Muttappa Doddamani

ಕೊಪ್ಪಳದಲ್ಲಿ ಅಬಕಾರಿ ನಿಯಮಗಳ ನಗ್ನ ಉಲ್ಲಂಘನೆ:

‘ಈಶ್ವರ್ ವೈನ್ಸ್’ ಸೇರಿ ಎರಡು ಮದ್ಯದ ಅಂಗಡಿಗಳಿಂದ ‘ಕಾನೂನು ಬಹಿರಂಗ ಬಲಾತ್ಕಾರ’! ರಣಬೇಟೆ ವೆಬ್ ಡೆಸ್ಕ್, ಕೊಪ್ಪಳ ಅ:07 ಜಿಲ್ಲೆಯ ಅಬಕಾರಿ ಇಲಾಖೆಯ ಮೂಗಿನಡಿಯಲ್ಲಿಯೇ ಮೂರು ಪ್ರಮುಖ ಮದ್ಯ ಮಾರಾಟ ಮಳಿಗೆಗಳು ಕಾಯ್ದೆ-ಕಾನೂನುಗಳನ್ನು ಗಂಜಿ ಕುಡಿದಷ್ಟೇ ಸಲೀಸಾಗಿ ಗಾಳಿಗೆ ತೂರಿ, ಸರ್ಕಾರದ ಬೊಕ್ಕಸಕ್ಕೆ ವಂಚಿಸಿ, ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತಿರುವ ಭೀಕರ ವಾಸ್ತವ ಈಗ ಬಯಲಾಗಿದೆ.​ಈಶ್ವರ್ ವೈನ್ಸ್ (CL-2) ಮಳಿಗೆಯು ಕೇವಲ ಮದ್ಯ ಮಾರಾಟದ ಪರವಾನಗಿ ಪಡೆದಿದ್ದರೂ (CL-2), ಪಕ್ಕದಲ್ಲಿಯೇ ಅನಧಿಕೃತ ಮದ್ಯಪಾನ ಜಗಲಿ (Drinking Piazza) ನಿರ್ಮಿಸಿ, ಅದನ್ನು […]

ಕೊಪ್ಪಳದಲ್ಲಿ ಅಬಕಾರಿ ನಿಯಮಗಳ ನಗ್ನ ಉಲ್ಲಂಘನೆ: Read More »

ಜೀವಜಲಕ್ಕೆ ಧಕ್ಕೆ: ಅಬ್ಬಿಗೇರಿ ಕೆರೆಯೇ ಅತಿಕ್ರಮಣಕಾರರ ಭ್ರಷ್ಟ ಭೋಗಕ್ಕೆ ಬಲಿ!

ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ವ್ಯಾಪ್ತಿಯಲ್ಲಿ ವಿಕೃತಿ. ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ : 07 ಜಿಲ್ಲೆಯಲ್ಲಿ ಭೂಕಬಳಿಕೆ ಮಾಫಿಯಾವು ಸರ್ಕಾರಿ ಸ್ವತ್ತಿನ ಮೇಲೆ ಎಸಗುತ್ತಿರುವ ಘೋರ ಅತಿಕ್ರಮಣದ ಕೃತ್ಯವು ಇದೀಗ ಬೆಳಕಿಗೆ ಬಂದಿದೆ. ಕೊಪ್ಪಳ ತಾಲೂಕಿನ ಇರ್ಕಲ್ಗಡ ಹೋಬಳಿಯ ಅಬ್ಬಿಗೇರಿ ಗ್ರಾಮದ ಜೀವನಾಡಿ ಎನಿಸಿದ ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಯನ್ನೇ ಅಕ್ರಮ ಬಳಕೆದಾರರು ಸಂಪೂರ್ಣವಾಗಿ ದುರಾಕ್ರಮಣ ಮಾಡಿ, ಅಲ್ಲಿ ಲಾಭದಾಯಕ ಕೃಷಿ ಚಟುವಟಿಕೆಯ ನೆಪದಲ್ಲಿ ವಿಕೃತಿ ಮೆರೆದಿದ್ದಾರೆ.​ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ನೇರ ಅಧೀನಕ್ಕೆ

ಜೀವಜಲಕ್ಕೆ ಧಕ್ಕೆ: ಅಬ್ಬಿಗೇರಿ ಕೆರೆಯೇ ಅತಿಕ್ರಮಣಕಾರರ ಭ್ರಷ್ಟ ಭೋಗಕ್ಕೆ ಬಲಿ! Read More »

ವರ್ಗಾವಣೆಗೊಂಡ ಪಿಡಿಒಗಳ ಕರ್ತವ್ಯ ಲೋಪ:

ಕೊಪ್ಪಳದಲ್ಲಿ ‘ಅಕ್ರಮ’ ಆಡಳಿತದ ಕರಿನೆರಳು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:06 ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) ಹೊರಡಿಸಿದ ಅಧಿಸೂಚನೆ ಮತ್ತು ತಿದ್ದುಪಡಿ ಆದೇಶಗಳನ್ವಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ವಿಶೇಷ ಪ್ರಕರಣ, ಕಡ್ಡಾಯ ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆಗಳನ್ನು ದಿನಾಂಕ 03-09-2025 ರಿಂದ 15-09-2025 ರ ಅವಧಿಯಲ್ಲಿ ಮಾಡಿ ಆದೇಶಗಳನ್ನು ಹೊರಡಿಸಲಾಗಿದೆ. ಈ ಆದೇಶಗಳ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವರ್ಗಾವಣೆಗೊಂಡ ಪಿಡಿಒಗಳು ಕರ್ತವ್ಯಕ್ಕೆ ಹಾಜರಾಗುವಲ್ಲಿ ಹಾಗೂ

ವರ್ಗಾವಣೆಗೊಂಡ ಪಿಡಿಒಗಳ ಕರ್ತವ್ಯ ಲೋಪ: Read More »

ಸರ್ಕಾರದ ಸೌಲಭ್ಯ ನೀಡದೆ ಕರ್ತವ್ಯ ಲೋಪ, ಭ್ರಷ್ಟಾಚಾರ ಆರೋಪ

ಉಪ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು ದಾಖಲು ರಣಬೇಟೆ ನ್ಯೂಸ್ ಕೊಪ್ಪಳ ಕೊಪ್ಪಳ.ಸೆ.18: ಜಿಲ್ಲೆಯ ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದ ಸೌಲಭ್ಯ ನೀಡದೇ ಕರ್ತವ್ಯ ಲೋಪ ಎಸಗುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ದೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದು, ಈ ಬಗ್ಗೆ ಕೂಲಂಕುಷವಾದ ತನಿಖೆಯ ಅವಶ್ಯಕತೆ ಇರುವುದರಿಂದ ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳ ಮೇಲೆ ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಸ್ವಯಂಪ್ರೇರಿತ

ಸರ್ಕಾರದ ಸೌಲಭ್ಯ ನೀಡದೆ ಕರ್ತವ್ಯ ಲೋಪ, ಭ್ರಷ್ಟಾಚಾರ ಆರೋಪ Read More »

15 ಗ್ರಾ.ಪಂ. ಅಧಿಕಾರಿಗಳ ವಿರುದ್ಧ ತನಿಖೆಗೆ ಜಿ.ಪಂ. ಸಿಇಓ ಆದೇಶ

ಕುಕನೂರು ತಾಲೂಕು ಗ್ರಾ.ಪಂ. ವ್ಯಾಪ್ತಿಯ ಅಧಿಕಾರಿಗಳ ಎದೆಯಲ್ಲಿ ಢವಢವ ರಣಬೇಟೆ ನ್ಯೂಸ್ಕೊಪ್ಪಳ, ಸೆ.10: ಜಿಲ್ಲೆಯ ಕುಕನೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ 2020ರಿಂದ 2024ರ ಡಿಸೆಂಬರ್ 10ರ ವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಅಡಿಯಲ್ಲಿ ವಸೂಲಾತಿ ಮತ್ತು ಆಕ್ಷೇಪಣೆ ಮೊತ್ತವನ್ನು ಸರಕಾರಕ್ಕೆ ಜಮಾ ಮತ್ತು ತಿರುವಳಿ ಮಾಡದೇ ಸರಕಾರಕ್ಕೆ ವಂಚಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಇನ್ನಿತರ ಸಿಬ್ಬಂದಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ

15 ಗ್ರಾ.ಪಂ. ಅಧಿಕಾರಿಗಳ ವಿರುದ್ಧ ತನಿಖೆಗೆ ಜಿ.ಪಂ. ಸಿಇಓ ಆದೇಶ Read More »

ಪೊಲೀಸ್ ನೂತನ ವಾಹನಕ್ಕೆ ಸಂಸದ ರಾಜಶೇಖರ್ ಹಿಟ್ನಾಳ್ ಚಾಲನೆ

ರಣಬೇಟೆ ನ್ಯೂಸ್ ಕೊಪ್ಪಳ.ಸೆ.04: ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣದಲ್ಲಿ ಸೋಮವಾರದಂದು ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಪೊಲೀಸ್ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಸ್‌ಗೆ ಚಾಲನೆ ನೀಡಿದ ಬಳಿಕ ಸಂಸದರು ಸ್ವತಃ ತಾವೇ ಬಸ್ ಚಲಾಯಿಸಿ, ಬಸ್ಸಿನ ಸೌಕರ್ಯದ ಕುರಿತು ಪರಿಶೀಲನೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್. ಅರಸಿದ್ದಿ ಅವರು ಮಾತನಾಡಿ, ಬಸಾಪೂರ ಗ್ರಾಮದ ಹತ್ತಿರ

ಪೊಲೀಸ್ ನೂತನ ವಾಹನಕ್ಕೆ ಸಂಸದ ರಾಜಶೇಖರ್ ಹಿಟ್ನಾಳ್ ಚಾಲನೆ Read More »

ಪ್ರತಿಷ್ಠಿತ ಮಾತೃಭೂಮಿ ರಾಜ್ಯ ಪ್ರಶಸ್ತಿಗೆ ಮಹ್ಮದ್ ಆಸೀಫ್ ಆಯ್ಕೆ

ರಣಬೇಟೆ ನ್ಯೂಸ್ ಕೊಪ್ಪಳ.ಸೆ.04: ಕರ್ನಾಟಕ ಕಂಡ ಅದ್ಭುತ ಮತ್ತು ರಾಷ್ಟ್ರಮಟ್ಟದ ಖ್ಯಾತಿ ಗಳಿಸಿರುವ ಬೆಂಗಳೂರಿನ ಲಗ್ಗೆರೆಯ ಮಾತೃಭೂಮಿ ಯುವಕರ ಸಂಘ ತನ್ನ ಬೆಳ್ಳಿ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಗಂಗಾವತಿಯ ಯುವ ನಾಯಕ, ಕಾಂಗ್ರೆಸ್ ಪಕ್ಷದ ರಾಜ್ಯ ಯುವ ಕಾರ್ಯದರ್ಶಿ ಮಹಮ್ಮದ್ ಆಸೀಫ್ ಹುಸೇನ್ ಅವರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿಯನ್ನು ಸಮಾಜ ಸೇವಾ ಕ್ಷೇತ್ರದ ವಿಭಾಗದಿಂದ ಆಯ್ಕೆ ಮಾಡಲಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ಬಾಲಾಜಿ ತಿಳಿಸಿದ್ದಾರೆ.ಮಾತೃಭೂಮಿ ಯುವಕ ಸಂಘವು ಸುಮಾರು ೩೦ ವರ್ಷಗಳಿಂದ

ಪ್ರತಿಷ್ಠಿತ ಮಾತೃಭೂಮಿ ರಾಜ್ಯ ಪ್ರಶಸ್ತಿಗೆ ಮಹ್ಮದ್ ಆಸೀಫ್ ಆಯ್ಕೆ Read More »

ಸಂಗೀತ ಲೋಕದ ಭರವಸೆಯ ಬಾಲಗಾಯಕ ಸಿದ್ದಲಿಂಗಸ್ವಾಮಿ

ರಣಬೇಟೆ ನ್ಯೂಸ್ ಕೊಪ್ಪಳ.ಸೆ.4:ಪ್ರತಿಭೆ ಎನ್ನುವುದು ಯಾರೊಬ್ಬರ ಸೊತ್ತಲ್ಲ, ಕಲೆ ಎಲ್ಲರಲ್ಲೂ ಅಡಗಿರುತ್ತದೆ. ಅಪ್ಪಿಕೊಳ್ಳುವುದು ಕೆಲವರನ್ನು ಮಾತ್ರ. ಕಲೆ ಮತ್ತು ಸಂಗೀತ ಎನ್ನುವುದು ದೈವದತ್ತವಾದ ಕೊಡುಗೆ. ಕೆಲವೊಮ್ಮೆ ರಕ್ತಗತವಾಗಿಯೂ ಬಂದಿರುತ್ತದೆ. ಹೀಗೆ ತಾಯಿಯ ಸಂಗೀತ ಆಸಕ್ತಿ ಮತ್ತು ಗಾಯನ ಕಲೆಯಿಂದ ಪ್ರೇರೆಪಿತಗೊಂಡ ಸಿದ್ದಲಿಂಗ ಸ್ವಾಮಿ ಸಂಗೀತ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯೊಂದಿಗೆ ವಿದ್ಯಾಭ್ಯಾಸದ ಜೊತೆಗೆ ಸಂಗೀತ ಅಭ್ಯಾಸ ಮಾಡುತ್ತಾ ಅವಕಾಶ ಒದಗಿದಾಗಲೆಲ್ಲಾ ಸಂಗೀತ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದ್ದಾನೆ ಈ ಬಾಲಕ.ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಹಿರೇಹಡಗಲಿಯ ಚನ್ನವೀರಯ್ಯ

ಸಂಗೀತ ಲೋಕದ ಭರವಸೆಯ ಬಾಲಗಾಯಕ ಸಿದ್ದಲಿಂಗಸ್ವಾಮಿ Read More »

ಆಹಾರ ನಿಗಮದ ಉಗ್ರಾಣದಲ್ಲಿ ನಡೆದ ಅಂದಾದುಂದಿಯ ಕಿಂಗ್ ಪಿನ್ ಯಾರು…?

ಅಷ್ಟಕ್ಕೂ ಈ ಜುಬೇರ ಯಾರು..? ಆತನಿಗೆ ಸರ್ಕಾರಿ ಗೋದಾಮಿನಲ್ಲೇನು ಕೆಲಸ…? ರಣಬೇಟೆ ನ್ಯೂಸ್ಗಂಗಾವತಿ, ಆ.31: ಕಳೆದ ಆರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಲೆದಂಡವಾಗಿದೆ. ಸದರಿ ಪ್ರಕರಣದ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿ ತನಿಖಾ ತಂಡ ರಚಿಸಿ ಆದೇಶ ಹೊರಡಿಸಲಾಗಿದೆ. ಸದ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಹಾಗೂ ಅಪರ

ಆಹಾರ ನಿಗಮದ ಉಗ್ರಾಣದಲ್ಲಿ ನಡೆದ ಅಂದಾದುಂದಿಯ ಕಿಂಗ್ ಪಿನ್ ಯಾರು…? Read More »

ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್

ಮತ್ತೆ ಮಾತೃ ಇಲಾಖೆಗೆ ವರ್ಗಾವಣೆಯಾದ ಪಡಿತರ ದಂಧೆಯ ಬಿಗ್‍ಬಾಸ್ ಬಿರಾದಾರ್ ರಣಬೇಟೆ ನ್ಯೂಸ್ ಗಂಗಾವತಿ, ಆ.30: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿರುವ ಬಗ್ಗೆ ರಣಬೇಟೆ ವೆಬ್‍ನ್ಯೂಸ್ ವಿಸ್ತೃತ ವರದಿ ಮಾಡಿತ್ತು. ಈ ವರದಿಯನ್ನು

ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್ Read More »

error: Content is protected !!
Scroll to Top