Muttappa Doddamani

ಪಡಿತರ ಲೋಕದ ಪಾಪಿಗಳು : 02

ನಮ್ಮ ಹಿಂದೆ ಅಧಿಕಾರಿಗಳ ದಂಡೇ ಇದೆ. ಇವರೇನು ಕಿತ್ತಿಕೊಳ್ಳುತ್ತಾರೆ:ವೀರನಾಗ ಸಿಂಗಂ ನಂತೆ ಅಬ್ಬರಿಸಿ, ಮಂಗಂ ನಂತಾದ ಸೋಮಶೇಖರ್ ಬಿರಾದರ್* ರಣಬೇಟೆ ನ್ಯೂಸ್ ಗಂಗಾವತಿ.ಆ.22: ಕಳೆದ ಒಂದು ತಿಂಗಳಿನಿಂದ ನಮ್ಮ ರಣಬೇಟೆ ವೆಬ್ ನ್ಯೂಸ್ ನಿರಂತರವಾಗಿ ಪಡಿತರ ದಂಧೆ ಕುರಿತಂತೆ ಸರಣಿ ವರದಿಗಳನ್ನು ಮಾಡುತ್ತಿದೆ. ವರದಿಯಿಂದ ಬೆಚ್ಚಿದ ದಂಧೆಕೋರರು ಕೆಲ ದಿನಗಳ ಮಟ್ಟಿಗೆ ದಂಧೆ ಸ್ಥಗಿತಗೊಳಿಸಿದ್ದರು. ನಂತರ ಆಹಾರ ಹಾಗೂ ಪೋಲಿಸ್ ಇಲಾಖೆಯ ಆಯಾ ಕಟ್ಟಿನ ಅಧಿಕಾರಿಗಳನ್ನು ಸಂತೃಪ್ತಿಗೊಳಿಸಿ ಮತ್ತೆ ತಮ್ಮ ದಂಧೆ ಆರಂಭಿಸಿದ್ದಾರೆ. ಕಾರಟಗಿ ಮೂಲದ ಪ್ರಮುಖ […]

ಪಡಿತರ ಲೋಕದ ಪಾಪಿಗಳು : 02 Read More »

ಪಡಿತರ ಲೋಕದ ಪಾಪಿಗಳ ಕಥೆ: ೦೧

ಬಡವರ ಪಡಿತರ ಅಕ್ಕಿ ಮಕ್ಕುತ್ತಿರುವ ಕಾಂಗ್ರೆಸ್ ಹುಳುಗಳು ಯಾರು..? ‌ ರಣಬೇಟೆ ನ್ಯೂಸ್ ಕೊಪ್ಪಳ.ಆ.20: ಬಡವರ ಪಾಲಿನ ಅಕ್ಕಿಯನ್ನು ಉಳ್ಳವರು ದೋಚಿಕೊಂಡು ಕೋಟಿ, ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಸಾಲದೆಂಬಂತೆ ಇಲ್ಲಿ ದುಡಿದ ಹಡಬಿ ಹಣದಿಂದಲೇ ಜನಪ್ರತಿನಿಧಿಗಳ ಸಾಮೀಪ್ಯ ಸಾಧಿಸಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ನಿಯಂತ್ರಣ ದಲ್ಲಿಟ್ಟುಕೊಂಡು ಸರ್ವಾಧಿಕಾರಿಗಳಂತೆ ಮರೆಯುತ್ತಿದ್ದಾರೆ.ಪಡಿತರ ಅಕ್ಕಿ ಅಕ್ರಮ ದಂಧೆಯ ಜಾಲ ಅದೆಷ್ಟರ ಮಟ್ಟಿಗೆ ಬಲವಾಗಿ ಬೇರೂರಿದೆ ಎಂದರೆ, ಆಹಾರ ಇಲಾಖೆಯ ಅಧಿಕಾರಿಗಳು ಇವರ ತಂಟೆಗೆ ಹೋಗಲು ಹೆದರುತ್ತಾರೆ. ತಮಗೆ ಸಹಕಾರ ನೀಡುವ

ಪಡಿತರ ಲೋಕದ ಪಾಪಿಗಳ ಕಥೆ: ೦೧ Read More »

ಸಂಚಾರಿ ಪೊಲೀಸ್ ಠಾಣೆಯಲ್ಲೊಬ್ಬ ನಡೆದಾಡುವ ರಕ್ತ ಭಂಡಾರ

12 ಬಾರಿ ರಕ್ತದಾನ ಮಾಡಿ ಪ್ರಾಣ ಕಾಪಾಡಿದ ಪೊಲೀಸ್ ಪೇದೆ ಅಮರೇಶ ಗಂಗಾವತಿ.ಆ.19: ರಕ್ತದಾನ ಮಹಾದಾನ, ಅನಾರೋಗ್ಯ ಹಾಗೂ ಅಪಘಾತದಂತ ತುರ್ತು ಸಂದರ್ಭದಲ್ಲಿ ಒಂದೊಂದು ಹನಿ ರಕ್ತವೂ ಪ್ರಾಣ ರಕ್ಷಕವಾಗಬಲ್ಲದು. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ರಕ್ತದಾನ ಮಾಡುವಂತೆ ಪುಂಖಾನು ಪುಂಖವಾಗಿ ಭಾಷಣ ಮಾಡುವವರು ತಾವು ರಕ್ತದಾನ ಮಾಡುವ ಸಂದರ್ಭ ಬಂದರೆ ನೂರಾರು ನೆಪ ಹೇಳಿ ಜಾರಿಕೊಳ್ಳುತ್ತಾರೆ. ಆದರೆ ನಗರದ ಸಂಚಾರಿ ಪೊಲೀಸ್ ಠಾಣೆಯ ಪೇದೆಯೊಬ್ಬರು ರಕ್ತದಾನ ಮಾಡುವ ಯಾವುದೇ ಸಂದರ್ಭಗಳಲ್ಲಿ ನೆಪ ಹೇಳದೆ ಸೇವೆಯೇ ನಮ್ಮ ಪರಮೋಚ್ಚ

ಸಂಚಾರಿ ಪೊಲೀಸ್ ಠಾಣೆಯಲ್ಲೊಬ್ಬ ನಡೆದಾಡುವ ರಕ್ತ ಭಂಡಾರ Read More »

ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ತಮಟೆ ಚಳುವಳಿ

ರಕ್ತದಿಂದ ಪೋಸ್ಟರ್ ಬರೆದು ಶಾಸಕರ ಮನೆ ಮುಂದೆ ಪ್ರದರ್ಶಿಸಿ ಪ್ರತಿಭಟನೆ ಕೊಪ್ಪಳ.ಆ.18: ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ನಗರದಲ್ಲಿ ನಡೆದ ತಮಟೆ ಚಳುವಳಿಯಲ್ಲಿ ಪ್ರತಿಭಟನಾಕಾರರು ತಮ್ಮ ರಕ್ತದಿಂದ ಪೋಸ್ಟರ್ ಬರೆದು ಪ್ರದರ್ಶಿಸುವ ಮೂಲಕ ಸರ್ಕಾರದ ಗಮನ ಸೆಳೆದರು.ನಗರದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಈಶ್ವರ ಉದ್ಯಾನವನದಿಂದ ಶಾಸಕರ ಮನೆಯವರಿಗೆ ತಮಟೆ ಬಾರಿಸುತ್ತಾ ಸಾಗಿ, ನಗರದ ಶಾಸಕ ರಾಘವೇಂದ್ರ ಹಿಟ್ನಾಳ್ ಮನೆಯ ಮುಂದೆ ಸಮಾವೇಶಗೊಂಡು ಬೃಹತ್ ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿ ಸಮುದಾಯದಲ್ಲಿ ನೂರಕ್ಕೂ ಹೆಚ್ಚು ಜಾತಿಯನ್ನು

ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ತಮಟೆ ಚಳುವಳಿ Read More »

ತೆರೆಮರೆಯ ಹಿಂದೆ ನಡೆಯಿತಾ ಪ್ರಕರಣ ಮುಚ್ಚಿಹಾಕುವ ಷಡ್ಯಂತ್ರ..!?

ಕಾರಟಗಿ ರೈಸ್ ಮಿಲ್ ಮೇಲೆ ದಾಳಿ ನಡೆದು ವಾರ ಕಳೆದರೂ ದಾಖಲಾಗದ ಪ್ರಕರಣ ರಣಬೇಟೆ ನ್ಯೂಸ್ ಕೊಪ್ಪಳ.ಆ.16: ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ತಾವರಗೇರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ವೆಬ್ ನ್ಯೂಸ್ ವಿಸ್ತೃತ ವರದಿ ಪ್ರಕಟಿಸಿತ್ತು. ಅದರ ಜಾಡು ಬೆನ್ನು ಹತ್ತಿದ ಬಳ್ಳಾರಿಯ ಐಜಿ ನೇತೃತ್ವದ ಪೊಲೀಸ್ ತಂಡ ಇತ್ತೀಚೆಗೆ ಕೆಲ ವಾರಗಳ ಹಿಂದೆ ಕಾರಟಗಿ ಹೊರವಲಯದ ಬೂದಗುಂಪಾ ರಸ್ತೆಯ ವ್ಹೇ ಬ್ರಿಜ್ ಸಮೀಪದ ರೈಸ್ ಮಿಲ್ ಒಂದರ

ತೆರೆಮರೆಯ ಹಿಂದೆ ನಡೆಯಿತಾ ಪ್ರಕರಣ ಮುಚ್ಚಿಹಾಕುವ ಷಡ್ಯಂತ್ರ..!? Read More »

ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಉದ್ಯಾನವನದಲ್ಲಿ ಇದೆಂತಾ ಅಹಸ್ಯ..!‌ ರಣಬೇಟೆ ನ್ಯೂಸ್ ಕೊಪ್ಪಳ.ಆ.14: ತಾಲೂಕಿನ ರುದ್ರಾಪುರ, ಕಾಸನಕಂಡಿ ಸಮೀಪದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಈ ವೃಕ್ಷ ಉದ್ಯಾನವನದಲ್ಲಿ ಬೆಳಂಬೆಳಿಗ್ಗೆ ನೀವೊಮ್ಮೆ ವಾಯು ವಿಹಾರಕ್ಕೆ ಹೋದರೆ ಹಸುರಿನ ವನಸಿರಿ ಕಾಣುವ ಬದಲು ಪ್ಲಾಸ್ಟಿಕ್, ಕಸ, ಮದ್ಯದ ಬಾಟಲಿ, ಪೌಚುಗಳ ಜತೆಗೆ ಕಾಂಡೋಮ್ ಗಳು ಅಹಸ್ಯವಾಗಿ ನಿಮ್ಮ ಕಣ್ಣಿಗೆ ರಾಚುತ್ತವೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ಹೂ, ಬಳ್ಳಿ, ಗಿಡ, ಮರಗಳ ನಡುವೆ ಹದಿಹರೆಯದ

ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ Read More »

ಮಿತಿಮೀರಿದ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಯಾವಾಗ…?

ಬಾರ್ ಗಳ ವಿರುದ್ದದ ದೂರುಗಳಿಗೆ ಕ್ಯಾರೇ ಎನ್ನದ ಅಬಕಾರಿ ಡಿಸಿ. ರಣಬೇಟೆ ನ್ಯೂಸ್ ಕೊಪ್ಪಳ.ಆ.08: ಕುಡುಕರಿಂದಲೇ ಸರಕಾರಗಳು ನಡೆಯುತ್ತವೆ ಎಂಬ ಮಾತು ಜನಜನೀತವಾಗಿದೆ. ಆದರೆ, ಮದ್ಯದ ಅಂಗಡಿಗಳಿಂದ ಸಂದಾಯವಾಗುವ ಮಾಮೂಲು ಹಾಗೂ ಕುಡುಕರ ತೆವಲಿನಿಂದಾಗಿ ಜಿಲ್ಲೆಯ ಒಂದು ವರ್ಗದ ಅಧಿಕಾರಿಗಳ ಬದುಕು ಬಂಗಾರವಾಗುತ್ತದೆ ಎಂದರೆ ನೀವು ನಂಬುತ್ತೀರಾ…? ಹೌದು, ನೀವು ನಂಬಲೇಬೇಕು. ತಾಲೂಕಿನ ಪ್ರತಿಯೊಂದು ಮದ್ಯದ ಅಂಗಡಿಯಿಂದ ಯಾವ ಯಾವ ಅಧಿಕಾರಿಗಳಿಗೆ ಎಷ್ಟೆಷ್ಟು ತಿಂಗಳ ಮಾಮೂಲು ಸಲ್ಲುತ್ತದೆ ಎಂಬ ವಿವರಗಳನ್ನು ಕೇಳಿದರೆ ನೀವೇ ದಂಗಾಗುತ್ತೀರಿ. ಇಲ್ಲಿದೆ ನೋಡಿ

ಮಿತಿಮೀರಿದ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಯಾವಾಗ…? Read More »

ಕುಸಿದ ಮೇಲ್ಛಾವಣಿ, ತಪ್ಪಿದ ಭಾರೀ ಅನಾಹುತ.

‌ರಣಬೇಟೆ ನ್ಯೂಸ್ ಕೊಪ್ಪಳ.ಆ.04: ನಗರದ ತಾಲೂಕು ದಂಡಾಧಿಕಾರಿ ಕಚೇರಿ ಕಟ್ಟಡ ಪ್ರವೇಶ ದ್ವಾರ ಮುಂಭಾಗದ ಮೇಲ್ವಚಾವಣಿ ಮಂಗಳವಾರ ಸಂಜೆ ವೇಳೆ ಕುಸಿದಿದೆ.ಕಾರ್ಯನಿಮಿತ್ತ ನೂರಾರು ಜನ ದಿನನಿತ್ಯ ಈ ಕಚೇರಿಗೆ ಆಗಮಿಸುತ್ತಾರೆ. ತಹಶೀಲ್ದಾರರ ಕಾರು ಕೂಡ ಇಲ್ಲೇ ನಿಲ್ಲುತ್ತದೆ. ಕಟ್ಟಡ ಪ್ರವೇಶ ದ್ವಾರ ಮುಂಭಾಗದ ಮೇಲ್ವಚಾವಣಿ ಏನಾದರೂ ಕಚೇರಿ ಸಮಯದಲ್ಲಿ ಕುಸಿದಿದ್ದರೆ ಭಾರೀ ಅನಾಹುತ ಆಗುವ ಸಾಧ್ಯತೆ ಇತ್ತು. ಸಂಜೆ ವೇಳೆ ಕುಸಿದ ಕಾರಣ ಅನಾಹುತ ತಪ್ಪಿದಂತಾಗಿದೆ. ಹಲವು ದಶಕಗಳ ಪುರಾತನ ಕಟ್ಟಡ ಇದಾಗಿದ್ದು ಭಾಗಶಃ ಶಿಥಿಲಾವಸ್ಥೆ ತಲುಪಿದೆ.

ಕುಸಿದ ಮೇಲ್ಛಾವಣಿ, ತಪ್ಪಿದ ಭಾರೀ ಅನಾಹುತ. Read More »

ಅಷ್ಟಕ್ಕೂ ನೈಜ ಪತ್ರಕರ್ತರು ಎಂದರೆ ಯಾರು..?

ರಣಬೇಟೆ ನ್ಯೂಸ್‌ ಕೊಪ್ಪಳ ಅ.04: ನಕಲಿ ಪತ್ರಕರ್ತರ ಹಾವಳಿಯಿಂದ ನೈಜ ಪತ್ರಕರ್ತರನ್ನೂ ಕೂಡ ಜನ ಅನುಮಾನದಿಂದ ನೋಡುವಂತಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬೇಸರ ವ್ಯಕ್ತಪಡಿಸಿದ್ದಾರೆ. ಗಂಗಾವತಿ ನಗರದ ಮಂಥನ ಸಭಾಂಗಣದಲ್ಲಿ ಭಾನುವಾರದಂದು ನಡೆದ ಪತ್ರಿಕಾ ದಿನಾಚರಣೆ ಹಾಗೂ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು ಈ ಮೇಲಿನಂತೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ನಕಲಿ ಪತ್ರಕರ್ತರು ಯಾರು…?. ನೈಜ ಪತ್ರಕರ್ತರು ಯಾರು ಎಂದು ಬಿಡಿಸಿ ಹೇಳಬೇಕಾಗಿತ್ತು. ಆದರೆ ಆ ಕೆಲಸ

ಅಷ್ಟಕ್ಕೂ ನೈಜ ಪತ್ರಕರ್ತರು ಎಂದರೆ ಯಾರು..? Read More »

ನಗರದ ನಡು ಬೀದಿಯಲ್ಲೇ ಯುವಕನೊಬ್ಬನ ಬರ್ಬರ ಕೊಲೆ..!

ಪ್ರೇಮಪಾಶಕ್ಕೊಳಗಾದ ಯುವಕರ ನಡುವಿನ ದ್ವೇಷ ಕೊಲೆಯಲ್ಲಿ ಅಂತ್ಯ. ರಣಬೇಟೆ ನ್ಯೂಸ್‌ ಕೊಪ್ಪಳ .ಆ.04: ಯುವತಿಯೊಬ್ಬಳೊಂದಿಗಿನ ಪ್ರೇಮಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ನಡುವಿನ ದ್ವೇಷ ಭೀಕರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಭಾನುವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ 3ನೇ ವಾರ್ಡಿನ ನಿರ್ಮಿತಿ ಕೇಂದ್ರದ ಬಳಿಯ ಮಸೀದಿ ಎದುರು 26 ವರ್ಷದ ಗವಿಸಿದ್ದಪ್ಪ ನಾಯಕ ಎಂಬ ಯುವಕನನ್ನು ಸಾದಿಕ್ ಎಂಬ ಯುವಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಪ್ರಕರಣದಲ್ಲಿ ಸಹಕಾರ ನೀಡಿದ

ನಗರದ ನಡು ಬೀದಿಯಲ್ಲೇ ಯುವಕನೊಬ್ಬನ ಬರ್ಬರ ಕೊಲೆ..! Read More »

error: Content is protected !!
Scroll to Top