ಕಣ್ಣೀರಿನ ಕಡತ!
​ಒಂದು ನಗರವನ್ನು ಕಟ್ಟಬೇಕೆಂಬ ಕನಸು ಕಂಡಿತ್ತು ಆ ಪ್ರಾಧಿಕಾರ. ಆದರೆ, ಅಲ್ಲಿ ಕುಳಿತವರ ಕಣ್ಣು ಬಿದ್ದಿದ್ದು ಕನಸಿನ ಮೇಲೆ ಅಲ್ಲ, ಬೊಕ್ಕಸದ ಬಂಗಾರದ ಮೇಲೆ. ವಿಶೇಷವಾಗಿ, 2023-24ನೇ ಸಾಲಿನ ಲೆಕ್ಕಪತ್ರಗಳು ತೆರೆದಾಗ, ಇಲ್ಲಿ ನಡೆದದ್ದು ಕೇವಲ ಕಳ್ಳತನ ಅಲ್ಲ ವ್ಯವಸ್ಥಿತ ಡಕಾಯಿತಿ ಎಂಬುದು ಸ್ಪಷ್ಟವಾಯಿತು.


ಸಾವಿನ ಮೌನ ಆವರಿಸಿದ ಕಚೇರಿ!
​ನೋಡಿ ಯಜಮಾನರೇ, ಆಡಿಟ್ ತಂಡ ಹೇಳುತ್ತಿದೆ: 2023-24ರ ಆಕ್ಷೇಪಣಾ ಮೊತ್ತವೇ 5.79 ಕೋಟಿ! ವಸೂಲಿ ಆಗಿದ್ದು ಕೇವಲ ರೂ 60 ಲಕ್ಷ! ಅಂದರೆ, ಪ್ರಾಧಿಕಾರದ ರಕ್ತವನ್ನು ಹೀರಿ ಉಳಿದ ಹಣವನ್ನು ಇವರು ಎಲ್ಲಿ ಬಚ್ಚಿಟ್ಟರು? ಈ ವ್ಯತ್ಯಾಸದ ಹಿಂದೆ ಬಡ ಕೊಪ್ಪಳದ ಕಷ್ಟದ ಬೆವರು ಅಡಗಿದೆ. ಹಿಂದಿನ ಆಯುಕ್ತ ಯೋಗಾನಂದ ಕುರ್ಚಿಯ ಮೇಲೆ ಕುಳಿತು ಕಚೇರಿಯ ವಿಶ್ವಾಸವನ್ನೇ ಕೊಂದು, 2023-24ರಲ್ಲೇ ರೂ 41 ಲಕ್ಷದ ವೋಚರ್‌ಗಳನ್ನು ಗಾಳಿಯಲ್ಲಿ ತೇಲಿಬಿಟ್ಟ! ಆ ಹಣ ಎಲ್ಲಿ ಹೋಯಿತು? ಬಹುಶಃ ಯಾವ ಬಡವರ ಚಿಕಿತ್ಸೆಯ ಹಣವೋ, ಯಾವ ಬೀದಿ ದೀಪದ ಬಿಲ್‌ ಮೊತ್ತವೋ, ಇಂದು ಯಾರದ್ದೋ ಖಾಸಗಿ ಖಜಾನೆಯಲ್ಲಿದೆ. ಆ 41 ಲಕ್ಷದ ನೋಟುಗಳ ಮೇಲೆ ಅನಾಥದ ಕಣ್ಣೀರು ಬಿದ್ದಿದೆ ಯಜಮಾನರೇ!
​ಇ.ಟಿ. ರಾಜೇಶ ನಕ್ಷೆಗಳ ಅಡಿಯಲ್ಲೇ ಡೀಲ್‌ ಕುದುರಿಸಿ, ನಗರ ಯೋಜನೆಗೆ ಕೊಳ್ಳಿ ಇಟ್ಟವರು.
​ರವೀಂದ್ರ ಇಪ್ಪತ್ತು ವರ್ಷಗಳ ವಿಶ್ವಾಸಕ್ಕೆ ವಿಷವಿಕ್ಕಿ, ಪ್ರತಿ ಕಡತದಲ್ಲೂ ಕಳ್ಳತನದ ಮಾರ್ಗ ತೋರಿದ ವಿಧ್ವಂಸಕ ಇತನು.
ತೆರಿಗೆಯಲ್ಲಿ ಮಿಂದ ಪಾಪಿಗಳು!
​ಇವರಿಗೆ ಸರ್ಕಾರದ ಭಯವೇ ಇರಲಿಲ್ಲವೇ? 2023-24ರ ಕಾಮಗಾರಿ ಬಿಲ್ಲುಗಳಲ್ಲಿ ಕಡಿತ ಮಾಡಬೇಕಾಗಿದ್ದ ಜಿಎಸ್‌ಟಿ, ಟಿಡಿಎಸ್‌ನಂತಹ ರೂ 9.67 ಲಕ್ಷ ಹಣವನ್ನೂ ಸರ್ಕಾರಕ್ಕೆ ಕಟ್ಟದೆ, ಪ್ರಾಧಿಕಾರದ ಪೆಟ್ಟಿಗೆಯಲ್ಲೇ ಇಟ್ಟುಕೊಂಡಿದ್ದಾರೆ! ಅಂದರೆ, ಇವರು ಸರ್ಕಾರದ ಹಣವನ್ನು ತಮ್ಮ ಖಾಸಗಿ ಪಿಗ್ಗಿ ಬ್ಯಾಂಕ್ ಎಂದು ತಿಳಿದಿದ್ದರು. ಮಳಿಗೆ ಬಾಡಿಗೆ ಲೆಕ್ಕವಿಲ್ಲ ಗಾಡಿ ಓಡಿಸಿದ ಲಾಗ್ ಬುಕ್ ಮಿಸ್ಸಿಂಗ್! ಇವರು ಯಾವ ಅಸಹಾಯಕನ ಬಾಡಿಗೆ ಹಣದಲ್ಲಿ ಅರಮನೆಯ ಕನಸು ಕಂಡರೋ? ಯಾವ ಬಡವನ ತೆರಿಗೆ ಹಣದಲ್ಲಿ ಸುತ್ತಾಡಿದರೋ? ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ, ಕೇವಲ ಕಚೇರಿಯ ಕೋಣೆಗಳಲ್ಲಿ ಸಾವಿನ ಮೌನ ಆವರಿಸಿದೆ. ಅಧಿಕಾರದ ಮದದಲ್ಲಿ ಯೋಗಾನಂದ, ನಿಯಮಗಳಿಲ್ಲದೆ ನಾಲ್ಕು ಜನರನ್ನು ನೇಮಕ ಮಾಡಿಕೊಂಡು, ವಿವೇಚನೆ ಇಲ್ಲದ ಆಟ ಆಡಿದ್ದಾನೆ.
​ಕಣ್ಣೆದುರಿಗೆ 2023-24ರ ಸಾಲಿನ ರೂ 5.79 ಕೋಟಿಯ ಈ ಕರಾಳ ಸತ್ಯ ಇದೆ. ಈ ಯೋಗಾನಂದ ಮತ್ತು ಅತನ ಗೆಳೆಯರು ಬರೀ ಸಾಮನ್ಯರಲ್ಲ, ಅವರು ನಮ್ಮ ಕನಸುಗಳನ್ನು ಕೊಲೆ ಮಾಡಿದ ಪಾಪಿಗಳು! ಈಗ ಬೇಕಾಗಿರೋದು ದಂಡ, ಶಿಕ್ಷೆ ಮತ್ತು ಆ ಕಳುವಾದ ಹಣದ ವಸೂಲಿ! ಪಿ. ಯೋಗಾನಂದ, ಇ.ಟಿ. ರಾಜೇಶ ಮತ್ತು ರವೀಂದ್ರ ಇವರುಗಳ ವಿರುದ್ಧ ಈ ಕೂಡಲೇ ಲೋಕಾಯುಕ್ತದಲ್ಲಿ ಗಂಭೀರ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಲೋಕಾಯುಕ್ತದ ಕಬ್ಬಿಣದ ಸರಪಳಿ ನಿಮ್ಮೆಲ್ಲರ ಕುತ್ತಿಗೆಗೆ ಬೀಳುವ ದಿನ ದೂರ ಇಲ್ಲ! ಬಹಳ ಬೇಗ ಈ ಕಥೆಗೆ ಕ್ಲೈಮ್ಯಾಕ್ಸ್ ಇದೆ! ಅಲ್ಲಿಯವರೆಗೂ ಆ ಬಡ ಕೊಪ್ಪಳದ ಆತ್ಮಕ್ಕೆ ಶಾಂತಿ ಸಿಗಲಾರದು ಯಜಮಾನರೇ.

ಮುಂದುವರೆಯುತ್ತದೆ…..

error: Content is protected !!
Scroll to Top