ರಣಬೇಟೆ ನ್ಯೂಸ್ ಕೊಪ್ಪಳ.
ಜಿಲ್ಲೆಯ 39 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಭುಗತ ನೀರಿನ ತೊಟ್ಟಿಯಲ್ಲಿ ಸುಮಾರು ಒಂದು ಅಡಿಯಷ್ಟು ಕೆಸರು ಸಂಗ್ರಹವಾಗಿದ್ದು ಇದೆ ಕೆಸರುಮಯ ನೀರನ್ನು ಗ್ರಾಮಗಳಿಗೆ ಕುಡಿಯುವ ಉದ್ದೇಶದಿಂದ ಪೂರೈಕೆ ಆಗುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ಜರುಗಿದೆ.
ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕರ್ನಾಟಕ ಮೂಲಭೂತ ಅಭಿವೃದ್ಧಿ ನಿಯಮಿತ ಕೊಪ್ಪಳ ಇವರಿಂದ ರಾಜೀವ್ ಗಾಂಧಿ ಸಬ್ ಮಿಷನ್ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಬನ್ನಿಕೊಪ್ಪ ಮತ್ತು ಇನ್ನಿತರ 38 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಯೋಜನೆಯ ಉದ್ದೇಶಕ್ಕಾಗಿ ಸುಮಾರು 20 ಲಕ್ಷ ನೀರಿನ ಸಂಗ್ರಹದ ಸಾಮರ್ಥ್ಯವುಳ್ಳ ಭುಗತ ನೀರಿನ ತೊಟ್ಟಿ ನಿರ್ಮಿಸಲಾಗಿದ್ದು, ವರ್ಷಾನುಗಟ್ಟಲೆ ಕಾಲ ಗತಿಸಿದರು ಸಹ ಈ ಟ್ಯಾಂಕನ್ನು ಶುಚಿಗೊಳಿಸದೆ ಇದ್ದು ನೀರಿನ ಟ್ಯಾಂಕನ ನೀರು ಶೇಖರಣೆಗೊಳ್ಳುವ ಸ್ಥಳದ ಕೆಳಭಾಗದಲ್ಲಿ ಸುಮಾರು ಒಂದು ಅಡಿಯಷ್ಟು ಕೊಳಚೆ ಮಣ್ಣು ಶೇಖರಣೆಯಾಗಿದ್ದು ನೀರಿನ ಟ್ಯಾಂಕ್ ಸಹ ಕೊಳಚೆ ನೀರಿನಿಂದ ಕೂಡಿರುತ್ತದೆ.

ಸದ್ಯ ಸುಮಾರು ಆರು ದಿನಗಳಿಂದ ಈ ನೀರಿನ ಟ್ಯಾಂಕಿಗೆ ನೀರು ಸರಬರಾಜು ಆಗದೇ ಇರುವುದರಿಂದ ಸಂಪೂರ್ಣ ನೀರು ಖಾಲಿಯಾಗಿದ್ದು ತಳಭಾಗದಲ್ಲಿ ಶೇಖರಣೆಗೊಂಡಿರುವ ಕೊಳಚೆ ಮಣ್ಣನ್ನು ಬನ್ನಿಕೊಪ್ಪ ಗ್ರಾಮಸ್ಥರು ನೋಡಿ ಆಶ್ಚರ್ಯಗೊಂಡು ನೀರಿನ ತೊಟ್ಟಿ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ ಹಾಗೂ ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ನೀರಿನ ತೊಟ್ಟಿಯಲ್ಲಿ ಶೇಖರಣೆ ಗೊಂಡಿರುವ ಕೊಳಚೆ ಮಣ್ಣನ್ನು ನೋಡಿದರೆ ಯಾವ ಪ್ರಜೆಯೂ ಸಹ ಇಲ್ಲಿನ ನೀರನ್ನು ಕುಡಿಯಲು ಮುಂದಾಗುವುದಿಲ್ಲ ಆದರೆ ಒಂದಲ್ಲ ಎರಡಲ್ಲ 39 ಹಳ್ಳಿಗಳಿಗೆ ನೀರು ಮತ್ತು ನೈರ್ಮಲೀಕರಣ ಇಲಾಖೆಯವರು ಇದೇ ನೀರನ್ನು ಸರಬರಾಜು ಮಾಡುತ್ತಿದ್ದು ಇದರಿಂದ ಖಾಯಿಲೆಗಳು ಸಾಮಾನ್ಯವಾಗಿ ಹರಡಲಾರಂಭಿಸಿವೆ ಎಂದು ಗ್ರಾಮಸ್ಥರು ಇಲಾಖೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು

ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ ವೆಂಕಟಪುರ ಮಾತನಾಡಿ ಈ ಭಾಗದ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯಲು ಇದೆ ಟ್ಯಾಂಕಿನಲ್ಲಿ ಶೇಖರಣೆಗೊಂಡ ನೀರು ಆಧಾರವಾಗಿದ್ದು ಇಲಾಖೆಯ ಅಧಿಕಾರಿಗಳು ಈ ಟ್ಯಾಂಕನ್ನು ಶುಚಿಗೊಳಿಸುವಲ್ಲಿ ವರ್ಷಾನುಗಟ್ಟಲೆ ಹಿಂದೇಟು ಹಾಕುತ್ತಿದ್ದು ಸಾರ್ವಜನಿಕರಿಗೆ ಕುಡಿಸುತ್ತಿರುವ ನೀರನ್ನು ತಾವು ಒಂದು ಬಾರಿ ಸೇವಿಸಲಿ ಎಂದು ಅಧಿಕಾರಿಗಳಲ್ಲಿ ದೂರವಾಣಿ ಮೂಲಕ ತಿಳಿಸಿದರಲ್ಲವೇ ಇದನ್ನು ಶೀಘ್ರದಲ್ಲಿಯೇ ಶುಚಿಗೊಳಿಸಿ ಸ್ವಚ್ಛ ನೀರನ್ನು ಪೂರೈಕೆ ಮಾಡದೇ ಇದ್ದಲ್ಲಿ ಇದೆ ನೀರನ್ನು ಶಾಸಕರ ಕಾರ್ಯಾಲಯ ಹಾಗೂ ಮುಖ್ಯಮಂತ್ರಿಗಳಿಗೆ ಅಂಚೆ ಮೂಲಕ ರವಾನಿಸಲಾಗುವುದು ಎಂದು ತಿಳಿಸಿದರು. ಗ್ರಾಮದ ಪ್ರಮುಖರಾದ ಮರಿಗೌಡರು ತಗ್ಗಿನಮನಿ ಮಾತನಾಡುತ್ತಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶುದ್ಧೀಕರಿಸಿದ ಬಾಟಲ್ ನೀರನ್ನು ಕುಡಿದು ತಮ್ಮ ಇದ್ದ ಹತ್ತನಿಸಿಕೊಳ್ಳುತ್ತಾರೆ ಆದರೆ ಗ್ರಾಮೀಣ ಪ್ರದೇಶದ ಬಡ ಜನತೆಗೆ ಇದೇ ನೀರು ಆಧಾರವಾಗಿದ್ದು ಬಡವರಿಗೆ ಕೊಡಿಸುತ್ತಿರುವ ನೀರನ್ನು ಒಂದು ಬಾರಿ ಅಧಿಕಾರಿಗಳು ಸೇವಿಸಿ ನೋಡಲಿ ಸಾರ್ವಜನಿಕರ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗರಾಜ್ ವೆಂಕಟಪುರ್, ಮರಿಗೌಡ್ರು ತಗ್ಗಿನಮನಿ, ಸಿದ್ದಪ್ಪ ಮಾಳೆ ಕೊಪ್ಪ, ಸಿದ್ದಪ್ಪ ಪ್ಯಾಟಿ, ನಾಗರಾಜ್ ಹಳ್ಳಿಕೇರಿ, ಚನ್ನಪ್ಪ ಮೆಣಸಿನಕಾಯಿ, ರಾಜು ತಗ್ಗಿನಮನಿ, ಶರಣಪ್ಪ ಆದಾಪುರ್, ಆನಂದ್ ತಗ್ಗಿನಮನಿ, ರಮೇಶ್ ತಳವಾರ್, ರಾಜೀವ್ ಗಾಂಧಿ ಸಬ್ ಮಿಷನ್ ಗ್ರಾಮ ಪಂಚಾಯಿತಿ ಸರ್ವ ಸಿಬ್ಬಂದಿಗಳು.