ಕೊಪ್ಪಳಕ್ಕೆ ಮತ್ತೊಂದು ಕಾರ್ಖಾನೆ; ಆಕ್ರೋಶಗೊಂಡ ಗ್ರಾಮಸ್ಥರು.

ರಣಬೇಟೆ ನ್ಯೂಸ್‌ ಕೊಪ್ಪಳ. ನಗರದ ಹತ್ತಿರದಲ್ಲಿಯೇ ಇರುವ ಮುದ್ದಾಬಳ್ಳಿ ಮತ್ತು ಗೊಂಡಬಾಳ ಗ್ರಾಮಗಳ ನಡುವೆ ಸಕ್ಕರೆ ಕಾರ್ಖಾನೆ ಎಂದು ತಲೆಯೇತ್ತುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಆಕ್ಷೇಪಣ ರಹಿತ ಪ್ರಮಾಣ ಪತ್ರ (NOC) ನೀಡಬೇಕೆಂದು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡಿದೆ. ಮನವಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ನೋಟಿಸ್ ಹೊರಡಿಸಲಾಗಿದ್ದು ಗ್ರಾಮಸ್ಥರು ಆಕ್ರೋಶಗೊಂಡು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ಘಟನೆ ಜರುಗಿದೆ.


ನಗರದಿಂದ ಕೇವಲ ಹತ್ತರಿಂದ ಹದಿನೈದು ಕಿಲೋಮೀಟರ್ ಅಂತರದಲ್ಲಿರುವ ಮುದ್ದಾಬಳ್ಳಿ ಹಾಗೂ ಗೊಂಡಬಾಳ ಗ್ರಾಮಗಳ ನಡುವೆ ಈಗಾಗಲೇ 64 ಎಕರೆ ಭೂ ಸ್ವಾಧೀನ ಕಾರ್ಯ ಸಂಪೂರ್ಣಗೊಂಡಿದ್ದು ಕಾರ್ಖಾನೆ ಸ್ಥಾಪನೆಗೆ ಎನ್ ಓ ಸಿ ನೀಡಬೇಕು ಎಂದು UKEM AGRA INFRA LTD ಕಂಪನಿಯ ಅಧ್ಯಕ್ಷರಿಂದ ಗ್ರಾಮ ಪಂಚಾಯಿತಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದ್ದು, ಮನವಿ ಪತ್ರದ ಅನ್ವಯ ಗ್ರಾಮ ಪಂಚಾಯತಿ ಕಾರ್ಯಾಲಯದಿಂದ ನೋಟಿಸ್ ಹೊರಡಿಸಲಾಗಿರುತ್ತದೆ, ನೋಟಿಸ್ ಹೊರಡಿಸಿದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಗೊಂಡಬಾಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದು ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾರದು ಎಂದು ಒತ್ತಾಯಿಸಿದರು.


ಈ ವೇಳೆಯಲ್ಲಿ ಗ್ರಾಮಸ್ಥರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗ್ರಾಮದಿಂದ ಕೇವಲ ಎರಡು ನೂರು ಮೀಟರ್ ಅಂತರದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಕಾಣದ ಕೈಗಳು ಮುಂದಾಗಿದ್ದು ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ ಆದ್ದರಿಂದ ತಕ್ಷಣವೇ ಸಕ್ಕರೆ ಕಾರ್ಖಾನೆಯವರ ಮನವಿಯನ್ನು ತಿರಸ್ಕರಿಸಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕೆಂದು ಆಗ್ರಹಿಸಿರುವುದಾಗಿ ತಿಳಿಸಿದರು.

error: Content is protected !!
Scroll to Top