ಮಾಮೂಲಿ ವ್ಯವಹಾರವೋ ಅಥವಾ ಕರ್ತವ್ಯ ಲೋಪವೋ?
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ :ಪೆ:26
ನೋಡಿ, ಕೊಪ್ಪಳದ ಬೀದಿಗಳಲ್ಲಿ ಈಗ ಶಿಕ್ಷಣ ಅನ್ನೋದು ಬಜಾರ್‌ನಲ್ಲಿ ಸಿಗೋ ಬದನೆಕಾಯಿಗಿಂತ ಕಡೆಯಾಗಿದೆ. ಅಜೂರೈಟ್‌ನಂತಹ ಹತ್ತಾರು ‘ಅನಧಿಕೃತ’ ಅಂಗಡಿಗಳು ಎಗ್ಗಿಲ್ಲದೆ ವ್ಯಾಪಾರ ಮಾಡ್ತಿವೆ. ಆದರೆ ನಮ್ಮ ಜಿಲ್ಲೆಯ ಶಿಕ್ಷಣದ ‘ಅಧಿಪತಿಗಳು’ ಮಾತ್ರ ಯಾವುದೋ ಮೋಹನ ರಾಗಕ್ಕೆ ಮರುಳಾಗಿದ್ದಾರೆ!

ಸೋಮಶೇಖರ್ ಪಾಟೀಲರ ‘ಮೌನ’ ರಾಗ!
ಡಿಡಿಪಿಐ ಸೋಮಶೇಖರ್ ಅವರೇ, ಲೈಸೆನ್ಸ್ ಇಲ್ಲದ ಈ ಅಕ್ರಮದ ಅಡ್ಡೆಗಳು ನಿಮ್ಮ ಕಚೇರಿಯ ಮೂಗಿನ ಕೆಳಗೇ ನಡೀತಿದ್ರೂ ನಿಮಗೆ ಕಾಣಿಸ್ತಿಲ್ಲ ಅಂದ್ರೆ ಏನರ್ಥ? ನಿಮ್ಮ ಎಸಿ ರೂಮಿನ ಕಿಟಕಿಗಳಿಗೆ ಯಾರಾದರೂ ‘ಕಪ್ಪು ಬಣ್ಣ’ ಬಳಿದಿದ್ದಾರಾ? ಅಥವಾ ಈ ಅಕ್ರಮದ ವಾಸನೆಯನ್ನು ತಡೆಯಲು ಯಾವುದಾದರೂ ‘ವಿಶೇಷ ಅತ್ತರು’ ನಿಮ್ಮ ಟೇಬಲ್ ತಲುಪ್ತಿದೆಯೇ?

ತಾಕತ್ತಿದ್ರೆ ಬೀಗ ಹಾಕಿ: ಇಲ್ಲದಿದ್ರೆ ಕುರ್ಚಿ ಬಿಟ್ಟು ತೊಲಗಿ!
ಕೊಪ್ಪಳದ ಡಿಡಿಪಿಐ ಮತ್ತು ಬಿಇಒ ಅವರೇ… ನಿಮ್ಮ ಎಸಿ ರೂಮಿನ ಕುರ್ಚಿ ಎಷ್ಟು ಆರಾಮದಾಯಕವಾಗಿದೆ ಅಲ್ವಾ? ಆದರೆ ಅದೇ ಕಚೇರಿಯ ಹೊರಗೆ, ‘ಅಜೂರೈಟ್’ನಂತಹ ಹತ್ತಾರು ಸಂಸ್ಥೆಗಳು ಯಾವುದೇ ಪರವಾನಗಿ ಇಲ್ಲದೆ, ಅಗ್ನಿಶಾಮಕ ದಳದ ಅನುಮತಿಯೂ ಇಲ್ಲದೆ ಮಕ್ಕಳನ್ನು ಕುರಿಗಳಂತೆ ತುಂಬಿಸಿಕೊಂಡು ಹಣ ಮಾಡ್ತಿವೆ. ಈ ಅಕ್ರಮದ ವಾಸನೆ ನಿಮ್ಮ ಮೂಗಿಗೆ ಬಡಿಯುತ್ತಿಲ್ಲವೇ? ಅಥವಾ ಆ ವಾಸನೆಯನ್ನು ತಡೆಯಲು ಯಾವುದಾದರೂ ‘ವಿಶೇಷ ಅತ್ತರು’ ನಿಮ್ಮ ಕಚೇರಿಗೆ ತಲುಪುತ್ತಿದೆಯೇ? ಎಂಬ ಅನುಮಾನ ಈಗ ಜನರಲ್ಲಿ ಮೂಡುತ್ತಿದೆ.

ಹನುಮಂತಪ್ಪನವರ ಹಳೇ ‘ಡೈಲಾಗ್’!
ಬಿಇಒ ಹನುಮಂತಪ್ಪನವರೇ, ದೂರು ಕೊಟ್ಟರೆ ಸಾಕು “ನೋಡ್ತೀವಿ.. ಮಾಡ್ತೀವಿ” ಅಂತೀರಾ. ಸಾಹೇಬ್ರೇ, ಇದು ಸಿನೆಮಾ ಅಲ್ಲ, ಮಕ್ಕಳ ಭವಿಷ್ಯ! ಅಗ್ನಿ ಸುರಕ್ಷತೆ ಇಲ್ಲದ ಆ ಕಿರಿದಾದ ರೂಮುಗಳಲ್ಲಿ ಅನಾಹುತ ಸಂಭವಿಸಿದರೆ, ನಿಮ್ಮ ಈ ‘ಪೊಳ್ಳು ಆಶ್ವಾಸನೆ’ ಆ ಮುಗ್ಧ ಜೀವಗಳನ್ನು ಉಳಿಸುತ್ತದೆಯೇ?
ಬೀಗ ಜಡಿಯೋ ತಾಕತ್ತಿದೆಯೇ?
ಅಧಿಕಾರಿಗಳೇ, ನಿಮ್ಮ ಈ ಕುರುಡು ನಿದ್ದೆ ನೋಡಿದ್ರೆ ಅಕ್ರಮ ಕೋಚಿಂಗ್ ಸೆಂಟರ್ ಮಾಲೀಕರ ಜೊತೆ ನಿಮಗೂ ಯಾವುದೋ ‘ಅದೃಶ್ಯ ನಂಟು’ ಇರುವ ಹಾಗಿದೆ. ತಾಕತ್ತಿದ್ರೆ ನಾಳೆಯೇ ಈ ಅಕ್ರಮದ ಅಂಗಡಿಗಳಿಗೆ ಬೀಗ ಜಡಿಯಿರಿ, ಇಲ್ಲದಿದ್ರೆ ಆ ಕುರ್ಚಿಯಿಂದ ಕೆಳಗಿಳಿಯಿರಿ. ಜನ ನೋಡ್ತಿದ್ದಾರೆ ಸಾಹೇಬ್ರೇ, ಹುಷಾರ್!
ಮುಂದುವರೆಯುತ್ತದೆ…..

