ಸಚಿವರ ಅನುಭವದ ಕೊರತೆಯಿಂದ ಗುಳೆ ಹೊರಟ ಕ್ಷೇತ್ರದ ಜನತೆ-ಬಸವರಾಜ ದಡೇಸುಗೂರು.

ರಣಬೇಟೆ ನ್ಯೂಸ್‌ ಕೊಪ್ಪಳ. ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅನುಭವ ಕೊರತೆಯಿಂದ ತುಂಗಭದ್ರಾ ಜಲಾನಯನ ಪ್ರದೇಶದ ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು ಹೇಳಿದರು.
ಜಿಲ್ಲೆಯ ಕೊಪ್ಪಳದ ಅಲ್ಪ ಪ್ರಮಾಣದ ಜಮೀನುಗಳು ಹಾಗೂ ಗಂಗಾವತಿ ಹಾಗೂ ಕಾರಟಗಿ ಭಾಗದ ಬಹುತೇಕ ರೈತ ವರ್ಗದವರು ತುಂಗಭದ್ರಾ ನೀರನ್ನೇ ತಮ್ಮ ಕೃಷಿ ಚಟುವಟಿಕೆಗಳಿಗೆ ಅವಲಂಬಿಸಿದ್ದಾರೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಅನುಭವದ ಕೊರತೆ ಇದ್ದು ರೈತರ ಸಮರ್ಪಕವಾಗಿ ಎರಡು ಬೆಳಿಗ್ಗೆ ಬೇಕಾಗುವ ನೀರಿನ ಬಗ್ಗೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಅರಿವಿಲ್ಲದಂತಿದೆ ಯಾಕೆಂದರೆ ಸಚಿವರು ಬೇರೆ ಭಾಗದಿಂದ ನಮ್ಮ ಕ್ಷೇತ್ರಕ್ಕೆ ವಲಸೆ ಬಂದಿರುವುದರಿಂದ ಈ ಭಾಗದ ಜನರ ಕಷ್ಟ ಕಾರ್ಪಣ್ಯಗಳು ಅವರಿಗೆ ಅರ್ಥವಾಗಿರುವುದಿಲ್ಲ.

ನಮ್ಮ ಭಾಗದ ಜನತೆ ಬಹುತೇಕವಾಗಿ ಕೃಷಿಯನ್ನೇ ಅವಲಂಬಿಸಿದ್ದು ಕೃಷಿ ಇಲ್ಲದಿದ್ದರೆ ಸಂಪೂರ್ಣವಾಗಿ ಆರ್ಥಿಕತೆಯ ಹೊಡೆತವನ್ನು ಎದುರಿಸಬೇಕಾಗುತ್ತದೆ ಇದರಿಂದ ರೈತ ವರ್ಗದವರು ಹೊಟ್ಟೆಪಾಡಿಗಾಗಿ ಬೆಂಗಳೂರು, ಮಂಗಳೂರು ಸೇರಿದಂತೆ ಇನ್ನಿತರ ನಗರಗಳಿಗೆ ಗುಳ್ಳೆ ಹೋಗುವ ಸನ್ನಿವೇಶಗಳು ಕಾಣಿಸಿತ್ತವೆ. ಅಧಿಕಾರಿಗಳ ಪ್ರಕಾರ ಜುಲೈ ಒಂದರಿಂದ ಮುಂಗಾರು ಬೆಳಗ್ಗೆ ನೀರು ಬಿಡುಗಡೆ ಮಾಡುತ್ತಿದ್ದು 80 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡುವುದಾಗಿ ಆದೇಶ ಬಂದಿರುವುದಾಗಿ ತಿಳಿಸಿರುತ್ತಾರೆ. ಇದೆಲ್ಲ ಸರ್ಕಾರದ ಬೇಜವಾಬ್ದಾರಿತನದಿಂದ ಜರುಗುತ್ತಿದ್ದು ರೈತರಿಗೆ ಎರಡು ಬೆಳೆಗೆ ಸಾಕಾಗುವಷ್ಟು ನೀರನ್ನು ನೀಡುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಇತ್ತೀಚಿನ ದಿನಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಕಾರ್ಯಾಲಯದಲ್ಲಿ ರೈತರ ಸಲಹೆ ಸೂಚನೆಗೆ ಬೆಲೆ ಇಲ್ಲದಂತಾಗಿದ್ದು ರೈತರ ಜೊತೆಗೆ ಚರ್ಚೆ ನಡೆಸಿ ಕೊಪ್ಪಳ ರಾಯಚೂರು ಬಳ್ಳಾರಿ ಜಿಲ್ಲೆಯ ರೈತರ ಜೀವನ ರೆಡಿಯಾಗಿರುವ ತುಂಗಭದ್ರ ನದಿಯ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನೀರಾವರಿ ಸಲಹಾ ಸಮಿತಿ ಸದಸ್ಯರು ಆಗಿರುವ ಶಿವರಾಜ ತಂಗಡಗಿ ಯವರು ಪ್ರವೃತ್ತರಾಗಬೇಕೆಂದು ತಿಳಿಸಿದರು.
ತುಂಗಭದ್ರಾ ಅಣೆಕಟ್ಟಿನ ಗೇಟ್ ನಂಬರ್ 19ರ ಅವಘಡದ ನಂತರ ತಂತ್ರಜ್ಞಾನ ಕ್ರಸ್ಟ್ ಗೇಟ್ ಸಂಪೂರ್ಣ ದುರಸ್ತಿ ಕೊಳ್ಳುವುದಕ್ಕೆ ಮುನ್ನ ಎಂಬತ್ತು ಟಿಎಂಸಿಗೂ ಹೆಚ್ಚು ನೀರನ್ನು ಸಂಗ್ರಹಿಸುವಂತಿಲ್ಲ ಎಂಬ ವರದಿಯನ್ನು ನೀಡಿದ್ದರು. ಆದರೆ ಸರ್ಕಾರವು ಫಸ್ಟ್ ಗೆ ದುರಸ್ತಿ ಕಾರ್ಯ ಮಾಡಲು ನಿಧಾನ ಗತಿಯನ್ನು ಅನುಸರಿಸುತ್ತಿದ್ದು ಈ ಬಾರಿ ಹೆಚ್ಚಿನ ನೀರು ಸಂಗ್ರಹ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂಬುವಂತೆ ಭಾಸವಾಗುತ್ತಿದೆ. ಕಳೆದ ಹಲವಾರು ದಿನಗಳಲ್ಲಿ ಕೆಲವೇ ದಿನಗಳಲ್ಲಿ ಪ್ರಶ್ನೆ ಕಾರ್ಯ ಸಂಪೂರ್ಣಗೊಳ್ಳದಾಗಿ ಕೊಪ್ಪಳ ಸಂಸದರು ಸಹ ಹೇಳಿದ್ದು ಆದರೆ ಇಲ್ಲಿಯ ತನಕ ಯಾವುದೇ ಕಾರ್ಯ ಸಂಪೂರ್ಣವಾಗಿ ಇರುವುದಿಲ್ಲ ಆದ್ದರಿಂದ ಸಚಿವರು ಹಾಗೂ ಸಂಸದರಿಗೆ ರೈತರ ಪರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ಶೀಘ್ರದಲ್ಲಿ ರಿಪೇರಿ ಗೊಳಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡುವುದರೊಂದಿಗೆ ರೈತರಿಗೆ ಎರಡು ಬೆಳೆಗಳಿಗೆ ಆಗುವಷ್ಟು ನೀರನ್ನು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು. ಈ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಗಣೇಶ ಹೊರತಟ್ನಾಳ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

error: Content is protected !!
Scroll to Top