ವಿಠ್ಠಲನ ನೆನೆದರೆ ಮದ್ಯ ಮಾರಾಟಗಾರರಿಗೆ ಕಷ್ಟ ಒಂದಿಷ್ಟಿಲ್ಲ ಪ್ರತಿ ಹಳ್ಳಿಗಳಲ್ಲೂ ಪಿರಂಗಣ್ಣನ ಎಣ್ಣೆ ಪಡೆಯ ಅಂಧಾ ದರ್ಬಾರ್!
ರಣಬೇಟೆ ನ್ಯೂಸ್ ಗಂಗಾವತಿ. ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಹಾಲು, ಔಷಧಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಅಬಕಾರಿ ನಿರೀಕ್ಷಕ ವಿಠ್ಠಲ ಪಿರಂಗಣ್ಣನ ಕೃಪಾಶೀರ್ವಾದದಿಂದ ಪ್ರತಿ ಹಳ್ಳಿ, ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಸಟ್ಟಸರ ಹೊತ್ತಿನಲ್ಲಿಯೂ ಮದ್ಯ ದೊರೆಯುತ್ತದೆ ಎಂದರೆ ಅಕ್ರಮ ಮದ್ಯ ಮಾರಾಟದ ಅಂಧಾ ದರ್ಬಾರ್ ಹೇಗಿದೆ ಎಂಬುವುದನ್ನು ಒಮ್ಮೆ ಊಹಿಸಿಕೊಳ್ಳಿ. ರಾಷ್ಟ್ರಪಿತ ಮಹಾತ್ಮಗಾಂಧಿಯ ಮದ್ಯ ಮುಕ್ತ ಗ್ರಾಮದ ಕನಸಿಗೆ ಕೊಳ್ಳಿ ಇಟ್ಟ ಕೀರ್ತಿ ಅಬಕಾರಿ ನಿರೀಕ್ಷಕ ವಿಠ್ಠಲ್ ಪಿರಂಗಣ್ಣನಿಗೆ ಸಲ್ಲಬೇಕು.ಗಂಗಾವತಿ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ










