Muttappa Doddamani

ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಉದ್ಯಾನವನದಲ್ಲಿ ಇದೆಂತಾ ಅಹಸ್ಯ..!‌ ರಣಬೇಟೆ ನ್ಯೂಸ್ ಕೊಪ್ಪಳ.ಆ.14: ತಾಲೂಕಿನ ರುದ್ರಾಪುರ, ಕಾಸನಕಂಡಿ ಸಮೀಪದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಈ ವೃಕ್ಷ ಉದ್ಯಾನವನದಲ್ಲಿ ಬೆಳಂಬೆಳಿಗ್ಗೆ ನೀವೊಮ್ಮೆ ವಾಯು ವಿಹಾರಕ್ಕೆ ಹೋದರೆ ಹಸುರಿನ ವನಸಿರಿ ಕಾಣುವ ಬದಲು ಪ್ಲಾಸ್ಟಿಕ್, ಕಸ, ಮದ್ಯದ ಬಾಟಲಿ, ಪೌಚುಗಳ ಜತೆಗೆ ಕಾಂಡೋಮ್ ಗಳು ಅಹಸ್ಯವಾಗಿ ನಿಮ್ಮ ಕಣ್ಣಿಗೆ ರಾಚುತ್ತವೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ಹೂ, ಬಳ್ಳಿ, ಗಿಡ, ಮರಗಳ ನಡುವೆ ಹದಿಹರೆಯದ […]

ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ Read More »

ಮಿತಿಮೀರಿದ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಯಾವಾಗ…?

ಬಾರ್ ಗಳ ವಿರುದ್ದದ ದೂರುಗಳಿಗೆ ಕ್ಯಾರೇ ಎನ್ನದ ಅಬಕಾರಿ ಡಿಸಿ. ರಣಬೇಟೆ ನ್ಯೂಸ್ ಕೊಪ್ಪಳ.ಆ.08: ಕುಡುಕರಿಂದಲೇ ಸರಕಾರಗಳು ನಡೆಯುತ್ತವೆ ಎಂಬ ಮಾತು ಜನಜನೀತವಾಗಿದೆ. ಆದರೆ, ಮದ್ಯದ ಅಂಗಡಿಗಳಿಂದ ಸಂದಾಯವಾಗುವ ಮಾಮೂಲು ಹಾಗೂ ಕುಡುಕರ ತೆವಲಿನಿಂದಾಗಿ ಜಿಲ್ಲೆಯ ಒಂದು ವರ್ಗದ ಅಧಿಕಾರಿಗಳ ಬದುಕು ಬಂಗಾರವಾಗುತ್ತದೆ ಎಂದರೆ ನೀವು ನಂಬುತ್ತೀರಾ…? ಹೌದು, ನೀವು ನಂಬಲೇಬೇಕು. ತಾಲೂಕಿನ ಪ್ರತಿಯೊಂದು ಮದ್ಯದ ಅಂಗಡಿಯಿಂದ ಯಾವ ಯಾವ ಅಧಿಕಾರಿಗಳಿಗೆ ಎಷ್ಟೆಷ್ಟು ತಿಂಗಳ ಮಾಮೂಲು ಸಲ್ಲುತ್ತದೆ ಎಂಬ ವಿವರಗಳನ್ನು ಕೇಳಿದರೆ ನೀವೇ ದಂಗಾಗುತ್ತೀರಿ. ಇಲ್ಲಿದೆ ನೋಡಿ

ಮಿತಿಮೀರಿದ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಯಾವಾಗ…? Read More »

ಕುಸಿದ ಮೇಲ್ಛಾವಣಿ, ತಪ್ಪಿದ ಭಾರೀ ಅನಾಹುತ.

‌ರಣಬೇಟೆ ನ್ಯೂಸ್ ಕೊಪ್ಪಳ.ಆ.04: ನಗರದ ತಾಲೂಕು ದಂಡಾಧಿಕಾರಿ ಕಚೇರಿ ಕಟ್ಟಡ ಪ್ರವೇಶ ದ್ವಾರ ಮುಂಭಾಗದ ಮೇಲ್ವಚಾವಣಿ ಮಂಗಳವಾರ ಸಂಜೆ ವೇಳೆ ಕುಸಿದಿದೆ.ಕಾರ್ಯನಿಮಿತ್ತ ನೂರಾರು ಜನ ದಿನನಿತ್ಯ ಈ ಕಚೇರಿಗೆ ಆಗಮಿಸುತ್ತಾರೆ. ತಹಶೀಲ್ದಾರರ ಕಾರು ಕೂಡ ಇಲ್ಲೇ ನಿಲ್ಲುತ್ತದೆ. ಕಟ್ಟಡ ಪ್ರವೇಶ ದ್ವಾರ ಮುಂಭಾಗದ ಮೇಲ್ವಚಾವಣಿ ಏನಾದರೂ ಕಚೇರಿ ಸಮಯದಲ್ಲಿ ಕುಸಿದಿದ್ದರೆ ಭಾರೀ ಅನಾಹುತ ಆಗುವ ಸಾಧ್ಯತೆ ಇತ್ತು. ಸಂಜೆ ವೇಳೆ ಕುಸಿದ ಕಾರಣ ಅನಾಹುತ ತಪ್ಪಿದಂತಾಗಿದೆ. ಹಲವು ದಶಕಗಳ ಪುರಾತನ ಕಟ್ಟಡ ಇದಾಗಿದ್ದು ಭಾಗಶಃ ಶಿಥಿಲಾವಸ್ಥೆ ತಲುಪಿದೆ.

ಕುಸಿದ ಮೇಲ್ಛಾವಣಿ, ತಪ್ಪಿದ ಭಾರೀ ಅನಾಹುತ. Read More »

ಅಷ್ಟಕ್ಕೂ ನೈಜ ಪತ್ರಕರ್ತರು ಎಂದರೆ ಯಾರು..?

ರಣಬೇಟೆ ನ್ಯೂಸ್‌ ಕೊಪ್ಪಳ ಅ.04: ನಕಲಿ ಪತ್ರಕರ್ತರ ಹಾವಳಿಯಿಂದ ನೈಜ ಪತ್ರಕರ್ತರನ್ನೂ ಕೂಡ ಜನ ಅನುಮಾನದಿಂದ ನೋಡುವಂತಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬೇಸರ ವ್ಯಕ್ತಪಡಿಸಿದ್ದಾರೆ. ಗಂಗಾವತಿ ನಗರದ ಮಂಥನ ಸಭಾಂಗಣದಲ್ಲಿ ಭಾನುವಾರದಂದು ನಡೆದ ಪತ್ರಿಕಾ ದಿನಾಚರಣೆ ಹಾಗೂ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು ಈ ಮೇಲಿನಂತೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ನಕಲಿ ಪತ್ರಕರ್ತರು ಯಾರು…?. ನೈಜ ಪತ್ರಕರ್ತರು ಯಾರು ಎಂದು ಬಿಡಿಸಿ ಹೇಳಬೇಕಾಗಿತ್ತು. ಆದರೆ ಆ ಕೆಲಸ

ಅಷ್ಟಕ್ಕೂ ನೈಜ ಪತ್ರಕರ್ತರು ಎಂದರೆ ಯಾರು..? Read More »

ನಗರದ ನಡು ಬೀದಿಯಲ್ಲೇ ಯುವಕನೊಬ್ಬನ ಬರ್ಬರ ಕೊಲೆ..!

ಪ್ರೇಮಪಾಶಕ್ಕೊಳಗಾದ ಯುವಕರ ನಡುವಿನ ದ್ವೇಷ ಕೊಲೆಯಲ್ಲಿ ಅಂತ್ಯ. ರಣಬೇಟೆ ನ್ಯೂಸ್‌ ಕೊಪ್ಪಳ .ಆ.04: ಯುವತಿಯೊಬ್ಬಳೊಂದಿಗಿನ ಪ್ರೇಮಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ನಡುವಿನ ದ್ವೇಷ ಭೀಕರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಭಾನುವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ 3ನೇ ವಾರ್ಡಿನ ನಿರ್ಮಿತಿ ಕೇಂದ್ರದ ಬಳಿಯ ಮಸೀದಿ ಎದುರು 26 ವರ್ಷದ ಗವಿಸಿದ್ದಪ್ಪ ನಾಯಕ ಎಂಬ ಯುವಕನನ್ನು ಸಾದಿಕ್ ಎಂಬ ಯುವಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಪ್ರಕರಣದಲ್ಲಿ ಸಹಕಾರ ನೀಡಿದ

ನಗರದ ನಡು ಬೀದಿಯಲ್ಲೇ ಯುವಕನೊಬ್ಬನ ಬರ್ಬರ ಕೊಲೆ..! Read More »

ಹಲವು ಸಂಶಯಗಳನ್ನು ಹುಟ್ಟು ಹಾಕಿದ ರೈಸ್ ಮಿಲ್ ಮೇಲಿನ ದಾಳಿ ಪ್ರಕರಣ.

ಪ್ರಭಾವಿಗಳ ಕೈಚಳಕಕ್ಕೆ ಮರುಳಾಯ್ತಾ ಐಜಿ ನೇತೃತ್ವದ ಪೊಲೀಸ್ ತಂಡ…? ಕೊಪ್ಪಳ.ಆ.02: ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ಪತ್ರಿಕೆಯು “ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ”. “ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು” ಎಂಬ ತಲೆಬರಹದಡಿ ವಿಸ್ತೃತ ಸುದ್ದಿಯೊಂದನ್ನು ಜುಲೈ 15ರಂದು ಪ್ರಕಟಿಸಿತ್ತು. ಸದ್ಯಕ್ಕೆ ಸುದ್ದಿ ಜಿಲ್ಲೆಯಾದ್ಯಂತ ಸಂಚಲನವನ್ನು ಸೃಷ್ಟಿಸಿತ್ತು. ಸಾಲದೆಂಬಂತೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಬಡಿದೆಬ್ಬಿಸಿತ್ತು. ಆದರೆ ಇತ್ತೀಚೆಗೆ

ಹಲವು ಸಂಶಯಗಳನ್ನು ಹುಟ್ಟು ಹಾಕಿದ ರೈಸ್ ಮಿಲ್ ಮೇಲಿನ ದಾಳಿ ಪ್ರಕರಣ. Read More »

ಉದ್ಯಮಿ ಜಿತೇಂದ್ರ ತಲೇಡಾ ಅವರಿಂದ 38 ಗುಂಟೆ ಸರ್ಕಾರಿ ಭೂಮಿ ಒತ್ತುವರಿ.

ಉದ್ಯಮಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರಾ ಕಂದಾಯ ಅಧಿಕಾರಿಗಳು..!? ರಣಬೇಟೆ ನ್ಯೂಸ್‌ ಕೊಪ್ಪಳ, ಜು.26: ತಾಲೂಕಿನ ಕೊಪ್ಪಳ ಹೊಬಳಿಯ ಮಂಗಳಾಪೂರ ಗ್ರಾಮದ ಸರ್ವೆ ನಂ.19ರ ಜಮೀನಿನ ಅಕ್ಕ ಪಕ್ಕದ ಸರ್ಕಾರದ ಎರಡು ಎಕರೆ ಜಮೀನು ಹಾಗೂ ಬೆಟ್ಟ, ಗುಡ್ಡಗಳನ್ನು ಒತ್ತುವರಿ ಮಾಡಿರುವ ಉದ್ಯಮಿ ಜಿತೇಂದ್ರ ತಾಲೇಡಾ ಅವರಿಂದ ಜಮೀನನ್ನು ವಶಪಡಿಸಿಕೊಂಡು ಸರ್ಕಾರಿ ಜಮೀನಿಗೆ ಹಾಕಿಕೊಂಡಿರುವ ತಂತಿ ಬೇಲಿ ತೆರವುಗೊಳಿಸಬೇಕು. ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ತಾಲೇಡಾ ವಿರುದ್ಧ ಶಿಸ್ತುಕ್ರಮ ಕೈಗೊಂಡು ಪ್ರಕರಣ ದಾಖಲಿಸುವಂತೆ ಸಾಮಾಜಿಕ ಹೋರಾಟಗಾರ ಮುತ್ತಪ್ಪ ದೊಡ್ಮನಿ ತಹಶಿಲ್ದಾರರಿಗೆ

ಉದ್ಯಮಿ ಜಿತೇಂದ್ರ ತಲೇಡಾ ಅವರಿಂದ 38 ಗುಂಟೆ ಸರ್ಕಾರಿ ಭೂಮಿ ಒತ್ತುವರಿ. Read More »

ಹುದ್ದೆಗೆ ಒಂದು ಘನತೆ ತಂದು ಕೊಡುವವನೇ ನಿಜವಾದ ನಿಷ್ಠಾವಂತ ಅಧಿಕಾರಿ

ಮಾನ್ಯ ಸೋಮಶೇಖರ ಬಿರಾದರ ಸಾಹೇಬರು ಆ ನಿಟ್ಟಿನಲ್ಲಿ ಶ್ರಮಿಸಲಿ. ಕೊಪ್ಪಳ.ಜುಲೈ.26: ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ಪತ್ರಿಕೆಯು ಜುಲೈ 15ರಂದು “ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ”. “ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು” ಎಂಬ ತಲೆಬರಹದಡಿ ಪ್ರಕಟವಾದ ವಿಸ್ತೃತ ಸುದ್ದಿಗೆ ಸ್ಪಂದಿಸಿರುವ ಆಹಾರ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದರ ಅವರು ಕ್ರಮವಹಿಸಿದ ಕುರಿತು ಮಾಹಿತಿ ನೀಡಿದ್ದಾರೆ. ಅವರ ಪತ್ರದ ವಿವರ ಇಂತಿದೆ.ವಿಷಯ:- ತಮ್ಮ

ಹುದ್ದೆಗೆ ಒಂದು ಘನತೆ ತಂದು ಕೊಡುವವನೇ ನಿಜವಾದ ನಿಷ್ಠಾವಂತ ಅಧಿಕಾರಿ Read More »

ರಾಬಕೊವಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ.

‌ರಣಬೇಟೆ ನ್ಯೂಸ್ ಕೊಪ್ಪಳರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ(ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ, ಹಾಗೂ ಉಪಾಧ್ಯಕ್ಷರಾಗಿ ಗಂಗಾವತಿಯ ಎನ್ ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಈ ವೇಳೆಯಲ್ಲಿ ವರದಿಗಾರರ ಜೊತೆ ರಾಘವೇಂದ್ರ ಹಿಟ್ನಾಳ ಮಾತನಾಡುತ್ತಾ ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಸಹಕಾರದ ಜೊತೆ ರಾಯಚೂರು,ಬಳ್ಳಾರಿ, ಕೊಪ್ಪಳ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲಾ ಜನಪ್ರತಿನಿಧಿಗಳು ಹಾಗೂ ನಿರ್ದೇಶಕರ ಸಹಕಾರದಿಂದ ಈ

ರಾಬಕೊವಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ. Read More »

ಹದಗೆಟ್ಟ ರಸ್ತೆ; ಪ್ರಯಾಣಿಕರ ಗೋಳು ಕೇಳೋರು ಯಾರು…?

ರಣಬೇಟೆ ನ್ಯೂಸ್ ಕೊಪ್ಪಳ. ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಹಾದು ಹೋಗಿರುವ ಕೊಪ್ಪಳ ಗಂಗಾವತಿ ರಾಷ್ಟ್ರೀಯ ಹೆದ್ದಾರಿಗೆ ರೈಲ್ವೆ ಕ್ರಾಸಿಂಗ್ ತಪ್ಪಿಸಲು ಮೇಲ್ ಸೇತುವೆಯ ನಿರ್ಮಾಣ ಮಾಡಿ ಉದ್ಘಾಟನೆಯಾಗಿ ಒಂದರಿಂದ ಎರಡು ವರ್ಷಗಳು ಕಳೆದು ಮೇಲೆ ಸೇತುವೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಗೆ ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ.ಗ್ರಾಮದಲ್ಲಿ ಪ್ರಮುಖವಾಗಿ ಪ್ರೌಢಶಾಲೆಗೆ ಶಾಲಾ ಮಕ್ಕಳು ಇದೇ ರಸ್ತೆಯನ್ನು ಅವಲಂಬಿಸಿದ್ದು ಜೊತೆಗೆ ಹೊಸಪೇಟೆ ಹುಬ್ಬಳ್ಳಿ ರಾಷ್ಟ್ರೀಯ

ಹದಗೆಟ್ಟ ರಸ್ತೆ; ಪ್ರಯಾಣಿಕರ ಗೋಳು ಕೇಳೋರು ಯಾರು…? Read More »

error: Content is protected !!
Scroll to Top