ರಣಬೇಟೆ ನ್ಯೂಸ್ ಕೂಕನೂರ
ಕೊಳಚೆಯಿಂದ ಕೂಡಿದ ನೀರಿನ ಟ್ಯಾಂಕ್; ಸ್ವಚ್ಛಗೋಳಿದ ನೀರು ಮತ್ತು ನೈರ್ಮಲಿಕರಣ ಇಲಾಖೆ
ಕುಕನೂರು ತಾಲೂಕಿನ ಬನ್ನಿ ಕೊಪ್ಪ ಗ್ರಾಮದಲ್ಲಿರುವ ಭೂಗತ ನೀರಿನ ತೊಟ್ಟಿಯಲ್ಲಿ ಸುಮಾರು ಒಂದು ಅಡಿಯಷ್ಟು ಕೆಸರು ಸಂಗ್ರಹವಾಗಿದ್ದು, ಭಾನುವಾರ ಟ್ಯಾಂಕ್ ಶುಚಿಗೊಳಿಸುವ ಕಾರ್ಯ ಬರದಿಂದ ಸಾಗಿತು. ಸುಮಾರು ಒಂದು ವರ್ಷಗಳಿಂದ 20 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯವುಳ್ಳ 39 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಭೂಗತ ನೀರಿನ ತೊಟ್ಟಿಯಲ್ಲಿ ಕೊಳಚೆ ಮಣ್ಣು ಸೇರಿಕೊಂಡಿದ್ದು ಅದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ ಎಂಬ ಸುದ್ದಿಯನ್ನು ರಣಬೇಟೆ ಸುದ್ದಿ ವಾಹಿನಿ ಶನಿವಾರ ಪ್ರಕಟಿಸಿದ್ದು ವಿಷಯದ ಗಂಭೀರತೆ ಹರಿಯುತ್ತಿದ್ದಂತೆಯೇ ಕುಡಿಯುವ ನೀರು ಸರಬರಾಜು ನೈರ್ಮಲೀಕರಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಭಾನುವಾರ ಬೆಳಿಗ್ಗೆಯಿಂದಲೇ ನೀರಿನ ಟ್ಯಾಂಕ್ ಶುಚಿಗೊಳಿಸುವ ಕಾರ್ಯವನ್ನು ಪ್ರಾರಂಭಗೊಳಿಸಿರುತ್ತಾರೆ.

ಬನ್ನಿಕೊಪ್ಪ ಗ್ರಾಮದಲ್ಲಿ ಕರ್ನಾಟಕ ಮೂಲಭೂತ ಅಭಿವೃದ್ಧಿ ನಿಯಮಿತ ಕೊಪ್ಪಳ ಇವರಿಂದ ರಾಜೀವ್ ಗಾಂಧಿ ಸಬ್ ಮಿಷನ್ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಬನ್ನಿಕೊಪ್ಪ ಮತ್ತು ಇತರೆ 38 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಭೂಗತ ನೀರಿನ ತೊಟ್ಟಿ ಒಳಗಡೆ ಸುಮಾರು ಅರ್ಧ ಅಡಿಗಳಿಗೂ ಹೆಚ್ಚು ಮಣ್ಣಿನ ಕೊಳಚೆ ಸಂಗ್ರಹವಾಗಿದ್ದನ್ನು ಕಂಡಂತಹ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ರಣಬೇಟೆ ಪ್ರಕಟಗೊಳಿಸಲಾಯಿತು. ಪತ್ರಿಕೆಯನ್ನು ನೋಡುತ್ತಿದ್ದಂತೆಯೇ ಕಾರ್ಯಕ್ರಮದ ಅಧಿಕಾರಿಗಳು ಸಾಯಂಕಾಲದ ವರೆಗೆ ನಿರಂತರ ವಾಗಿ ನೀರಿನ ಟ್ಯಾಂಕನ್ನು ಶುಚಿಗೊಳಿಸುವ ಕಾರ್ಯವನ್ನು ಪ್ರಾರಂಭಿಸಿದ್ದು ಒಂದೇ ದಿನದಲ್ಲಿ ಸಂಪೂರ್ಣವಾಗಿ ಶುಚಿಗೊಳಿಸಿ ನಂತರವೇ ನೀರನ್ನು ಸಂಗ್ರಹಿಸಿ ಶೀಘ್ರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲಿಕರಣ ಇಲಾಖೆ ಅಧಿಕಾರಿ ರಾಜಶೇಖರ ಮಳಿಮಠ ತಿಳಿಸಿದರು.
ರಣಬೇಟೆ ಸುದ್ದಿವಾಹಿನಿಯ ವರದಿಗೆ ಶೀಘ್ರದಲ್ಲಿಯೇ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿರುವುದನ್ನು ಕಂಡಂತಹ ಬನ್ನಿಕೊಪ್ಪ ಗ್ರಾಮಸ್ಥರು ಧನ್ಯವಾದಗಳು ತಿಳಿಸಿರುತ್ತಾರೆ.